ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಷ್ಟು ಕೆಜಿ ತೂಕ ಇಳಿಸಿದರೆ ಮಾತ್ರ ತಂಡದಲ್ಲಿ ಮತ್ತೆ ಸ್ಥಾನ; ರೋಹಿತ್‌ಗೆ ಬಂತು ಖಡಕ್ ಎಚ್ಚರಿಕೆ!

NCA advised Rohit Sharma to reduce 6 KG weight before next fitness test

ಟೀಮ್ ಇಂಡಿಯಾ ಆಟಗಾರರಿಗೂ ಗಾಯದ ಸಮಸ್ಯೆಗಳಿಗೂ ಯಾವ ಜನ್ಮದ ಅನುಬಂಧವೋ ಏನೋ ಒಬ್ಬರಾದ ನಂತರ ಮತ್ತೊಬ್ಬರು ಗಾಯದ ಸಮಸ್ಯೆಗೆ ಒಳಗಾಗಿ ಪ್ರಮುಖ ಸರಣಿಗಳಿಂದಲೇ ದೂರ ಉಳಿಯುವಂತಹ ಪರಿಸ್ಥಿತಿ ಆಗಾಗ ನಿರ್ಮಾಣವಾಗುತ್ತಲೇ ಇದೆ.

ಅಂದು ರಹಾನೆ, ಇಂದು ಐಯ್ಯರ್: ಅಂತಿಮ ಕ್ಷಣದಲ್ಲಿ ಬಿಸಿಸಿಐ ಆಟಗಾರರನ್ನು ಹೊರಹಾಕುತ್ತಿರುವುದೇಕೆ?ಅಂದು ರಹಾನೆ, ಇಂದು ಐಯ್ಯರ್: ಅಂತಿಮ ಕ್ಷಣದಲ್ಲಿ ಬಿಸಿಸಿಐ ಆಟಗಾರರನ್ನು ಹೊರಹಾಕುತ್ತಿರುವುದೇಕೆ?

ಸದ್ಯ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಹರಿಣಗಳ ವಿರುದ್ಧ ಮೊದಲಿಗೆ ಟೆಸ್ಟ್ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದ್ದರೆ, ಆತ ಭಾರತ ತಂಡದ ಪ್ರಮುಖ ಆಟಗಾರರು ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್‌ನೆಸ್ ಮರಳಿ ಪಡೆಯಲು ಬೆವರಿಳಿಸುತ್ತಾ ಇದ್ದಾರೆ. ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಗಾಯದ ಸಮಸ್ಯೆಗೊಳಗಾಗಿ ಹೊರಗುಳಿದಿರುವ ರೋಹಿತ್ ಶರ್ಮಾ ತುಸು ಹೆಚ್ಚಿನ ನಿಗಾವಹಿಸಿ ಫಿಟ್‌ನೆಸ್ ಮರಳಿ ಪಡೆಯಲು ಶ್ರಮಿಸುತ್ತಿದ್ದಾರೆ.

ಈ ಒಂದು ಕಾರಣಕ್ಕೆ ಟೀಮ್ ಇಂಡಿಯಾ ವಿಶ್ವದ ಅತ್ಯುತ್ತಮ ತಂಡವಾಗಿ ನಿಂತಿದೆ ಎಂದ ಬ್ರಾಡ್ ಹಾಗ್ಈ ಒಂದು ಕಾರಣಕ್ಕೆ ಟೀಮ್ ಇಂಡಿಯಾ ವಿಶ್ವದ ಅತ್ಯುತ್ತಮ ತಂಡವಾಗಿ ನಿಂತಿದೆ ಎಂದ ಬ್ರಾಡ್ ಹಾಗ್

ನೂತನ ವರ್ಷದ ಪ್ರಯುಕ್ತ 3 ದಿನಗಳ ರಜೆಯನ್ನು ತೆಗೆದುಕೊಂಡಿದ್ದ ರೋಹಿತ್ ಶರ್ಮಾ ಇದೀಗ ಮರಳಿ ನ್ಯಾಷನಲ್ ಕ್ರಿಕೆಟ್‌ ಅಕಾಡೆಮಿಗೆ ಬಂದಿದ್ದು ರವೀಂದ್ರ ಜಡೇಜಾ, ಶಿಖರ್ ಧವನ್, ಭುವನೇಶ್ವರ್ ಕುಮಾರ್, ಸಂಜು ಸ್ಯಾಮ್ಸನ್ ಹಾಗೂ ಮುಂತಾದ ಆಟಗಾರರ ಜೊತೆ ಕಸರತ್ತಿನಲ್ಲಿ ಭಾಗವಹಿಸುತ್ತಿದ್ದಾರೆ. ಅಸಲಿಗೆ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ನಾಯಕನಾಗಿ ಆಯ್ಕೆಗೊಂಡಿದ್ದರು. ಆದರೆ ಇದರ ಬೆನ್ನಲ್ಲೇ ಅಭ್ಯಾಸವನ್ನು ನಡೆಸುವ ವೇಳೆ ಗಾಯದ ಸಮಸ್ಯೆಗೊಳಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಮೊದಲಿಗೆ ಹೊರಬಿದ್ದರು. ಇದೀಗ ಏಕದಿನ ಸರಣಿಯಿಂದಲೂ ಕೂಡ ಹೊರಬಿದ್ದಿದ್ದು ನಾಯಕತ್ವ ಕೆಎಲ್ ರಾಹುಲ್ ಪಾಲಾಗಿದೆ. ಹೀಗಾಗಿ ರೋಹಿತ್ ಶರ್ಮಾ ಪುನಃ ಟೀಮ್ ಇಂಡಿಯಾ ಸೇರಬೇಕೆಂದರೆ ನ್ಯಾಶನಲ್ ಕ್ರಿಕೆಟ್ ಅಕಾಡೆಮಿ ಹೇಳಿರುವ ಪ್ರಕಾರ ಈ ಕೆಳಕಂಡಂತೆ ನಡೆದುಕೊಳ್ಳಲೇಬೇಕಿದೆ.

ರೋಹಿತ್ ಪುನಃ ತಂಡ ಸೇರಬೇಕೆಂದರೆ 5 - 6 ಕೆಜಿ ತೂಕ ಇಳಿಸಿಕೊಳ್ಳಲೇಬೇಕು

ರೋಹಿತ್ ಪುನಃ ತಂಡ ಸೇರಬೇಕೆಂದರೆ 5 - 6 ಕೆಜಿ ತೂಕ ಇಳಿಸಿಕೊಳ್ಳಲೇಬೇಕು

ಇನ್ನು ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಕಸರತ್ತು ನಡೆಸುತ್ತಿರುವ ರೋಹಿತ್ ಶರ್ಮಾ ಮುಂದಿನ ಪರೀಕ್ಷೆಯೊಳಗೆ 5 ರಿಂದ 6 ಕೆಜಿ ದೇಹದ ತೂಕವನ್ನು ಇಳಿಸಿಕೊಳ್ಳಲೇಬೇಕಾಗಿದೆ. ಇಷ್ಟರ ಮಟ್ಟಿಗಿನ ತೂಕವನ್ನು ಇಳಿಸಿಕೊಂಡರೆ ಮಾತ್ರ ರೋಹಿತ್ ಶರ್ಮಾ ಮರಳಿ ಟೀಮ್ ಇಂಡಿಯಾ ಸೇರಲು ಅನುಮತಿ ಸಿಗಲಿದೆ ಇಲ್ಲವಾದರೆ ಮತ್ತೊಮ್ಮೆ ಪರೀಕ್ಷೆಗೆ ರೋಹಿತ್ ಶರ್ಮಾ ಒಳಪಡಲಿದ್ದಾರೆ. ರೋಹಿತ್ ಶರ್ಮಾ ಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ದೇಹದ ತೂಕವನ್ನು ಕಡಿಮೆ ಮಾಡಿಕೊಂಡರೆ ಶೀಘ್ರವೇ ಗುಣಮುಖರಾಗಲಿದ್ದು ಕಣಕ್ಕಿಳಿಯಲು ಫಿಟ್ ಆಗಲಿದ್ದಾರೆ.

ರೋಹಿತ್ ಗಾಯದ ಸಮಸ್ಯೆಯಿಂದ ಅವಕಾಶ ಕೈ ತಪ್ಪಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ

ರೋಹಿತ್ ಗಾಯದ ಸಮಸ್ಯೆಯಿಂದ ಅವಕಾಶ ಕೈ ತಪ್ಪಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ

ಭಾರತ ಏಕದಿನ ತಂಡದ ಪೂರ್ಣಾವಧಿಯ ನಾಯಕನಾಗಿ ಆಯ್ಕೆಯಾದ ರೋಹಿತ್ ಶರ್ಮಾ ತಾವು ತಂಡವನ್ನು ಮುನ್ನಡೆಸಬೇಕಿದ್ದ ಮೊದಲ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಹೀಗೆ ಗಾಯದ ಸಮಸ್ಯೆಯಿಂದ ರೋಹಿತ್ ಶರ್ಮಾ ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕೆಲ ಪಂದ್ಯಗಳಲ್ಲಿ, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕಣಕ್ಕಿಳಿಯುವ ಅವಕಾಶವನ್ನು ಕೂಡ ಕೈ ತಪ್ಪಿಸಿಕೊಂಡಿದ್ದರು.

ಇತ್ತೀಚಿನ ಚಿತ್ರಗಳಲ್ಲಿ ಸಣ್ಣ ಕಾಣುತ್ತಿದ್ದಾರೆ ಶರ್ಮಾ

ಇತ್ತೀಚಿನ ಚಿತ್ರಗಳಲ್ಲಿ ಸಣ್ಣ ಕಾಣುತ್ತಿದ್ದಾರೆ ಶರ್ಮಾ

ಇನ್ನು ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಸದ್ಯ ರೋಹಿತ್ ಶರ್ಮಾ ಜೊತೆ ಫಿಟ್‌ನೆಸ್ ಪಡೆದುಕೊಳ್ಳಲು ಶ್ರಮಿಸುತ್ತಿರುವ ಶಿಖರ್ ಧವನ್ ಹಾಗೂ ಸಂಜು ಸ್ಯಾಮ್ಸನ್ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ರೋಹಿತ್ ಶರ್ಮಾ ಜೊತೆಗಿನ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ರೋಹಿತ್ ಶರ್ಮಾ ಹಿಂದಿಗಿಂತಲೂ ಸಣ್ಣ ಕಾಣುತ್ತಿದ್ದು ಕಣಕ್ಕಿಳಿಯಲು ಶೀಘ್ರವೇ ಫಿಟ್ ಆಗಲಿದ್ದಾರೆ ಎಂಬ ಭರವಸೆ ಮೂಡಿಸಿದ್ದಾರೆ.

Story first published: Wednesday, January 5, 2022, 10:14 [IST]
Other articles published on Jan 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X