ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸನ್ ರೈಸರ್ಸ್ ಹೈದರಾಬಾದ್‌ನ ಮಾರಕ ಬೌಲರ್ ಹೊಗಳಿದ ವಿರಾಟ್ ಕೊಹ್ಲಿ

Need to track Umran Maliks progress, says Virat Kohli

ಅಬುಧಾಬಿ: ಸನ್ ರೈಸರ್ಸ್ ಹೈದರಾಬಾದ್ ತಂಡದ ಯುವ ಬೌಲರ್ ಉಮ್ರಾನ್ ಮಲಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಅದ್ಭುತ ಬೌಲಿಂಗ್‌ಗಾಗಿ ಗಮನ ಸೆಳೆದಿದ್ದರು. ಮಲಿಕ್ ಪ್ರದರ್ಶನದ ಬಗ್ಗೆ ಆರ್‌ಸಿಬಿ ನಾಯಕ, ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೂಡ ಆಕರ್ಷಿತರಾಗಿದ್ದರು. ಹೀಗಾಗಿ ಮಲಿಕ್ ಪ್ರಗತಿಯ ಬಗ್ಗೆ ಗಮನ ಹರಿಸುತ್ತಿರಬೇಕು ಎಂದು ಕೊಹ್ಲಿ ಹೇಳಿದ್ದಾರೆ.

ಐಪಿಎಲ್ ಪಂದ್ಯದಲ್ಲೇ ಗೆಳತಿಗೆ ಪ್ರಪೋಸ್ ಮಾಡಿದ ದೀಪಕ್ ಚಾಹರ್: ವಿಡಿಯೋಐಪಿಎಲ್ ಪಂದ್ಯದಲ್ಲೇ ಗೆಳತಿಗೆ ಪ್ರಪೋಸ್ ಮಾಡಿದ ದೀಪಕ್ ಚಾಹರ್: ವಿಡಿಯೋ

ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಬುಧವಾರ (ಅಕ್ಟೋಬರ್‌ 6) ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 52ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ್ದ ಉಮ್ರಾನ್ ಮಲಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ 1 ವಿಕೆಟ್‌ ಕೂಡ ಉರುಳಿಸಿದ್ದರು. ಇದೇ ಕಾರಣಕ್ಕೆ ಮಲಿಕ್ ಸುದ್ದಿಯಲ್ಲಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪ್ರತಿಭಾನ್ವಿತ ಆಟಗಾರ

ಜಮ್ಮು ಮತ್ತು ಕಾಶ್ಮೀರದ ಪ್ರತಿಭಾನ್ವಿತ ಆಟಗಾರ

22ರ ಹರೆಯದ ಉಮ್ರಾನ್ ಮಲಿಕ್ ಅವರು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದವರು. ಹೈದರಾಬಾದ್ ಮತ್ತು ಬೆಂಗಳೂರು ನಡುವಿನ ಪಂದ್ಯದಲ್ಲಿ ವೇಗದ ಬೌಲಿಂಗ್‌ ಗಾಗಿ ಉಮ್ರಾನ್ ಹೆಚ್ಚು ಗಮನ ಸೆಳೆದಿದ್ದರು. ಅವರ ಬೌಲಿಂಗ್‌ ವೇಗ 152.95 kph ಇತ್ತು. 4 ಓವರ್‌ ಎಸೆದಿದ್ದ ಉಮ್ರಾನ್ 21 ರನ್‌ ನೀಡಿ 1 ವಿಕೆಟ್ ಪಡೆದಿದ್ದರು. 5.20ರ ಎಕಾನಮಿ ತೋರಿಸಿದ್ದರು. ಮಲಿಕ್‌ಗೆ ವಿಕೆಟ್ ಲಭಿಸಿದ್ದು ಆರ್‌ಸಿಬಿಯ ಶ್ರೀಕರ್ ಭರತ್ ಅವರದ್ದು. ಮಲಿಕ್ ಅವರ ಬೌಲಿಂಗ್ ಆ್ಯಕ್ಷನ್ ಮತ್ತು ವೇಗ ಸ್ಟೇಡಿಯಂನಲ್ಲಿ ಮತ್ತು ಪಂದ್ಯ ವೀಕ್ಷಿಸುತ್ತಿದ್ದ ಎಲ್ಲರ ಗಮನ ಸೆಳೆದಿತ್ತು. ಮುಂಬರುವ ದಿನಗಳಲ್ಲಿ ಉಮ್ರನ್‌ಗೆ ಒಳ್ಳೆಯ ಭವಿಷ್ಯವಿದೆ ಅನ್ನೋದನ್ನು ಮಲಿಕ್ ತನ್ನ ಬೌಲಿಂಗ್‌ ಮೂಲಕವೇ ಹೇಳಿದ್ದಾರೆ.

ಹೀರೋನ ಪ್ರಗತಿ ಗಮನಿಸೋದು ಅಗತ್ಯವಾಗಿದೆ

ಹೀರೋನ ಪ್ರಗತಿ ಗಮನಿಸೋದು ಅಗತ್ಯವಾಗಿದೆ

ಪಂದ್ಯದ ಬಳಿಕ ಮಾತನಾಡಿದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ, "ಐಪಿಎಲ್ ಟೂರ್ನಿ ಪ್ರತೀ ವರ್ಷವೂ ಪ್ರತಿಭೆಗಳನ್ನು ಹೊರಗೆಳೆಯುತ್ತದೆ. 150 kph ವೇಗದಲ್ಲಿ ಬೌಲಿಂಗ್ ಮಾಡುವ ಹುಡುಗನನ್ನು ನೋಡೋಕೆ ಖುಷಿಯಾಗುತ್ತದೆ. ಈಗಿನಿಂದಲೇ ಪ್ರತಭಾನ್ವಿತರ ವೈಯಕ್ತಿಕ ಏಳಿಗೆಯನ್ನು ಗಮನಿಸಬೇಕಾದ ಅವಶ್ಯಕತೆಯಿದೆ, ಪ್ರಾಮುಖ್ಯತೆಯಿದೆ. ಭಾರತೀಯ ಕ್ರಿಕೆಟ್‌ನಲ್ಲಿ ವೇಗಿಗಳ ಬಣ ದೊಡ್ಡದಿದೆ ಎನ್ನಲು ಖುಷಿಯಾಗುತ್ತದೆ. ಇಂಥ ಪ್ರತಿಭೆಗಳು ನಿಮ್ಮ ಕಣ್ಣಿಗೆ ಬಿದ್ದಾಗ ನೀವು ಅವರ ಪ್ರತಿಭೆಯನ್ನು ಇನ್ನೂ ಬೆಳೆಸುವ ಕಡೆಗೆ ಗಮನ ಹರಿಸಬೇಕಾಗುತ್ತದೆ," ಎಂದು ಕೊಹ್ಲಿ ಹೇಳಿದ್ದಾರೆ. ಹೈದರಾಬಾದ್ vs ಬೆಂಗಳೂರು ಮುಖಾಮುಖಿಯಲ್ಲಿ ಬೆಂಗಳೂರು 4 ರನ್‌ ರೋಚಕ ಜಯ ಗಳಿಸಿತ್ತು.

ಎಸ್‌ಆರ್‌ಎಚ್ vs ಆರ್‌ಸಿಬಿ ಸ್ಕೋರ್‌ಕಾರ್ಡ್

ಎಸ್‌ಆರ್‌ಎಚ್ vs ಆರ್‌ಸಿಬಿ ಸ್ಕೋರ್‌ಕಾರ್ಡ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸನ್ ರೈಸರ್ಸ್ ಹೈದರಾಬಾದ್, ಜೇಸನ್ ರಾಯ್ 44, ವೃದ್ಧಿಮಾನ್ ಸಹಾ 13, ಕೇನ್ ವಿಲಿಯಮ್ಸನ್ 31, ಪ್ರಿಯಂ ಗರ್ಗ್ 15, ಅಬ್ದುಲ್ ಸಮದ್ 1, ಅಭಿಷೇಕ್ ಶರ್ಮಾ 13, ಜೇಸನ್ ಹೋಲ್ಡರ್ 16, ರಶೀದ್ ಖಾನ್ 7 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್‌ ಕಳೆದು 141 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಿರಾಟ್ ಕೊಹ್ಲಿ 5, ದೇವದತ್ ಪಡಿಕ್ಕಲ್ 41, ಶ್ರೀಕರ್ ಭಾರತ್ 12, ಗ್ಲೆನ್ ಮ್ಯಾಕ್ಸ್‌ವೆಲ್ 40, ಎಬಿ ಡಿವಿಲಿಯರ್ಸ್ 19, ಡೇನಿಯಲ್ ಕ್ರಿಶ್ಚಿಯನ್ 1, ಶಹಬಾಜ್ ಅಹ್ಮದ್ 14, ಜಾರ್ಜ್ ಗಾರ್ಟನ್ 2 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 137 ರನ್‌ ಗಳಿಸಿತು. ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಜಾರ್ಜ್ ಗಾರ್ಟನ್ 1, ಹರ್ಷಲ್ ಪಟೇಲ್ 3, ಯುಜುವೇಂದ್ರ ಚಾಹಲ್ 1, ಡ್ಯಾನ್ ಕ್ರಿಸ್ಚಿಯನ್ 1 ವಿಕೆಟ್ ಪಡೆದರೆ, ಬೆಂಗಳೂರು ಇನ್ನಿಂಗ್ಸ್‌ನಲ್ಲಿ ಹೈದರಾಬಾದ್‌ನ ಭುವನೇಶ್ವರ್ ಕುಮಾರ್ 1, ಜೇಸನ್ ಹೋಲ್ಡರ್ 1, ಸಿದ್ಧಾರ್ಥ್ ಕೌಲ್ 1, ಉಮ್ರನ್ ಮಲಿಕ್ 1, ರಶೀದ್ ಖಾನ್ 1 ವಿಕೆಟ್‌ನಿಂದ ಗಮನ ಸೆಳೆದರು. ಕೇನ್ ವಿಲಿಯಮ್ಸನ್ ಪಂದ್ಯಶ್ರೇಷ್ಠರೆನಿಸಿದರು.

Story first published: Friday, October 8, 2021, 17:25 [IST]
Other articles published on Oct 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X