ಮಾರಕ ರೋಗಕ್ಕೆ ಈಡಾದ ಸಿಧು, ಮೋದಿ ಅವರಿಂದ ಪ್ರಾರ್ಥನೆ

By Mahesh

ನವದೆಹಲಿ, ಅ. 07: ಟೀಂ ಇಂಡಿಯಾದ ಮಾಜಿ ಟೆಸ್ಟ್ ಆಟಗಾರ ನವಜ್ಯೋತ್ ಸಿಂಗ್ ಸಿಧು ಅವರು ಮಾರಕ ರೋಗಕ್ಕೆ ತುತ್ತಾಗಿದ್ದಾರೆ. ನರದಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆಯಿಂದ ಬಳಲುತ್ತಿರುವ ಸಿಕ್ಸರ್ ಸಿಧು ಅವರು ಇಲ್ಲಿನ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ಅನೇಕರು ಸಿಧು ಅವರ ಆರೋಗ್ಯ ಚೇತರಿಕೆಗಾಗಿ ಟ್ವೀಟ್ ಮಾಡಿದ್ದಾರೆ.

ಮಲಗಿರುವ ಸ್ಥಿತಿಯಲ್ಲಿರುವ ಚಿತ್ರದ ಜೊತೆಗೆ ಟ್ವೀಟ್ ಮಾಡಿ 'ನಾನು ಇನ್ನೂ ನಾಟೌಟ್' ಎಂದಿದ್ದಾರೆ. ಮಂಗಳವಾರ ಸಂಜೆ ಸಿದ್ದು ಆರೋಗ್ಯ ಸ್ಥಿತಿಯಲ್ಲಿ ಏರುಪೇರು ಕಂಡುಬಂದಿದ್ದರಿಂದ ಕೂಡಲೇ ಅವರನ್ನು ಅಪೊಲೋ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲಾಗಿದೆ. ಈಗ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.[ಸಿಕ್ಸರ್ ಸಿಧು ಚುನಾವಣೆ ಫೀಲ್ಡ್ ನಿಂದ ಹೊರಕ್ಕೆ!]

ಸಿಧು ಟ್ವೀಟ್ ಮಾಡಿದ್ದು ಹೀಗೆ..."Down but Not Out! Life threatening disease (DVT) With God 's Grace will recover. Life is Fragile, handle with Prayer,"

51 ವರ್ಷ ವಯಸ್ಸಿನ ಸಿಧು ಅವರು 51 ಟೆಸ್ಟ್ ಪಂದ್ಯಗಳು ಹಾಗೂ 136 ಏಕದಿನ ಪಂದ್ಯಗಳನ್ನಾಡಿದ್ದಾರೆ. ಅಮೃತಸರದಿಂದ ಬಿಜೆಪಿ ಟಿಕೆಟ್ ಪಡೆದು ಲೋಕಸಭಾ ಸದಸ್ಯರಾಗಿದ್ದರು. ಟಿವಿ ಕ್ರಿಕೆಟ್ ಕಾಮೆಂಟರಿ, 'ಕಾಮಿಡಿ ನೈಟ್ ವಿತ್ ಕಪಿಲ್' ನಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಗಳಿಸಿದ್ದಾರೆ. ಕಳೆದ ಏಪ್ರಿಲ್ ಹಾಗೂ ಮೇ ನಲ್ಲಿ ನಡೆದ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಸಿಧು ಕಾಮೆಂಟರಿ ಕೊಟ್ಟಿದ್ದರು.

ಬಹುತೇಕ ರಾಜಕೀಯ ನಿವೃತ್ತಿ

ಬಹುತೇಕ ರಾಜಕೀಯ ನಿವೃತ್ತಿ

ಅಮೃತಸರ್ ನನ್ನ ಕರ್ಮಭೂಮಿ. ನನ್ನ ಗುರು ಅರುಣ್ ಜೇಟ್ಲಿ ಹಾಗೂ ಬಿಜೆಪಿ ಜತೆಗಿನ ನನ್ನ ಸಂಬಂಧ ಪವಿತ್ರವಾಗಿದೆ. ಆತ ನನ್ನ ಗುರು. ಪವಿತ್ರ ಬಂಧನದಲ್ಲಿ ತ್ಯಾಗಕ್ಕೆ ಮಹತ್ವದ ಸ್ಥಾನವಿದೆ. ನಾನು ನನ್ನ ಕ್ಷೇತ್ರ ಬಿಟ್ಟುಕೊಡುತ್ತೇನೆ. ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಬೇರೆ ಯಾವ ಕ್ಷೇತ್ರದಿಂದಲೂ ಸ್ಪರ್ಧಿಸುವ ಮನಸ್ಸಿಲ್ಲ ಎಂದು ಸಿಧು ಬಹುತೇಕ ರಾಜಕೀಯ ನಿವೃತ್ತಿ ಘೋಷಿಸಿದ್ದರು[ವಿವರ ಇಲ್ಲಿದೆ]

ಡೌನ್ ಬಟ್ ನಾಟೌಟ್

ಡೌನ್ ಬಟ್ ನಾಟೌಟ್ , Life threatening disease (DVT) ಬದುಕೆಂದರೆ ಹೀಗೆ ನಿಮ್ಮ ಪ್ರಾರ್ಥನೆ ಇರಲಿ

ಮೋದಿ ಅವರಿಂದ ಶುಭ ಹಾರೈಕೆ

ಶೆರಿಪಾ ಬೇಗ ಹುಷಾರಾಗಿ ನೀವೊಬ್ಬ ಫೈಟರ್, ರೋಗದಿಂದ ಬೇಗ ಗುಣಮುಖರಾಗಿ, ನಮ್ಮ ಪ್ರಾರ್ಥನೆ ನಿಮ್ಮ ಜೊತೆಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ರಮೀಜ್ ರಾಜಾರಿಂದ ಟ್ವೀಟ್

ಪಾಕಿಸ್ತಾನದ ಮಾಜಿ ಕ್ರಿಕೆಟರ್ ರಮೀಜ್ ರಾಜಾರಿಂದ ಟ್ವೀಟ್ ಶುಭ ಹಾರೈಕೆ

ಕಾಮಿಡಿಯನ್ ಕಪಿಲ್ ಶರ್ಮ ರಿಂದ ಟ್ವೀಟ್

ಕಾಮಿಡಿ ವಿತ್ ಕಪಿಲ್ ನ ನಿರೂಪಕ ಕಪಿಲ್ ಶರ್ಮ ಟ್ವೀಟ್ ಮಾಡಿ, ಈಗಷ್ಟೇ ಶೆರಿಪಾ ಕುಟುಂಬದೊಡನೆ ಮಾತನಾಡಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ನೀವು ಬೇಗ ಗುಣಮುಖರಾಗಿ ಸೆಟ್ ಗೆ ಬನ್ನಿ ನಿಮಗಾಗಿ ಕಾದಿದ್ದೇನೆ ಎಂದಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, October 7, 2015, 11:32 [IST]
Other articles published on Oct 7, 2015
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X