ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಎಲ್ ರಾಹುಲ್‌ನ್ನು ದಿಗ್ಗಜ ಕ್ರಿಕೆಟಿಗನಿಗೆ ಹೋಲಿಸಿದ ಜಹೀರ್ ಖಾನ್

ndia vs England: Zaheer Khan compares KL Rahul with Rahul Dravid

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಪಂದ್ಯ ಬುಧವಾರದಂದು (ಆಗಸ್ಟ್ 4) ಇಂಗ್ಲೆಂಡ್‌ನ ನಾಟಿಂಗ್ ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಕನ್ನಡಿಗ ಕೆಎಲ್ ರಾಹುಲ್ ಅತ್ಯುತ್ತಮ ಪ್ರದರ್ಶನ ನೀಡುವುದರ ಮೂಲಕ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಆಗಸ್ಟ್ 6ರಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದದ್ದೇನು?ಆಗಸ್ಟ್ 6ರಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದದ್ದೇನು?

ಒಂದೆಡೆ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಸಾಲುಸಾಲಾಗಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪರೇಡ್ ನಡೆಸುತ್ತಿದ್ದರೆ ಮತ್ತೊಂದೆಡೆ ನೆಲಕಚ್ಚಿ ನಿಂತಿದ್ದ ಕೆಎಲ್ ರಾಹುಲ್ ಮಾತ್ರ ಜವಾಬ್ದಾರಿಯುತ ಆಟವನ್ನು ಆಡುವುದರ ಮೂಲಕ ಟೀಮ್ ಇಂಡಿಯಾವನ್ನು ಭಾರೀ ಆಘಾತದಿಂದ ತಪ್ಪಿಸಿದರು. ರೋಹಿತ್ ಶರ್ಮಾ 36, ಚೇತೇಶ್ವರ್ ಪೂಜಾರ 4, ವಿರಾಟ್ ಕೊಹ್ಲಿ 0 ಮತ್ತು ಅಜಿಂಕ್ಯಾ ರಹಾನೆ 5 ರನ್ ಗಳಿಸಿ ಮೈದಾನದಿಂದ ನಿರ್ಗಮಿಸಿದರೂ ಎದೆಗುಂದದ ಕೆಎಲ್ ರಾಹುಲ್ ದಿಟ್ಟ ಹೋರಾಟ ನೀಡುವುದರ ಮೂಲಕ ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದರು.

ತನ್ನ ಟೆಸ್ಟ್ ದಾಖಲೆ ಮುರಿದ ಆ್ಯಂಡರ್ಸನ್ ಕುರಿತು ಪ್ರತಿಕ್ರಿಯಿಸಿದ ಅನಿಲ್ ಕುಂಬ್ಳೆತನ್ನ ಟೆಸ್ಟ್ ದಾಖಲೆ ಮುರಿದ ಆ್ಯಂಡರ್ಸನ್ ಕುರಿತು ಪ್ರತಿಕ್ರಿಯಿಸಿದ ಅನಿಲ್ ಕುಂಬ್ಳೆ

214 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ 84 ರನ್ ಬಾರಿಸಿ ಭಾರತ ತಂಡದ ರಕ್ಷಣಾ ಗೋಡೆಯಾಗಿ ಕೆಲಸ ನಿರ್ವಹಿಸಿದರು ಎಂದರೆ ತಪ್ಪಾಗಲಾರದು. ಕೆಎಲ್ ರಾಹುಲ್ ನೀಡಿದ ಈ ಪ್ರದರ್ಶನವನ್ನು ನೋಡಿ ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ದ್ರಾವಿಡ್ ಆಟವನ್ನು ಪುನಃ ನೋಡಿದಂತಾಯಿತು ಎಂದು ನೆಟ್ಟಿಗರು ಕೆಎಲ್ ರಾಹುಲ್ ಪ್ರದರ್ಶನವನ್ನು ಮೆಚ್ಚಿ ಕೊಂಡಾಡಿದ್ದಾರೆ. ಇನ್ನು ಭಾರತದ ಮಾಜಿ ವೇಗಿ ಜಹೀರ್ ಖಾನ್ ಕೂಡ ಕೆಎಲ್ ರಾಹುಲ್ ಪ್ರದರ್ಶನದ ಕುರಿತು ಮಾತನಾಡಿದ್ದು ಕೆಎಲ್ ರಾಹುಲ್ ಆಟವನ್ನು ರಾಹುಲ್ ದ್ರಾವಿಡ್ ಆಟದ ಜೊತೆ ಹೋಲಿಕೆ ಮಾಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ರಾಹುಲ್ ದ್ರಾವಿಡ್ ಜೊತೆ ಕೆಎಲ್ ರಾಹುಲ್ ಹೋಲಿಸಿದ ಜಹೀರ್ ಖಾನ್

ರಾಹುಲ್ ದ್ರಾವಿಡ್ ಜೊತೆ ಕೆಎಲ್ ರಾಹುಲ್ ಹೋಲಿಸಿದ ಜಹೀರ್ ಖಾನ್

ಇಬ್ಬರ ಹೆಸರಿನಲ್ಲೂ ರಾಹುಲ್ ಇದೆ, ಇಬ್ಬರು ಸಹ ಒಂದೇ ರಾಜ್ಯದ ಆಟಗಾರರು ಹೀಗಾಗಿ ಇಬ್ಬರೂ ಟೀಮ್ ಇಂಡಿಯಾಕ್ಕೆ ಒಂದೇ ರೀತಿಯ ಕೊಡುಗೆಯನ್ನು ನೀಡುತ್ತಿದ್ದಾರೆನೋ ಎಂದು ಜಹೀರ್ ಖಾನ್ ರಾಹುಲ್ ದ್ರಾವಿಡ್ ಜೊತೆ ಕೆಎಲ್ ರಾಹುಲ್ ಹೋಲಿಕೆ ಮಾಡಿ ಮಾತನಾಡಿದರು. ಈ ಹಿಂದೆ ಭಾರತ ಸಂಕಷ್ಟಕ್ಕೆ ಸಿಲುಕಿದಾಗ ರಾಹುಲ್ ದ್ರಾವಿಡ್ ಆಪದ್ಬಾಂಧವನಾಗಿ ನಿಲ್ಲುತ್ತಿದ್ದರು. ಅದೇ ರೀತಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದಾಗ ಆಪದ್ಬಾಂಧವನಾಗಿ ನಿಂತದ್ದು ಕೆಎಲ್ ರಾಹುಲ್ ಎಂದು ಜಹೀರ್ ಖಾನ್ ಕೆಎಲ್ ರಾಹುಲ್ ಅದ್ಭುತ ಪ್ರದರ್ಶನವನ್ನು ಕೊಂಡಾಡಿದ್ದಾರೆ.

ಈ ಶತಮಾನದಲ್ಲಿ ಇಂಗ್ಲೆಂಡ್ ನೆಲದಲ್ಲಿ ಎರಡು ಬಾರಿ 80ಕ್ಕೂ ಹೆಚ್ಚು ರನ್ ಬಾರಿಸಿದ ಭಾರತದ ನಾಲ್ಕನೇ ಓಪನರ್

ಈ ಶತಮಾನದಲ್ಲಿ ಇಂಗ್ಲೆಂಡ್ ನೆಲದಲ್ಲಿ ಎರಡು ಬಾರಿ 80ಕ್ಕೂ ಹೆಚ್ಚು ರನ್ ಬಾರಿಸಿದ ಭಾರತದ ನಾಲ್ಕನೇ ಓಪನರ್

ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 214 ಎಸೆತಗಳಿಗೆ 84 ರನ್ ಬಾರಿಸಿ ಆಪದ್ಭಾಂಧವನಾದ ಕೆಎಲ್ ರಾಹುಲ್ ಇಂಗ್ಲೆಂಡ್ ನೆಲದಲ್ಲಿ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಈ ಶತಮಾನದಲ್ಲಿ ಇಂಗ್ಲೆಂಡ್ ನೆಲದಲ್ಲಿ 2 ಬಾರಿ 80ಕ್ಕೂ ಹೆಚ್ಚು ರನ್ ಬಾರಿಸಿದ ನಾಲ್ಕನೇ ಭಾರತದ ಆರಂಭಿಕ ಆಟಗಾರ ಎಂಬ ಸಾಧನೆಯನ್ನು ಕೆಎಲ್ ರಾಹುಲ್ ಮಾಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆಯನ್ನು ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್ ಮತ್ತು ಮುರಳಿ ವಿಜಯ್ ಮಾಡಿದ್ದರು.

ಸಿರಾಜ್ & ಆಂಡರ್ಸನ್ ನಡುವೆ ಪಂದ್ಯದ ವೇಳೆ ಮಾತಿನ ಚಕಮಕಿ, ವಿಡಿಯೋ ವೈರಲ್ | Oneindia Kannada
ರಾಹುಲ್ ಇದ್ದಿದ್ರೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಸೋಲ್ತಾ ಇರಲಿಲ್ಲ!

ರಾಹುಲ್ ಇದ್ದಿದ್ರೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಸೋಲ್ತಾ ಇರಲಿಲ್ಲ!

ಕೆಎಲ್ ರಾಹುಲ್ ಇದ್ದಿದ್ದರೆ ನ್ಯೂಜಿಲೆಂಡ್ ವಿರುದ್ಧದ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ಸೋಲು ಇರಲಿಲ್ಲ ಎಂಬ ಅಭಿಪ್ರಾಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ. ಇಂಗ್ಲೆಂಡ್ ನೆಲದಲ್ಲಿ 214 ಎಸೆತಗಳನ್ನು ಎದುರಿಸಿ ವಿಕೆಟ್ ಒಪ್ಪಿಸದೆ ಸುದೀರ್ಘ ಇನ್ನಿಂಗ್ಸ್ ಆಡಿದ ಕೆಎಲ್ ರಾಹುಲ್ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಇದ್ದಿದ್ದರೆ ನ್ಯೂಜಿಲೆಂಡ್ ತಂಡ ಗೆಲ್ಲುತ್ತಿರಲಿಲ್ಲ ಎಂದು ಕ್ರೀಡಾಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Story first published: Saturday, August 7, 2021, 1:14 [IST]
Other articles published on Aug 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X