ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನವನೀತ್ ಎಜುಕೇಷನ್ 'ಯುವಾ' ಬ್ರ್ಯಾಂಡ್‍ಗೆ ಪೃಥ್ವಿ ಶಾ ರಾಯಭಾರಿ

image-prithvishaw-1544063007.jpg kannada.mykhel.com}

ಬೆಂಗಳೂರು, ಡಿಸೆಂಬರ್ 06: ನವನೀತ್ ಎಜುಕೇಷನ್ ಲಿಮಿಟೆಡ್‍ನ ಯುವಾ ಬ್ರ್ಯಾಂಡ್, ಭಾರತದ ಯುವ ಕ್ರಿಕೆಟಿಗ ಪೃಥ್ವಿ ಶಾ ಜತೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ.

ಭಾರತದ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು, ಅದರಂತೆಯೇ ನವನೀತ್, ಯುವಾ ಸ್ಟೇಷನರಿ ಬ್ರ್ಯಾಂಡ್‍ಅನ್ನು ಪರಿಚಯಿಸಿದೆ. ಪ್ರಸ್ತುತ ಕಾಲಕ್ಕೆ ತಕ್ಕಂತೆ ಗ್ರಾಹಕ ಅಗತ್ಯಗಳಿಗೆ ಬೇಕಾದ ರೀತಿಯಲ್ಲಿ ಉತ್ಪನ್ನಗಳನ್ನು ಆರಂಭಿಸಲು ಯುವಾ ನಂಬಿಕೆ ಇರಿಸಿದೆ.

ಆಸ್ಟ್ರೇಲಿಯಾ ವಿರುದ್ಧದ ಅಡಿಲೇಡ್ ಟೆಸ್ಟ್ ಪಂದ್ಯಕ್ಕೆ ಪೃಥ್ವಿ ಶಾ ಅಲಭ್ಯ ಆಸ್ಟ್ರೇಲಿಯಾ ವಿರುದ್ಧದ ಅಡಿಲೇಡ್ ಟೆಸ್ಟ್ ಪಂದ್ಯಕ್ಕೆ ಪೃಥ್ವಿ ಶಾ ಅಲಭ್ಯ

ಯುವಾ ಉತ್ಪನ್ನಗಳ ರಾಯಭಾರಿಯಾಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಪೃಥ್ವಿ ಷಾ, ಬಾಲ್ಯದಿಂದಲೂ ನಾನು ನವನೀತ್ ಸಂಸ್ಥೆಯ ಉತ್ಪನ್ನಗಳನ್ನೇ ಬಳಸುತ್ತಿದ್ದೆ. ನಿಜ ಹೇಳಬೇಕೆಂದರೆ, ಈಗಲೂ ನಾನು ಬಳಸುತ್ತಿದ್ದೇನೆ. ಯುವಾ ಎಂದಿಗೂ ನನ್ನ ಫೇವರಿಟ್. ಅವರ ಎಲ್ಲ ದರ್ಜೆಯ ಉತ್ಪನ್ನಗಳು ನನಗಿಷ್ಟ.

ಮೊದಲ ಟೆಸ್ಟ್ ನಲ್ಲಿ ಶತಕ ಸಿಡಿಸಿದ ಪೃಥ್ವಿ ಸಾಧನೆಯ ಪ್ರಮುಖಾಂಶಗಳು
ಯುವಾ ಬ್ರ್ಯಾಂಡ್‍ನ ಮೂಲಕ ಯುವ ಸಮೂಹವನ್ನು ರೂಪಿಸುವ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಎನಿಸಿದೆ. ಅದರೊಂದಿಗೆ ಮುಂದಿನ ಯುವ ಸಮೂಹದ ಭವ್ಯ ಭವಿಷ್ಯಕ್ಕೆ ಇವರು ಮಾಡಿರುವ ಆಲೋಚನೆಗಳನ್ನು ತಲುಪಿಸುವಲ್ಲಿ ನಾನು ಸಹಾಯ ಮಾಡುತ್ತೇನೆ ಎಂದಿದ್ದಾರೆ.

ಸ್ಟೇಷನರಿಯ ಅನನ್ಯ ಸೀಮಿತ ಆವೃತ್ತಿಯ ಉತ್ಪನ್ನಗಳ ರಾಯಭಾರಿಯಾಗಿ ಪೃಥ್ವಿ ಷಾ ಇರಲಿದ್ದಾರೆ. ಉದಯೋನ್ಮುಖ ಕ್ರಿಕೆಟಿಗ ನೀಡಿದ ಸಲಹೆಗಳ ಸ್ಫೂರ್ತಿಯಲ್ಲಿ ಇದನ್ನು ಉತ್ಪಾದಿಸಲಾಗಿದೆ. ಅದರೊಂದಿಗೆ ಪೃಥ್ವಿ ಷಾ, ಯುವಾ ವಿದ್ಯಾರ್ಥಿ ಸಮಿತಿಯ ಭಾಗವಾಗಿಯೂ ಇರಲಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ 'ಸರಣಿ ಶ್ರೇಷ್ಠ' ಪೃಥ್ವಿ ಮುರಿದ ದಾಖಲೆಗಳು ವೆಸ್ಟ್ ಇಂಡೀಸ್ ವಿರುದ್ಧ 'ಸರಣಿ ಶ್ರೇಷ್ಠ' ಪೃಥ್ವಿ ಮುರಿದ ದಾಖಲೆಗಳು

ಭವಿಷ್ಯದಲ್ಲಿ ತಯಾರಿಸಬೇಕಾದ ಉತ್ಪನ್ನಗಳು ಹಾಗೂ ಅದರ ಅಗತ್ಯಗಳನ್ನು ಯುವಾ ವಿದ್ಯಾರ್ಥಿ ರಾಯಭಾರಿ ಎನ್ನುವ ಹೆಸರಿನಲ್ಲಿ, ಕೆಲವಿದ್ಯಾರ್ಥಿಗಳು ಭಾಗಾವಗಿರುವ ವೇದಿಕೆ ಇದಾಗಿದೆ.

ಯುವ ಐಕಾನ್ ಆಗಿಯೂ ಗುರುತಿಸಿಕೊಂಡಿರುವ ಪೃಥ್ವಿ

ಯುವ ಐಕಾನ್ ಆಗಿಯೂ ಗುರುತಿಸಿಕೊಂಡಿರುವ ಪೃಥ್ವಿ

ಈ ಸಹ-ನಿರ್ಮಾಣದ ವ್ಯವಸ್ಥೆ, ವಿದ್ಯಾರ್ಥಿಗಳಿಗೂ ಅಭೂತಪೂರ್ವ ಅನುಭವವಾಗಿರಲಿದ್ದು, ಯುವ ಐಕಾನ್ ಆಗಿಯೂ ಗುರುತಿಸಿಕೊಂಡಿರುವ ಪೃಥ್ವಿ ಷಾರ ಜತೆ ವೃತ್ತಿಪರ ಹಾಗೂ ಪರಸ್ಪರ ವ್ಯಕ್ತಿತ್ವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಅದರೊಂದಿಗೆ ಯುವಾ ಯೋಜಿಸಿರುವ ಟಿವಿ ಜಾಹೀರಾತುಗಳು ಹಾಗೂ ಡಿಜಿಟಲ್ ಅಭಿಯಾನಗಳಲ್ಲೂ ಪೃಥ್ವಿ ಷಾ ಕಾಣಿಸಿಕೊಳ್ಳಲಿದ್ದಾರೆ.

ಅಂದಿನಿಂದ ಅವರು ಹಿಂತಿರುಗಿ ನೋಡಿದ್ದೇ ಇಲ್ಲ

ಅಂದಿನಿಂದ ಅವರು ಹಿಂತಿರುಗಿ ನೋಡಿದ್ದೇ ಇಲ್ಲ

ಮುಂಬೈನ 19 ವರ್ಷದ ಆಟಗಾರ ಪೃಥ್ವಿ ಷಾ,19 ವಯೋಮಿತಿ ಕ್ರಿಕೆಟ್‍ನಲ್ಲಿ ಭಾರತ ತಂಡದ ನಾಯಕರಾಗಿದ್ದವರು. ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್‍ನಲ್ಲಿ ನಡೆದ 19 ವಯೋಮಿತಿ ವಿಶ್ವಕಪ್‍ನಲ್ಲಿ ಭಾರತ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ಮುನ್ನಡೆಸಿದ ಆಟಗಾರ. 2013ರಲ್ಲಿ ಹ್ಯಾರೀಸ್ ಶೀಲ್ಡ್ ಪಂದ್ಯದಲ್ಲಿ 330 ಎಸೆತಗಳಲ್ಲಿ 546 ರನ್ ಸಿಡಿಸುವ ಮೂಲಕ ಮೊದಲ ಬಾರಿಗೆ ಜಗತ್ತಿನ ಗಮನಸೆಳೆದವರು.

ಅಂದಿನಿಂದ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಆ ಬಳಿಕ ಪೃಥ್ವಿ ಷಾ ತಮ್ಮ ಕ್ರಿಕೆಟ್ ಜೀವನದಲ್ಲಿ ಹಲವು ಸ್ಮರಣೀಯ ದಾಖಲೆಗಳು ಹಾಗೂ ಇನಿಂಗ್ಸ್ ಅನ್ನು ಆಡಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ಶತಕ ಬಾರಿಸಿದ ಅತೀ ಕಿರಿಯ ಆಟಗಾರ, ರಣಜಿ ಟ್ರೋಫಿಯ ಪದಾರ್ಪಣಾ ಪಂದ್ಯದಲ್ಲಿಯೇ ಶತಕ ಬಾರಿಸಿದ ಆಟಗಾರ ಎನಿಸಿಕೊಂಡಿರುವ ಪೃಥ್ವಿ, ತಾವು ಆಡಿರುವ 17 ಪ್ರಥಮ ದರ್ಜೆ ಪಂದ್ಯಗಳಿಂದ 8 ಶತಕ ಬಾರಿಸಿದ್ದಾರೆ.

ಚೊಚ್ಚಲ ಟೆಸ್ಟ್ ನಲ್ಲೇ ಶತಕ ಬಾರಿಸಿದರು

ಚೊಚ್ಚಲ ಟೆಸ್ಟ್ ನಲ್ಲೇ ಶತಕ ಬಾರಿಸಿದರು

ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದ ಆರಂಭದಲ್ಲೂ ದೊಡ್ಡ ಮಟ್ಟದ ನಿರ್ವಹಣೆಯ ಮೂಲಕ ಪೃಥ್ವಿ ಗಮನಸೆಳೆದಿದ್ದಾರೆ. ಪ್ರವಾಸಿ ವೆಸ್ಟ್‍ಇಂಡೀಸ್ ತಂಡದ ವಿರುದ್ಧ ಇತ್ತೀಚೆಗೆ ತವರಿನಲ್ಲಿ ನಡೆದ ಟೆಸ್ಟ್ ಸರಣಿಯ ಪದಾರ್ಪಣಾ ಇನಿಂಗ್ಸ್‍ನಲ್ಲಿಯೇ ಶತಕ ಬಾರಿಸಿದ್ದ ಪೃಥ್ವಿ, ಸರಣಿಯಲ್ಲಿ 118.5ರ ಸರಾಸರಿಯಲ್ಲಿ 237 ರನ್ ಬಾರಿಸುವ ಮೂಲಕ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಿದದ್ದರು.
ಪದಾರ್ಪಣೆಯ ಟೆಸ್ಟ್ ಪಂದ್ಯದಲ್ಲಿಯೇ ಶತಕ ಬಾರಿಸಿದ ಅತೀ ಕಿರಿಯ ಆಟಗಾರ ಎನ್ನುವ ದಾಖಲೆಯನ್ನೂ ಈ ಸರಣಿಯಲ್ಲಿ ಮಾಡಿದ್ದರು. ಭಾರತ ಎ ತಂಡದ ಪರವಾಗಿ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ಧ ಪೃಥ್ವಿ, ಸದ್ಯ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಬಾರ್ಡರ್-ಗಾವಸ್ಕರ್ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಭಾರತ ತಂಡದ ಭಾಗವಾಗಿದ್ದಾರೆ.

ಯುವ ಜನತೆಯ ಪ್ರತಿಬಿಂಬ

ಯುವ ಜನತೆಯ ಪ್ರತಿಬಿಂಬ

ಪೃಥ್ವಿ ಷಾ ಜತೆಗಿನ ಒಪ್ಪಂದದ ಕುರಿತು ವಿವರಿಸಿದ, ನವನೀತ್ ಎಜುಕೇಷನ್ ಲಿಮಿಟೆಡ್‍ನ ಸ್ಟೇಷನರಿ ವಿಭಾಗದ ನಿರ್ದೇಶಕ ಶೈಲೇಂದ್ರ ಗಾಲಾ, ಯುವ ಸಮೂಹ ಗುರಿ ಸಾಧಿಸುವ ನಿಟ್ಟಿನಲ್ಲಿ ನವನೀರತ್ ಆರಂಭದಿಂದಲೂ ಕೆಲಸ ಮಾಡಿದೆ. ನಮ್ಮ ಯುವಾ ಬ್ರ್ಯಾಂಡ್ ಇವರ ಕ್ರೀಯಾಶೀಲತೆಯನ್ನು ವ್ಯಕ್ತಪಡಿಸುವುದಕ್ಕೆ ಬೆಂಬಲವಾಗಿ ನಿಂತಿದೆ.

ಪೃಥ್ವಿ, ಇಂದು ನಮ್ಮ ನಡುವೆ ಇರುವ ಯುವ ಜನತೆಯ ಪ್ರತಿಬಿಂಬ. ಯುವ ಆಟಗಾರ ಕ್ರೀಡಾ ಕ್ಷೇತ್ರದಲ್ಲಿ ಇಂದು ತಮ್ಮದೇ ಆದ ಸ್ಥಾನವೊಂದನ್ನು ಸಂಪಾದನೆ ಮಾಡಿದ್ದಾರೆ. ಪೃಥ್ವಿ ಹಾಗೂ ಯುವಾ ನಡುವೆ ಒಂದು ಉತ್ತಮ ಭಾಂದವ್ಯ ಹಾಗೂ ಶಕ್ತಿಯನ್ನು ನಾವು ಕಂಡಿದ್ದೇವೆ. ಪೃಥ್ವಿ ಜತೆಯಲ್ಲಿ ನಾವು ಹಲವು ರೀತಿಯ ಉತ್ಪನ್ನಗಳನ್ನು ಆರಂಭಿಸಬೇಕು ಎನ್ನುವ ಯೋಚನೆಯಲ್ಲಿದ್ದೇವೆ. ಆ ಮೂಲಕ ಬ್ರ್ಯಾಂಡ್ ಇನ್ನಷ್ಟು ಪ್ರಗತಿ ಸಾಧಿಸಲು ನೆರವಾಗಲಿದೆ ಎಂದರು.

ಯುವಾ ಕುರಿತಾಗಿ

ಯುವಾ ಕುರಿತಾಗಿ

ನವನೀತ್‍ನಿಂದ 2016ರಲ್ಲಿ ಆರಂಭವಾದ ಹೊಸ ಸ್ಟೇಷನರಿ ಬ್ರ್ಯಾಂಡ್ ಯುವಾ. ಕಾಗದ ಹಾಗೂ ಕಾಗದ ರಹಿತ ಉತ್ಪನ್ನಗಳನ್ನು ಇದು ಆರಂಭಿಸಿದೆ. ಯುವ ಸಮೂಹವನ್ನು ಗಮನದಲ್ಲಿಟ್ಟುಕೊಂಡು, ಯುವಾ ದ ಆರ್ಟ್‍ಆಫ್ ಬೀಯಿಂಗ್ ಸ್ಮಾರ್ಟ್ ಎನ್ನುವುದನ್ನು ವಿನ್ಯಾಸ ಮಾಡಿದ್ದೇವೆ. ಇಂದಿನ ಯುವ ಜನತೆಯೇ ನಾಳಿನ ಸಾಧಕರು.. ಅವರ ಆಯ್ಕೆಗಳು ಹಾಗೂ ಆಲೋಚನೆಗಳ ಭಾಗವಾಗಿ ನಾವು ಯುವಾ ಆರಂಭಿಸಿದ್ದೆವು. ಇಂದು ಯುವಾದ ಪ್ರತಿಉತ್ಪನ್ನಗಳೂ, ನಮ್ಮ ದೇಶದ ಯುವ ಸಮೂಹದ ವಿಚಾರ, ಫ್ಯಾಷನ್ ಹಾಗೂ ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ.

Story first published: Thursday, December 6, 2018, 17:26 [IST]
Other articles published on Dec 6, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X