ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಖಿಲ ಭಾರತ ಮಹಿಳಾ ಆಯ್ಕೆಸಮಿತಿ ಮುಖ್ಯಸ್ಥೆಯಾಗಿ ನೀತು ಡೇವಿಡ್ ಆಯ್ಕೆ

Neetu David appointed as head of All-India Women’s Selection Committee

ನವದೆಹಲಿ: 1990 ಮತ್ತು 2000ನೇ ದಶತಕ ಆರಂಭದಲ್ಲಿ ಅತ್ಯುತ್ತಮ ಕ್ರಿಕೆಟರ್ ಎನಿಸಿದ್ದ ನೀತು ಡೇವಿಡ್ ಅವರು ಆಲ್ ಇಂಡಿಯಾ ವಿಮೆನ್ಸ್ ಸೆಲೆಕ್ಷನ್ ಕಮಿಟಿಯ (ಅಖಿಲ ಭಾರತ ಮಹಿಳಾ ಆಯ್ಕೆಸಮಿತಿ) ಮುಖ್ಯಸ್ಥೆಯಾಗಿ ಆಯ್ಕೆಯಾಗಿದ್ದಾರೆ. ಹೇಮಲತಾ ಕಲಾ ಅವರಿಗೆ ಬದಲಾಗಿ ನೀತು ಆಯ್ಕೆಗೊಂಡಿದ್ದಾರೆ.

ಎಸ್‌ಆರ್‌ಎಚ್-ಕೆಕೆಆರ್‌ ಮುಖಾಮುಖಿಯ ಕುತೂಹಲಕಾರಿ ಅಂಕಿ-ಅಂಶಗಳುಎಸ್‌ಆರ್‌ಎಚ್-ಕೆಕೆಆರ್‌ ಮುಖಾಮುಖಿಯ ಕುತೂಹಲಕಾರಿ ಅಂಕಿ-ಅಂಶಗಳು

ನೀತು ಆಯ್ಕೆಯಾಗಿರುವ ವಿಚಾರವನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಶನಿವಾರ ತಿಳಿಸಿದೆ. ಮೀತು ಮುಖರ್ಜೀ, ರೇಣು ಮಾರ್ಗರೇಟ್, ಆರತಿ ವೈದ್ಯ ಮತ್ತು ವಿ ಕಲ್ಪನಾ ಅವರ ಸಮಿತಿಗೆ ನೀತು ಸೇರಿಕೊಳ್ಳಲಿದ್ದಾರೆ. ಸಮಿತಿಯಲ್ಲಿರುವ ಇವರೆಲ್ಲರೂ ಮಾಜಿ ಕ್ರಿಕೆಟರ್‌ಗಳು.

ಕಣ್ಣೆದುರೇ ಕುಸಿದು ಬಿದ್ದ ಡೀನ್ ಜೋನ್ಸ್ ಜೀವ ಉಳಿಸಲು ಉಸಿರು ನೀಡಿದ್ದ ಬ್ರೆಟ್ ಲೀಕಣ್ಣೆದುರೇ ಕುಸಿದು ಬಿದ್ದ ಡೀನ್ ಜೋನ್ಸ್ ಜೀವ ಉಳಿಸಲು ಉಸಿರು ನೀಡಿದ್ದ ಬ್ರೆಟ್ ಲೀ

ನಾಲ್ಕು ವರ್ಷಗಳ ಕಾಲ ಮಹಿಳಾ ಆಯ್ಕೆ ಸಮಿತಿಯನ್ನು ಮುನ್ನಡೆಸಿದ್ದ ಹೇಮಲತಾ ಕಲಾ ಅವರ ಅಧಿಕಾರವಧಿ ಮಾರ್ಚ್ 2020ಕ್ಕೆ ಕೊನೆಗೊಂಡಿತ್ತು. ಸುಧಾ ಷಾ, ಅಂಜಲಿ ಪೆಂಧಾರ್ಕರ್, ಶಶಿ ಗುಪ್ತಾ ಮತ್ತು ಲೋಪ ಮುದ್ರಾ ಬ್ಯಾನರ್ಜೀ ಮೊದಲಾದವರು ಆ ಸಮಿತಿಯಲ್ಲಿದ್ದರು.

ಮಾಜಿ ನಾಯಕ ಗೌತಂ ಗಂಭೀರ್ ಹೇಳಿದ ಹಾಲೀ ಐಪಿಎಲ್ ನ ಬೆಸ್ಟ್ ಬ್ಯಾಟ್ಸ್ ಮ್ಯಾನ್ಮಾಜಿ ನಾಯಕ ಗೌತಂ ಗಂಭೀರ್ ಹೇಳಿದ ಹಾಲೀ ಐಪಿಎಲ್ ನ ಬೆಸ್ಟ್ ಬ್ಯಾಟ್ಸ್ ಮ್ಯಾನ್

ಹಿಂದಿನ ಸಮಿತಿಯ ಈ ಸದಸ್ಯರಿಗೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಮಹಿಳಾ ವಿಶ್ವ ಟಿ20ಗೆ ತಂಡವನ್ನು ಆರಿಸುವ ಹೊಣೆಗಾರಿಕೆ ನೀಡಲಾಗಿತ್ತು. ಈ ಟೂರ್ನಿಯ ಫೈನಲ್‌ನಲ್ಲಿ ಭಾರತ-ಮತ್ತು ಆಸ್ಟ್ರೇಲಿಯಾ ತಂಡಗಳು ಕಾದಾಡಿದ್ದವು. ಆದರೆ ಫೈನಲ್‌ನಲ್ಲಿ ಭಾರತೀಯ ವನಿತೆಯರು ಎದುರಾಳಿಗೆ 85 ರನ್‌ನಿಂದ ಶರಣಾಗಿದ್ದರು.

Story first published: Saturday, September 26, 2020, 18:49 [IST]
Other articles published on Sep 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X