ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ನಡೆಯುತ್ತೋ, ನಡೆಯಲ್ವಾ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ!

Nearly 60% fans believe IPL might still happen this year: Survey

ಬೆಂಗಳೂರು, ಮೇ 1: ಕೊರೊನಾವೈರಸ್‌ನಿಂದಾಗಿ ವಿಶ್ವದಾದ್ಯಂತ ಬಹುತೇಕ ಎಲ್ಲಾ ಕ್ರೀಡಾಸ್ಪರ್ಧೆಗಳು ನಿಲುಗಡೆಯಾಗಿವೆ. ಭಾರತದ ಅದ್ದೂರಿ ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೂಡ ಸದ್ಯಕ್ಕೆ ರದ್ದಾಗಿದೆ. ಈ ವರ್ಷ ಐಪಿಎಲ್ ನಡೆಯುತ್ತೋ ಇಲ್ಲವೋ ಎಂಬ ಪ್ರಶ್ನೆಯನ್ನು ಅಭಿಮಾನಿಗಳ ಮುಂದಿಟ್ಟು ಸಮೀಕ್ಷೆ ನಡೆಸಲಾಗಿತ್ತು. ಇದಕ್ಕೆ ಬಂದ ಉತ್ತರವೇನು ಗೊತ್ತಾ?

T20 Ranking: ಪಾಕ್‌ನಿಂದ ನಂ.1 ಸ್ಥಾನ ಕಸಿದು ದಾಖಲೆ ಬರೆದ ಆಸೀಸ್!T20 Ranking: ಪಾಕ್‌ನಿಂದ ನಂ.1 ಸ್ಥಾನ ಕಸಿದು ದಾಖಲೆ ಬರೆದ ಆಸೀಸ್!

13ನೇ ಆವೃತ್ತಿಯ ಐಪಿಎಲ್ ಇದೇ ವರ್ಷ ನಡೆಯುತ್ತೋ ಇಲ್ಲವೋ ಎಂಬ ಪ್ರಶ್ನೆಗೆ ಸುಮಾರು 60 ಶೇಕಡಾ ಅಭಿಮಾನಿಗಳು ಹೌದೆಂದು ಉತ್ತರಿಸಿದ್ದಾರೆ. ಅಂದರೆ 60 ಶೇ.ಕ್ಕೂ ಹೆಚ್ಚಿನ ಮಂದಿ ಈ ವರ್ಷ ಐಪಿಎಲ್ ನಡೆಯುತ್ತೆ ಎಂದೇ ನಂಬಿದ್ದಾರೆ. ಇದರಲ್ಲಿ 13 ಶೇ. ಮಂದಿ ಐಪಿಎಲ್ ಖಾಲಿ ಮೈದಾನದಲ್ಲಿ ನಡೆಯಲಿದೆ ಎಂದಿದ್ದಾರೆ.

ಟೆಸ್ಟ್ ರ‍್ಯಾಂಕಿಂಗ್: ನಾಲ್ಕು ವರ್ಷದ ಬಳಿಕ ಅಗ್ರಸ್ಥಾನದಿಂದ ಕೆಳಕ್ಕಿಳಿದ ಭಾರತಟೆಸ್ಟ್ ರ‍್ಯಾಂಕಿಂಗ್: ನಾಲ್ಕು ವರ್ಷದ ಬಳಿಕ ಅಗ್ರಸ್ಥಾನದಿಂದ ಕೆಳಕ್ಕಿಳಿದ ಭಾರತ

ಅಸಲಿಗೆ ಐಪಿಎಲ್ ಟೂರ್ನಿ ಮಾರ್ಚ್ 29ರಂದು ಆರಂಭಗೊಳ್ಳಬೇಕಾಗಿತ್ತು. ಆದರೆ ಕೋವಿಡ್-19ನಿಂದಾಗಿ ಐಪಿಎಲ್ ಏಪ್ರಿಲ್ 15ರ ಬಳಿಕ ಮುಂದೂಡಲ್ಪಟ್ಟಿತ್ತು. ಭಾರತದಲ್ಲಿ ಲಾಕ್‌ಡೌನ್ ಮುಂದುವರೆಯುತ್ತಲೇ ಇರುವುದರಿಂದ ಐಪಿಎಲ್ ಕೂಡ ಈಗ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.

ತೆಲುಗು ಸಾಂಗ್ 'ಬುಟ್ಟ ಬೊಮ್ಮ'ಗೆ ಹೆಜ್ಜೆ ಹಾಕಿದ ಡೇವಿಡ್ ವಾರ್ನರ್: ವೀಡಿಯೋತೆಲುಗು ಸಾಂಗ್ 'ಬುಟ್ಟ ಬೊಮ್ಮ'ಗೆ ಹೆಜ್ಜೆ ಹಾಕಿದ ಡೇವಿಡ್ ವಾರ್ನರ್: ವೀಡಿಯೋ

ಅಂದ್ಹಾಗೆ ಐಪಿಎಲ್ ಕುರಿತ ಸಮೀಕ್ಷೆ ನಡೆಸಿದ್ದು 'ಮೈ ಟೀಮ್ 11' (MyTeam11). ಸುಮಾರು 10,000 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಸಮೀಕ್ಷೆಯಲ್ಲಿ ಮೈ ಟೀಮ್ 11 ಕಂಡುಕೊಂಡ ವಿಚಾರವೆಂದರೆ ಹೆಚ್ಚಿನ ಜನ ಕ್ರೀಡಾಸ್ಪರ್ಧೆಗಳು ಶುರುವಾಗಲಿದೆ ಎಂದು ಭಾವಿಸಿದ್ದಾರೆ. ಆದರೆ ದೀರ್ಘಕಾಲ ಕ್ರೀಡಾಕೂಟಗಳು ಖಾಲಿ ಮೈದಾನದಲ್ಲಿ ನಡೆಯಲಿದೆ ಎಂದು ಒಂದಿಷ್ಟು ಮಂದಿ ನಂಬಿದ್ದಾರೆ.

'ಐಪಿಎಲ್ ಅನ್ನು ಪರಿಗಣಿಸಿದರೆ, 60 ಶೇ. ಅಭಿಮಾನಿಗಳು ಅವಕಾಶ ಸಿಗುವ ಯಾವುದಾದರೂ ಸಮಯದಲ್ಲಿ ಐಪಿಎಲ್ ನಡೆಯಬಹುದು ಎಂದು ಅಂದುಕೊಂಡಿದ್ದಾರೆ. 40 ಶೇ. ಮಂದಿಗೆ ಈ ವರ್ಷ ಐಪಿಎಲ್ ನಡೆಯುತ್ತೆ ಅನ್ನೋ ನಂಬಿಕೆಯಿದೆ. ಇನ್ನು 13 ಶೇ. ಜನ ಜೂನ್-ಜುಲೈನಲ್ಲಿ ಐಪಿಎಲ್ ಅನ್ನು ಖಾಲಿ ಮೈದಾನದಲ್ಲಿ ನಡೆಸಬಹುದು ಎಂದು ಹೇಳುತ್ತಿದ್ದಾರೆ,' ಎಂದು ಮೈ ಟೀಮ್ 11 ತಿಳಿಸಿದೆ.

Story first published: Friday, May 1, 2020, 22:35 [IST]
Other articles published on May 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X