ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ವೇಗಿ ನವದೀಪ್ ಸೈನಿ ವಿಶೇಷ ದಾಖಲೆ

Navdeep Saini created unique record in IPL history

ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗೆಲುವಿನ ಹಾದಿಯಲ್ಲಿದೆ. ಈವರೆಗೆ ಆಡಿರುವ ಏಳು ಪಂದ್ಯಗಳಲ್ಲಿ 5 ಗೆಲುವು ಕಂಡಿರುವ ವಿರಾಟ್ ಕೊಹ್ಲಿ ಪಡೆ ಐಪಿಎಲ್ ಅಂಕಪಟ್ಟಿಯಲ್ಲಿ ಸದ್ಯ ತೃತೀಯ ಸ್ಥಾನದಲ್ಲಿದೆ.

ಆರ್‌ಸಿಬಿ ಗೆಲುವಿಗೆ ಮುಖ್ಯ ಕಾರಣವೆಂದರೆ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗ ಬಲಗೊಂಡಿರುವುದು. ವಿರಾಟ್ ಕೊಹ್ಲಿ ಸದ್ಯ ಫಾರ್ಮ್ ತೋರಿಸಿಕೊಳ್ಳುತ್ತಿದ್ದರೆ, ಬೌಲರ್‌ಗಳು ಕೂಡ ತಂಡಕ್ಕೆ ಬಲ ತುಂಬುತ್ತಿದ್ದಾರೆ. ಆರ್‌ಸಿಬಿ ಬೌಲರ್ ನವದೀಪ್ ಸೈನಿ ವಿಶಿಷ್ಠ ಸಾಧನೆಗಾಗಿ ಈ ಬಾರಿ ಗಮನ ಸೆಳೆದಿದ್ದಾರೆ.

ವೈಡ್‌ ಬಾಲ್ ವಿವಾದ: ಧೋನಿ ಬೆಂಬಲಕ್ಕೆ ನಿಂತ ಸುನಿಲ್ ಗವಾಸ್ಕರ್ವೈಡ್‌ ಬಾಲ್ ವಿವಾದ: ಧೋನಿ ಬೆಂಬಲಕ್ಕೆ ನಿಂತ ಸುನಿಲ್ ಗವಾಸ್ಕರ್

ಐಪಿಎಲ್ 2020ಯಲ್ಲಿ ಕಾಗಿಸೊ ರಬಾಡಾ, ಜೋಫ್ರಾ ಆರ್ಚರ್, ಲುಂಗಿ ಎನ್‌ಗಿಡಿ, ಡೇಲ್ ಸ್ಟೇನ್, ಜಸ್‌ಪ್ರೀತ್ ಬೂಮ್ರಾ ಇಂಥ ಅನೇಕ ವೇಗಿಗಳಿದ್ದಾರೆ. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಗಂಟೆಗೆ 140+ ಕಿ.ಮೀ.ವೇಗದಲ್ಲಿ ಬೌಲಿಂಗ್ ಮಾಡುವ ಭಾರತದ ಏಕಮಾತ್ರ ಬೌಲರ್‌ ಆಗಿ ಸೈನಿ ಗುರುತಿಸಿಕೊಂಡಿದ್ದಾರೆ.

ಈವರೆಗೆ 20 ಐಪಿಎಲ್ ಪಂದ್ಯಗಳನ್ನಾಡಿರುವ ನವದೀಪ್ ಸೈನಿ 8.41ರ ಎಕಾನಮಿಯಲ್ಲಿ 15 ವಿಕೆಟ್ ಪಡೆದಿದ್ದಾರೆ. ಹರ್ಯಾಣದಲ್ಲಿ ಜನಿಸಿರುವ 27ರ ಹರೆಯದ ಸೈನಿ ಡೆಲ್ಲಿ, ಇಂಡಿಯಾ ಎ, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಇಂಡಿಯಾ, ಇಂಡಿಯಾ ಬಿ, ಇಂಡಿಯಾ ಸಿ ತಂಡಗಳ ಪರ ಆಡಿದ್ದಾರೆ.

Story first published: Thursday, October 15, 2020, 10:16 [IST]
Other articles published on Oct 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X