ಒಡಿಐ ಕ್ರಿಕೆಟ್‌ನಲ್ಲಿ ಯುವರಾಜ್‌ಗೆ ಕೀರ್ತಿ ತಂದ 5 ಪಂದ್ಯಗಳಿವು!

Natwest Trophy to 2011 WC: 5 times Yuvraj rocked ODI cricket

ಬೆಂಗಳೂರು, ಜೂನ್‌ 10: ಭಾರತಕ್ಕೆ 2007ರ ಟಿ20 ವಿಶ್ವಕಪ್‌ ಮತ್ತು 2011ರ ಏಕದಿನ ಕ್ರಿಕೆಟ್‌ ವಿಶ್ವಕಪ್ ಗೆದ್ದುಕೊಟ್ಟ ಚಾಂಪಿಯನ್‌ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಸೋಮವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

17 ವರ್ಷಗಳ ಸುದೀರ್ಘಾವಧಿಯ ವೃತ್ತಿ ಬದುಕಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌, ಒಡಿಐ ಕ್ರಿಕೆಟ್‌ನಲ್ಲಿ ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ದಾದಾ, ತೆಂಡೂಲ್ಕರ್‌ ಸಾಲಿಗೆ ಸೇರಿದ ಶತಕ ವೀರ ಶಿಖರ್‌ ಧವನ್‌!

ಭಾರತ ತಂಡದ ಪರ 34 ಏಕದಿನ ಕ್ರಿಕೆಟ್‌ ಪಂದ್ಯಗಳನ್ನು ಆಡಿರುವ ಯುವರಾಜ್‌ ಸಿಂಗ್‌ 8701 ರನ್‌ಗಳನ್ನು ಚಚ್ಚಿದ್ದಾರೆ. ಈ ಮೂಲಕ ಭಾರತದ ಪರ ಒಡಿಐನಲ್ಲಿ 7ನೇ ಗರಿಷ್ಠ ಸ್ಕೋರರ್‌ ಎನಿಸಿಕೊಂಡಿದ್ದಾರೆ. ತಮ್ಮ ವೃತ್ತಿ ಬದುಕಿನ ಉತ್ತುಂಗದಲ್ಲಿ ಅದ್ಭುತ ಫೀಲ್ಡರ್‌ ಆಗಿದ್ದ ಯುವರಾಜ್‌ ತಮ್ಮ ಎಡಗೈ ಸ್ಪಿನ್‌ ಬೌಲಿಂಗ್‌ ಮೂಲಕವೂ ಮಿಂಚಿದ್ದರು.

ಆಸೀಸ್‌ ವಿರುದ್ಧ ವಿಶ್ವ ದಾಖಲೆ ಬರೆದ ಗಬ್ಬರ್‌-ಹಿಟ್‌ಮ್ಯಾನ್‌ ಜೋಡಿ!

ಈಗಲೂ 2007ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಟಿ20 ಕ್ರಿಕೆಟ್‌ ವಿಶ್ವಕಪ್‌ ನೆನಪಿಸಿಕೊಂಡರೆ ಎಲ್ಲರ ಕಣ್ಣೆದುರು ಬರುವುದು ಇಂಗ್ಲೆಂಡ್‌ನ ವೇಗಿ ಸ್ಟುವರ್ಟ್‌ ಬ್ರಾಡ್‌ಗೆ ಯುವರಾಜ್‌ ಸಿಂಗ್‌ 6 ಎಸೆತಗಳಲ್ಲಿ 6 ಸಿಕ್ಸರ್‌ಗಳನ್ನು ಸಿಡಿಸಿರುವುದು. ಇನ್ನು ಕ್ಯಾನ್ಸರ್‌ ನೋವಿನಿಂದ ಬಳಲಿದ್ದರೂ 2011ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಟೂರ್ನಿ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿ ಭಾರತಕ್ಕೆ ಟ್ರೋಫಿ ಗೆದ್ದು ಕೊಟ್ಟಿದ್ದ ಚಾಂಪಿಯನ್‌ ಯುವರಾಜ್‌, ಕ್ರಿಕೆಟ್‌ ಜಗತ್ತಿನಲ್ಲಿ ತಮ್ಮದೇ ಅಭಿಮಾನಿಗಳ ಬಳಗ ಹೊಂದಿದ್ದಾರೆ.

ಧೋನಿ ಬೆಂಬಲಿಸಿ 'ಬಲಿದಾನ್‌ ಬ್ಯಾಡ್ಜ್‌' ಪ್ರದರ್ಶಿಸಿದ ಅಭಿಮಾನಿಗಳು!

ಯುವರಾಜ್‌ ಅವರ ನಿವೃತ್ತಿ ಸಂದರ್ಭದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಯುವಿ ತಮ್ಮ ಛಾಪನ್ನು ಅಚ್ಚಳಿಯದಂತೆ ಉಳಿಸಿದ 5 ಪಂದ್ಯಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.

1. 2017ರಲ್ಲಿ ಇಂಗ್ಲೆಂಡ್‌ ವಿರುದ್ಧ 127 ಎಸೆತಗಳಲ್ಲಿ 150 ರನ್‌

1. 2017ರಲ್ಲಿ ಇಂಗ್ಲೆಂಡ್‌ ವಿರುದ್ಧ 127 ಎಸೆತಗಳಲ್ಲಿ 150 ರನ್‌

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಕೆಲ ಕಾಲ ದೂರ ಉಳಿದಿದ್ದ ಯುವರಾಜ್‌ ಸಿಂಗ್‌ ಟೀಮ್‌ ಇಂಡಿಯಾಗೆ ಭರ್ಜರಿಯಾಗಿ ಕಮ್‌ಬ್ಯಾಕ್‌ ಮಾಡಿದ ಪಂದ್ಯವದು. 2013ರ ಡಿಸೆಂಬರ್‌ ಬಳಿಕ ಯುವರಾಜ್‌ ಆಡಿದ ಮೊದಲ ಏಕದಿನ ಕ್ರಿಕೆಟ್‌ ಸರಣಿ ಇದು. 2017ರ ಜನವರಿ 19ರಂದು ನಡೆದ ಇಂಗ್ಲೆಂಡ್‌ ವಿರುದ್ಧದ ಈ ಪಂದ್ಯದಲ್ಲಿ ಅಕ್ಷರಶಃ ವೈಭವ ಮೆರೆದ ಯುವಿ, 127 ಎಸೆತಗಳಲ್ಲಿ 150 ರನ್‌ಗಳನ್ನು ಚಚ್ಚಿದ್ದರು. ಅಲ್ಲದೆ ಎಂ.ಎಸ್‌ ಧೋನಿ ಜೊತೆಗೂಡಿ 256 ರನ್‌ಗಳ ಸದ್ಭುತ ಜೊತೆಯಾಟವನ್ನೂ ಆಡಿದರು. ಧೋನಿಗೂ ನಾಯಕತ್ವ ತ್ಯಜಿಸಿದ ಬಳಿಕ ದಾಖಲಿಸಿದ ಮೊದಲ ಶತಕವಿದು. ಇದು ಏಕದಿನ ಕ್ರಿಕೆಟ್‌ನಲ್ಲಿ ಯುವಿ ಅವರ ವೈಯಕ್ತಿಕ ಗರಿಷ್ಠ ಮೊತ್ತ ಕೂಡ.

3. 2002ರಲ್ಲಿ ಇಂಗ್ಲೆಂಡ್‌ ವಿರುದ್ಧ 63 ಎಸೆತಗಳಲ್ಲಿ 69 ರನ್‌

3. 2002ರಲ್ಲಿ ಇಂಗ್ಲೆಂಡ್‌ ವಿರುದ್ಧ 63 ಎಸೆತಗಳಲ್ಲಿ 69 ರನ್‌

2002ರ ನ್ಯಾಟ್‌ವೆಸ್ಟ್‌ ಸರಣಿ ನೆನೆದರೆ ಮೊಹಮ್ಮದ್‌ ಕೈಫ್‌, ಯುವರಾಜ್‌ ಸಿಂಗ್‌ ಹಾಗೂ ಶರ್ಟ್‌ ಬಿಚ್ಚಿ ಸಂಭ್ರಮಿಸಿದ ಸೌರವ್‌ ಗಂಗೂಲಿ ನೆನಪಿಗೆ ಬರುತ್ತಾರೆ. ಸರಣಿಯಲ್ಲಿ ಟೀಮ್‌ ಇಂಡಿಯಾ ಪರ ಇಬ್ಬರು ಯುವ ಪ್ರತಿಭೆಗಳ ಉದಯವಾಗಿತ್ತು. 2002ರ ಜುಲೈ 13ರಂದು ನಡೆದ ಫೈನಲ್‌ ಪಂದ್ಯದಲ್ಲಿ 21 ವರ್ಷದ ಯುವ ಪ್ರತಿಭೆ ಯುವರಾಜ್‌ ಪಂದ್ಯದಲ್ಲಿ 63 ಎಸೆತಗಳಲ್ಲಿ 69 ರನ್‌ಗಳನ್ನು ಸಿಡಿಸಿ ಅಬ್ಬರಿಸಿದ್ದರು. ಪಂದ್ಯದಲ್ಲಿ 326 ರನ್‌ಗಳ ಬೃಹತ್‌ ಮೊತ್ತವನ್ನು ಬೆನ್ನತ್ತಿದ ಭಾರತ ತಂಡಕ್ಕೆ ನಾಯಕ ಸೌರವ್‌ ಗಂಗೂಲಿ ಮತ್ತು ವೀರೇಂದ್ರ ಸೆಹ್ವಾಗ್‌ ಮೊದಲ ವಿಕೆಟ್‌ಗೆ 106 ರನ್‌ಗಳ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದ್ದರು. ಆದರೆ, ಈ ಹಂತದಲ್ಲಿ ಸತತ ನಾಲ್ಕು ವಿಕೆಟ್‌ ಕಳೆದುಕೊಂಡ ಭಾರತ ತಂಡ ಸೋಲಿನ ದವಡೆಗೆ ಸಿಲುಕಿತ್ತು. ಬಳಿಕ ಭಾರತ ತಂಡವನ್ನು ಗುರಿ ಮುಟ್ಟಿಸುವ ಜವಾಬ್ದಾರಿ ಹೊತ್ತ ಮೊಹಮ್ಮದ್‌ ಕೈಫ್‌ ಮತ್ತು ಯುವಿ 121 ರನ್‌ಗಳ ಸಮೋಘ ಜೊತೆಯಾಟ ನಡೆಸಿದ್ದರು. ತಂಡವನ್ನು ದಡ ಮುಟ್ಟಿಸುವ ಪ್ರಯತ್ನದಲ್ಲಿ ಯುವರಾಜ್‌ ಔಟಾದರೂ, ಜವಾಬ್ದಾರಿ ಹೊತ್ತ ಕೈಫ್‌ ಅವಿಸ್ಮರಣೀಯ ಜಯ ತಂದುಕೊಟ್ಟಿದ್ದರು.

4. 2000ದ ಇಸವಿಯಲ್ಲಿ ಆಸಿಸ್‌ ವಿರುದ್ಧ 80 ಎಸೆತಗಳಲ್ಲಿ 84 ರನ್‌

4. 2000ದ ಇಸವಿಯಲ್ಲಿ ಆಸಿಸ್‌ ವಿರುದ್ಧ 80 ಎಸೆತಗಳಲ್ಲಿ 84 ರನ್‌

ಕೀನ್ಯಾದಲ್ಲಿ 2000ದ ಇಸವಿಯಲ್ಲಿ ನಡೆದ ಐಸಿಸಿ ನಾಕ್‌ಔಟ್‌ ಟ್ರೋಫಿ ಟೂರ್ನಿಯಲ್ಲಿ ಟೀಮ್‌ ಇಂಡಿಯಾಗೆ ಕಾಲಿಟ್ಟಿದ್ದ ಟೀನೇಜ್‌ ಸೆನ್ಸೇಷನ್‌ ಯುವರಾಜ್‌ ಸಿಂಗ್‌ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಅಬ್ಬರಿಸಿ ಕ್ರಿಕೆಟ್‌ ಜಗತ್ತಿಗೆ ತಮ್ನ ಆಗಮನ ಸಂದೇಶ ರವಾನಿಸಿದ್ದರು. 2000ದ ಇಸವಿಯ ಅಕ್ಟೋಬರ್‌ 7ರಂದು ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 18 ವರ್ಷದ ಎಡಗೈ ಬ್ಯಾಟ್ಸ್‌ಮನ್‌ ಯುವರಾಜ್‌ 80 ಎಸೆತಗಳಲ್ಲಿ 84 ರನ್‌ಗಳ ಮನಮೋಕ ಇನಿಂಗ್ಸ್‌ ಆಡಿದ್ದರು. 90 ರನ್‌ ಗಳಿಸುವ ಹೊತ್ತಿಗಾಗಲೇ ತಂಡದ ಸ್ಟಾರ್‌ಗಳಾದ ಸಚಿನ್‌, ಗಂಗೂಲಿ ಹಾಗೂ ದ್ರಾವಿಡ್‌ ಅವರ ವಿಕೆಟ್‌ ಕಳೆದುಕೊಂಡಿದ್ದ ಭಾರತಕ್ಕೆ ಆಸರೆಯಾಗಿ ನಿಂತ ಯುವಿ, 265 ರನ್‌ಗಳ ಸವಾಲಿನ ಮೊತ್ತ ತಂದುಕೊಟ್ಟಿದ್ದರು. ಪಂದ್ಯದಲ್ಲಿ ಭಾರತ 20 ರನ್‌ಗಳ ಜಯ ದಾಖಲಿಸಿ, ಯುವರಾಜ್‌ ಪಂದ್ಯಶ್ರೇಷ್ಠ ಗೌರವ ಪಡೆದಿದ್ದರು.

5. 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 122 ಎಸೆತಗಳಲ್ಲಿ 103 ರನ್‌

5. 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 122 ಎಸೆತಗಳಲ್ಲಿ 103 ರನ್‌

2006ರ ನವೆಂಬರ್‌ 16ರಂದು ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ಗಳಾದ ಮಖಾಯ ಎನ್ಟಿನಿ, ಶಾನ್‌ ಪೊಲಾಕ್‌ ಮತ್ತು ಆಂಡ್ರೆ ನೆಲ್‌ ಟೀಮ್‌ ಇಂಡಿಯಾದ ಬ್ಯಾಟ್ಸ್‌ಮನ್‌ಗಳನ್ನು ಬೇಟೆಯಾಡಿದ್ದರು. ಆದರೆ, ತಂಡಕ್ಕೆ ಆಸರೆಯಾಗಿ ನಿಂತ ಯುವರಾಜ್‌ ಸಿಂಗ್‌ ಶತಕ ಬಾರಿಸಿದ್ದರು. ಸೆಹ್ವಾಗ್‌, ತಂಡೂಲ್ಕರ್‌ ಮತ್ತು ಕೈಫ್‌ ಔಟಾದ ಬಳಿಕ 5ನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದ ಯುವಿ 48ನೇ ಓವರ್‌ನಲ್ಲಿ ಔಟ್‌ ಆದರು. ಈ ಮಧ್ಯ 122 ಎಸೆತಗಳಲ್ಲಿ 103 ರನ್‌ಗಳ ಅಮೋಘ ಶತಕ ಬಾರಿಸಿದ್ದರು. ಆದರೂ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳ ಸೋಲನುಭವಿಸಿತ್ತು. ಪಂದ್ಯದಲ್ಲಿ ಯುವರಾಜ್‌ ಪ್ರದರ್ಶಿಸಿ ಕೆಚ್ಚೆದೆಯ ಹೋರಾಟಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, June 10, 2019, 17:53 [IST]
Other articles published on Jun 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more