ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಷ್ಟ್ರೀಯ ತಂಡಕ್ಕೆ ಕರೆ ನನ್ನನ್ನು ಅಚ್ಚರಿಗೊಳಿಸಿತು: ನಾಗ್ವಾಸ್ವಾಲಾ

National Call Surprised me, says Arzan Nagwaswalla

ನವದೆಹಲಿ: ಗುಜರಾತ್‌ ವೇಗಿ ಅರ್ಝನ್ ನಾಗ್ವಾಸ್ವಾಲಾ ಮುಂಬರಲಿರುವ ಇಂಗ್ಲೆಂಡ್ ಪ್ರವಾಸಕ್ಕೆ ಟೀಮ್ ಇಂಡಿಯಾದಲ್ಲಿ ಮೀಸಲು ಆಟಗಾರರಾಗಿ ಹೆಸರಿಸಲ್ಪಟ್ಟಿದ್ದಾರೆ. ಭುವನೇಶ್ವರ್ ಕುಮಾರ್ ನಂತ ಪ್ರಮುಖ ಬೌಲರ್‌ಗಳ ಹೆಸರೇ ತಂಡದಲ್ಲಿಲ್ಲದಾಗ ಹೊಸ ಆಟಗಾರನ ಹೆಸರು ಕ್ರಿಕೆಟ್ ಅಭಿಮಾನಿಗಳನ್ನು ಅಚ್ಚರಿಗೀಡು ಮಾಡಿತ್ತು.

ಭಾರತ-ನ್ಯೂಜಿಲೆಂಡ್ ನಡುವಿನ WTC final ದುಬಾರಿ ಟಿಕೆಟ್ ಬೆಲೆಯೆಷ್ಟು ಗೊತ್ತಾ?!ಭಾರತ-ನ್ಯೂಜಿಲೆಂಡ್ ನಡುವಿನ WTC final ದುಬಾರಿ ಟಿಕೆಟ್ ಬೆಲೆಯೆಷ್ಟು ಗೊತ್ತಾ?!

ಇಂಗ್ಲೆಂಡ್‌ಗೆ ಭಾರತದ ಸುದೀರ್ಘ ಪ್ರವಾಸಕ್ಕಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅರ್ಝನ್ ನಾಗ್ವಾಸ್ವಾಲ ಹೆಸರನ್ನು ಪ್ರಕಟಿಸಿದ ಬಳಿಕ ಒಂದು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿಕೊಂಡಿತ್ತು. ಇದರಲ್ಲಿ ಅರ್ಝನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಪಡೆದಿದ್ದನ್ನೂ ತಿಳಿಸಿತ್ತು. ಈ ಪೋಸ್ಟ್‌ ಕೂಡ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿತ್ತು.

2018ರಲ್ಲಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದ ನಾಗ್ವಾಸ್ವಾಲ್ಲ ಅಲ್ಲಿಂದ ಬೆಳೆಯಲಾರಂಭಿಸಿದ್ದರು. ವಿಶೇಷವೆಂದರೆ 1975ರ ಬಳಿಕ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುವ ಮೊದಲ ಪಾರ್ಸಿ ಆಟಗಾರ ನಾಗ್ವಾಸ್ವಾಲಾ. ಅದಕ್ಕೂ ಮುನ್ನ ಮಾಜಿ ಬ್ಯಾಟ್ಸ್‌ಮನ್‌-ವಿಕೆಟ್ ಕೀಪರ್ ಫಾರುಕ್ ಇಂಜಿನಿಯರ್ ಭಾರತ ತಂಡವನ್ನು ಪ್ರತಿನಿಧಿಸಿದ್ದ ಕೊನೇ ಪಾರ್ಸಿ ಆಟಗಾರನಾಗಿದ್ದರು.

ಮ್ಯಾನ್ ಯುನೈಟೆಡ್ ಸೋಲಿಸಿ ಚೊಚ್ಚಲ ಯುರೋಪಾ ಲೀಗ್ ಪ್ರಶಸ್ತಿ ಗೆದ್ದ ವಿಲ್ಲಾರ್ರಿಯಲ್ಮ್ಯಾನ್ ಯುನೈಟೆಡ್ ಸೋಲಿಸಿ ಚೊಚ್ಚಲ ಯುರೋಪಾ ಲೀಗ್ ಪ್ರಶಸ್ತಿ ಗೆದ್ದ ವಿಲ್ಲಾರ್ರಿಯಲ್

'ನಾನು ಪ್ರಾಮಾಣಿಕವಾಗಿ ಹೇಳೋದಾದ್ರೆ ನನಗೆ ರಾಷ್ಟ್ರೀಯ ತಂಡಕ್ಕೆ ಕರೆ ನೀಡಿದ್ದು ಅಚ್ಚರಿ ತಂದಿತ್ತು. ಐಪಿಎಲ್ ಅಮಾನತಾದಾಗ ನಾನು ಮನೆಗೆ ವಾಪಸ್ಸಾಗುತ್ತಿದ್ದೆ. ದಾರಿಯಲ್ಲಿ ನನಗೆ ಗುಜರಾತ್ ಕ್ರಿಕೆಟ್ ಅಸೋಸಿಯೇಶನ್‌ನ ಕರೆ ಬಂದಿತು. ಅವರಿಂದ ನನಗೆ ಸುದ್ದಿ ತಿಳಿಯಿತು,' ಎಂದು ನಾಗ್ವಾಸ್ವಾಲಾ ಹೇಳಿದ್ದಾರೆ.

Story first published: Thursday, May 27, 2021, 20:21 [IST]
Other articles published on May 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X