ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಾಂಖೆಡೆಯಲ್ಲಿ ಐಪಿಎಲ್ ವೀಕ್ಷಿಸುವವರಿಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯ

Negative RT-PCR test report mandatory to watch matches at Wankhede Stadium

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಆವೃತ್ತಿಯ ಪಂದ್ಯಗಳನ್ನು ಕ್ರಿಕೆಟ್ ಅಭಿಮಾನಿಗಳು ಸ್ಟೇಡಿಯಂನಲ್ಲಿದ್ದು ವೀಕ್ಷಿಸಲು ಅವಕಾಶವಿಲ್ಲ. ಐಪಿಎಲ್ ಪಂದ್ಯಗಳು ಸದ್ಯ ಕದ ಮುಚ್ಚಿದ ಸ್ಟೇಡಿಯಂನಲ್ಲಿ ನಡೆಯುತ್ತಿವೆ. ಆದರೆ ಮುಂಬೈಯ ವಾಂಖೆಡೆ ಮೈದಾನದಲ್ಲಿದ್ದು ಪಂದ್ಯ ವೀಕ್ಷಿಸುವ ಅಧಿಕಾರಿಗಳಿಗೂ ಇನ್ಮುಂದೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯವಾಗಲಿದೆ.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್

ಕಳೆದ ವಾರ ಮುಂಬೈಯ ಪ್ರಸಿದ್ಧ ವಾಂಖೆಡೆ ಸ್ಟೇಡಿಯಂನಲ್ಲಿ 10 ಮಂದಿ ಮೈದಾನ ಸಿಬ್ಬಂದಿ ಮತ್ತು 5 ಮಂದಿ ಕಾರ್ಯಕ್ರಮ ನಿರ್ವಹಣಾ ಸಿಬ್ಬಂದಿಗೆ ಕೊರೊನಾ ಸೋಂಕಿರುವುದು ಕಂಡು ಬಂದಿತ್ತು. ಹೀಗಾಗಿ ಎಚ್ಚೆತ್ತುಕೊಂಡಿರುವ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮೈದಾನಕ್ಕೆ ಬರುವ ಅಧಿಕಾರಿಗಳಿಗೂ ಕೊರೊನಾ ನೆಗೆಟಿವ್ ವರದಿ ಕಡ್ಡಾಯಗೊಳಿಸಿದೆ.

ಐಪಿಎಲ್ 2021 : ಚೆನ್ನೈ vs ಡೆಲ್ಲಿ ಮುಖಾಮುಖಿ ಕಾದಾಟದಲ್ಲಿ ಯಾರದ್ದು ಮೇಲುಗೈ?ಐಪಿಎಲ್ 2021 : ಚೆನ್ನೈ vs ಡೆಲ್ಲಿ ಮುಖಾಮುಖಿ ಕಾದಾಟದಲ್ಲಿ ಯಾರದ್ದು ಮೇಲುಗೈ?

ಮುಂಬೈ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) ತನ್ನ ಅಪೆಕ್ಸ್ ಕೌನ್ಸಿಲ್ ಸದಸ್ಯರು ವಾಂಖೆಡೆ ಸ್ಟೇಡಿಯಂಗೆ ಪ್ರವೇಶಿಸುವುದಾದರೆ ಕೋವಿಡ್-19 ನೆಗೆಟಿವ್ ವರದಿ ಕಡ್ಡಾಯವಾಗಿ ನೀಡುವಂತೆ ಕೇಳಿದೆ. ಪದಾಧಿಕಾರಿಗಳು ಸೇರಿ ಎಂಸಿಎಯಲ್ಲಿ ಒಟ್ಟಾರೆ 17 ಸದಸ್ಯರಿದ್ದಾರೆ.

'ಪ್ರೀತಿಯ ಅಪೆಕ್ಸ್ ಕೌನ್ಸಿಲ್‌ನ ಸದಸ್ಯರೆ, ಬಿಸಿಸಿಐ ಮುನ್ನೆಚ್ಚರಿಕೆಯಂತೆ ವಾಂಖೆಡೆ ಸ್ಟೇಡಿಯಂಗೆ ಪ್ರವೇಶಿಸುವವರಿಗೆ ಆರ್‌ಟಿ-ಪಿಸಿಆರ್‌ ನೆಗೆಟಿವ್ ವರದಿ ಕಡ್ಡಾಯವಾಗಿದೆ. ಪಂದ್ಯ ನಡೆಯುವ ಮುನ್ನ 48 ಗಂಟೆಗಳ ಒಳಗಾಗಿ ತೆಗೆಯಲಾದ ಕೋವಿಡ್-19 ನೆಗೆಟಿವ್ ವರದಿ ಕಡ್ಡಾಯವಾಗಿ ಜೊತೆಗಿರಬೇಕಾಗುತ್ತದೆ. ವಾಕ್ಸಿನ್ ಹಾಕಿಸಿಕೊಂಡವರಿಗೂ ಇದು ಅನ್ವಯವಾಗುತ್ತದೆ,' ಎಂದು ಎಂಸಿಎ ಕಾರ್ಯದರ್ಶಿ ಸಂಜಯ್ ನಾಯ್ಕ್ ಇಮೇಲ್‌ನಲ್ಲಿ ತಿಳಿಸಿದ್ದಾರೆ.

Story first published: Saturday, April 10, 2021, 16:19 [IST]
Other articles published on Apr 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X