ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಯಶಸ್ವಿ ಪ್ರವಾಸದ ನಂತರ ದೇವರಿಗೆ ಮುಡಿ ಕೊಟ್ಟ ಟಿ ನಟರಾಜನ್

Natarajan completes offering to god after Australia tour success

ಟೀಮ್ ಇಂಡಿಯಾದ ವೇಗಿ ಟಿ ನಟರಾಜನ್ ಕಳೆದ ಆಸ್ಟ್ರೇಲಿಯಾ ವಿರುದ್ಧದ ಪ್ರವಾಸದಲ್ಲಿ ಮೂರೂ ಮಾದರಿಯಲ್ಲಿ ತಂಡಕ್ಕೆ ಪದಾರ್ಪಣೆ ಮಾಡಿದ್ದಲ್ಲದೆ ಅದ್ಭುತ ಪ್ರದರ್ಶನ ನೀಡಿದ್ದರು. ಸಿಕ್ಕ ಅವಕಾಶವನ್ನು ಅದ್ಭುವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾದ ನಟರಾಜನ್ ತಮ್ಮ ಚೊಚ್ಚಲ ಪ್ರವಾಸವನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ.

ಟಿ ನಟರಾಜನ್ ಅದ್ದೂರಿ ಸ್ವಾಗತವನ್ನು ಪಡೆದುಕೊಂಡು ತವರಿಗೆ ಮರಳಿ ಕುಟುಂಬವನ್ನು ಸೇರಿಕೊಂಡಿದ್ದು ಕುಟುಂಬದ ಜೊತೆಗೆ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಟಿ ನಟರಾಜನ್ ದೇವಾಲಯಕ್ಕೆ ತಮ್ಮ ಮುಡಿಯನ್ನು ಅರ್ಪಿಸಿ ಹರಕೆ ತೀರಿಸಿದ್ದಾರೆ.

ICC Test Rankings: ಟಾಪ್ 10ನಲ್ಲಿ ಮೂವರು ಭಾರತೀಯರಿಗೆ ಸ್ಥಾನICC Test Rankings: ಟಾಪ್ 10ನಲ್ಲಿ ಮೂವರು ಭಾರತೀಯರಿಗೆ ಸ್ಥಾನ

ಹರಕೆ ತೀರಿಸಿದ ನಟರಾಜನ್

ಟಿ ನಟರಾಜನ್ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿರುವ ಪಳನಿಯ ಮುರುಗನ್ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ನಟರಾಜನ್ ತಮ್ಮ ತಲೆಕೂದಲನ್ನು ಹರಕೆ ರೂಪದಲ್ಲಿ ನೀಡಿದ್ದು ಬಳಿಕ ನಟರಾಜನ್ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಟ್ವಿಟ್ಟರ್‌ನಲ್ಲಿ ಟಿ ನಟರಾಜನ್ ತಮ್ಮ ಫೋಟೋವನ್ನು ಹಂಚಿಕೊಂಡಿದ್ದು ಅಭಿಮಾನಿಗಳು ನಟರಾಜನ್‌ಗೆ ಶುಭಹಾರೈಸುತ್ತಿದ್ದಾರೆ.

ಆಸಿಸ್‌ನಲ್ಲಿ ನಟರಾಜನ್ ಮಿಂಚು

ಆಸಿಸ್‌ನಲ್ಲಿ ನಟರಾಜನ್ ಮಿಂಚು

ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಟರಾಜನ್ ಟೀಮ್ ಇಂಡಿಯಾ ಪರವಾಗಿ ಶ್ರೇಷ್ಠ ಪ್ರದರ್ಶನ ನೀಡಿ ಮಿಂಚಿದ್ದರು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತಮ್ಮ ಮೇಲಿಟ್ಟಿದ್ದ ಭರವಸೆಗೆ ಪೂರಕವಾಗಿ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದ ನಟರಾಜನ್ ಟೆಸ್ಟ್ ಕ್ರಿಕೆಟ್‌ನಲ್ಲೂ ಸಿಕ್ಕ ಒಂದು ಅವಕಾಶವನ್ನು ಸಮರ್ಥವಾಗಿ ನಿಭಾಯಿಸಿದ್ದರು.

ತವರಿನಲ್ಲೂ ತಂಡವನ್ನು ಪ್ರತಿನಿಧಿಸಲು ಸಜ್ಜು

ತವರಿನಲ್ಲೂ ತಂಡವನ್ನು ಪ್ರತಿನಿಧಿಸಲು ಸಜ್ಜು

ಸದ್ಯ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಟೀಮ್ ಇಂಡಿಯಾ ತಂಡ ಪ್ರಕಟವಾಗಿದೆ. ಟೆಸ್ಟ್ ತಂಡಕ್ಕೆ ಜಸ್ಪ್ರಿತ್ ಬೂಮ್ರಾ ಇಶಾಂತ್ ಶರ್ಮಾ ಅವರಂತ ಅನುಭವಿಗಳು ಮರಳಿದ್ದು ನಟರಾಜನ್‌ಗೆ ತಂಡದಲ್ಲಿ ಸ್ಥಾನ ದೊರೆತಿಲ್ಲ. ಆದರೆ ಸೀಮಿತ ಓವರ್‌ಗಳ ಸರಣಿಗೆ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.

Story first published: Sunday, January 31, 2021, 18:32 [IST]
Other articles published on Jan 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X