ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರೀಡಾ ಪ್ರಶಸ್ತಿ ಸಮಾರಂಭಕ್ಕೆ ರೋಹಿತ್-ಇಶಾಂತ್ ಇಲ್ಲ, ಮೂವರಿಗೆ ಕೊರೊನಾ

National Sports Awards: Rohit Sharma, Ishant Sharma to miss ceremony

ನವದೆಹಲಿ: ಭಾರತದ ಅತ್ಯುನ್ನತ ಕ್ರೀಡಾ ಪುರಸ್ಕಾರಗಳಾದ ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿ ಗೆದ್ದಿರುವ ಕ್ರಿಕೆಟಿಗರಾದ ರೋಹಿತ್ ಶರ್ಮಾ ಮತ್ತು ಇಶಾಂತ್ ಶರ್ಮಾ ರಾಷ್ಟ್ರೀಯ ಕ್ರೀಡಾ ಪುರಸ್ಕಾರ ಸಮಾರಂಭವನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ನಿಮಿತ್ತ ಸದ್ಯ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ರೋಹಿತ್ ಮತ್ತು ಇಶಾಂತ್ ಆಗಸ್ಟ್ 29ರಂದು ನಡೆಯುವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ.

ಐಪಿಎಲ್ 2020: ಸಿಎಸ್‌ಕೆಯ ಓರ್ವ ಆಟಗಾರ ಹಾಗೂ 12 ಸಿಬ್ಬಂದಿಗಳಿಗೆ ಕೊರೊನಾ ವೈರಸ್ ದೃಢ!ಐಪಿಎಲ್ 2020: ಸಿಎಸ್‌ಕೆಯ ಓರ್ವ ಆಟಗಾರ ಹಾಗೂ 12 ಸಿಬ್ಬಂದಿಗಳಿಗೆ ಕೊರೊನಾ ವೈರಸ್ ದೃಢ!

ಕೊರೊನಾವೈರಸ್ ಸೋಂಕಿನ ಕಾರಣ ಈ ಬಾರಿ ರಾಷ್ಟ್ರೀಯ ಕ್ರೀಡಾ ಪುರಸ್ಕಾರ ವಿತರಣಾ ಸಮಾರಂಭ ವರ್ಚ್ಯುಯಲಿಯಾಗಿ (ಆನ್‌ಲೈನ್ ಮುಖಾಂತರ) ನಡೆಯಲಿದೆ. ಆದರೂ ದೇಶದಿಂದ ಹೊರಗಿರುವವರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ.

ಸಿಕ್ಸ್ ಚಚ್ಚಿ ತನ್ನ ಕಾರಿನ ಗಾಜನ್ನೇ ಪುಡಿ ಪುಡಿ ಮಾಡಿದ ಕೆವಿನ್ ಓಬ್ರಿಯನ್!ಸಿಕ್ಸ್ ಚಚ್ಚಿ ತನ್ನ ಕಾರಿನ ಗಾಜನ್ನೇ ಪುಡಿ ಪುಡಿ ಮಾಡಿದ ಕೆವಿನ್ ಓಬ್ರಿಯನ್!

ಖೇಲ್ ರತ್ನ ಗೆದ್ದಿರುವ ರೋಹಿತ್ ಶರ್ಮಾ ಮತ್ತು ಅರ್ಜುನ ಗೆದ್ದಿರುವ ಇಶಾಂತ್ ಶರ್ಮಾ ಮುಂದಿನ ದಿನಗಳಲ್ಲಿ ತಮ್ಮ ಟ್ರೋಫಿ ಸ್ವೀಕರಿಸಲಿದ್ದಾರೆ.

ಖೇಲ್ ರತ್ನಕ್ಕೆ ಐವರು

ಖೇಲ್ ರತ್ನಕ್ಕೆ ಐವರು

ಖೇಲ್ ರತ್ನ ವಿಜೇತರು ಭಾರತದ ಕ್ರೀಡಾ ಪ್ರಾಧಿಕಾರ ನಿಗದಿಪಡಿಸಿದ 9 ಬೇರೆ ಬೇರೆ ತಾಣಗಳಲ್ಲಿದ್ದು ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಖೇಲ್ ರತ್ನಕ್ಕೆ ರೋಹಿತ್ ಸೇರಿ ಐವರನ್ನು ಹೆಸರಿಸಲಾಗಿತ್ತು. ಇದರಲ್ಲಿ ರೋಹಿತ್ ಬಿಟ್ಟು ಉಳಿದವರು ಪಾಲ್ಗೊಳ್ಳಲಿದ್ದಾರೆ.

ಬೇರೆ ಬೇರೆ ತಾಣಗಳಲ್ಲಿ ಭಾಗಿ

ಬೇರೆ ಬೇರೆ ತಾಣಗಳಲ್ಲಿ ಭಾಗಿ

ಖೇಲ್ ರತ್ನ ವಿಜೇತರಲ್ಲಿ ರಸ್ಲರ್ ವಿನೇಶ್ ಫೋಗಟ್ ಸೋನೆಪತ್‌ನಲ್ಲಿ, ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಮತ್ತು ಪ್ಯಾರಾ ಅಥ್ಲೀಟ್ ಮರಿಯಪ್ಪನ್ ತಂಗವೇಲು ಬೆಂಗಳೂರಿನ ಸಮಾರಂಭದಲ್ಲಿ, ಕಾಮನ್ವೆಲ್ತ್ ಟೇಬಲ್ ಟೆನಿಸ್ ಬಂಗಾರ ವಿಜೇತೆ ಮಣಿಕಾ ಬಾತ್ರಾ ಪೂಣೆಯಲ್ಲಿದ್ದು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಮೂವರಿಗೆ ಕೊರೊನಾ ಸೋಂಕು

ಮೂವರಿಗೆ ಕೊರೊನಾ ಸೋಂಕು

ಸಾಯ್ ನಿಗದಿಪಡಿಸಿರುವ 9 ತಾಣಗಳೆಂದರೆ ದೆಹಲಿ, ಮುಂಬೈ, ಕೋಲ್ಕತ್ತಾ, ಚಂಡೀಗಢ, ಬೆಂಗಳೂರು ಪುಣೆ, ಸೋನೆಪತ್, ಹೈದರಾಬಾದ್, ಭೋಪಾಲ್. ಪ್ರಶಸ್ತಿ ವಿಜೇತರು ತಮ್ಮ ತವರೂರಿಂದ ನಿಗದಿ ಪಡಿಸಿದ ತಾಣಗಳಿಗೆ ತೆರಳಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ವಿಜೇತರಲ್ಲಿ ಹೆಚ್ಚಿನವರು ಕೋವಿಡ್ 19 ಪರೀಕ್ಷೆಗೆ ಒಳಗಾಗಿದ್ದು, ಇದರಲ್ಲಿ ಮೂವರಿಗೆ ಕೊರೊನಾ ಪಾಸಿಟಿವ್ ಇರುವುದಾಗಿ ವರದಿಯಾಗಿದೆ.

ಒಟ್ಟು 9 ಮಂದಿ ಅನುಪಸ್ಥಿತಿ

ಒಟ್ಟು 9 ಮಂದಿ ಅನುಪಸ್ಥಿತಿ

'ಪ್ರಶಸ್ತಿ ವಿಜೇತರದಲ್ಲಿ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅವರು ಸಮಾರಂಭದಲ್ಲಿ ಭಾಗವಹಿಸುತ್ತಿಲ್ಲ. ಕ್ವಾರಂಟೈನ್, ಕೊರೊನಾ ಪಾಸಿಟಿವ್, ಆರೋಗ್ಯ ಸರಿಯಿಲ್ಲದಿರುವುದು ಮತ್ತು ಬೇರೆ ದೇಶದಲ್ಲಿರುವುದು ಹೀಗೆ ಬೇರೆ ಬೇರೆ ಕಾರಣಗಳಿಂದ ಒಟ್ಟಾರೆ 9 ಮಂದಿ ವಿಜೇತರು ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ,' ಎಂದು ಸಾಯ್ (ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ) ಮಾಹಿತಿ ನೀಡಿದೆ.

Story first published: Saturday, August 29, 2020, 10:03 [IST]
Other articles published on Aug 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X