ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಸ್‌ ಗೇಲ್ ಆಡಲಿದ್ದ ಟ್ವೆಂಟಿ 20 ಟೂರ್ನಿಯನ್ನೇ ರದ್ದುಗೊಳಿಸಿದ ನೇಪಾಳ

Nepal cancels EPL T20 tourney featuring Chris Gayle

ಕಠ್ಮಂಡು, ಮಾರ್ಚ್ 6: ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರೀಸ್‌ ಗೇಲ್ ಸಹಿತ ಇನ್ನಿತರ ಆಟಗಾರರು ಆಡಲಿದ್ದ ಟ್ವೆಂಟಿ 20 ಲೀಗ್ ಟೂರ್ನಿಯನ್ನೇ ನೇಪಾಳ ಸದ್ಯಕ್ಕೆ ರದ್ದುಗೊಳಿಸಿದೆ. ಮಾರಕ ಸೋಂಕು ಕೊರೊನಾ ವೈರಸ್‌ ಭೀತಿಯಿಂದಾಗಿ ಟೂರ್ನಿಯನ್ನು ಮುಂದೂಡಿರುವುದಾಗಿ ಆಯೋಜಕರು ತಿಳಿಸಿದ್ದಾರೆ.

ಕಿವೀಸ್ ವಿರುದ್ದ ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಭಾವನಾತ್ಮಕ ಟ್ವೀಟ್ಕಿವೀಸ್ ವಿರುದ್ದ ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಭಾವನಾತ್ಮಕ ಟ್ವೀಟ್

ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಎವರೆಸ್ಟ್ ಪ್ರೀಮಿಯರ್ ಲೀಗ್ (ಇಪಿಎಲ್) ಮಾರ್ಚ್ 14ರಿಂದ ಆರಂಭಿಸಲು ದಿನ ನಿಗದಿಯಾಗಿತ್ತು. ಆದರೆ ಟೂರ್ನಿಯನ್ನು ಮುಂದೊಮ್ಮೆ ನಡೆಸಲು ಸಾಧ್ಯವಾಗುವ ಯಾವುದಾದರೂ ದಿನಾಂಕಕ್ಕೆ ಮುಂದೂಡಲಾಗಿದೆ ಎಂದು ಹೇಳಲಾಗಿದೆ.

ಭಾರತದಲ್ಲಿ ಕ್ರಿಕೆಟ್‌ ದಿಗ್ಗಜರ ಕುತೂಹಲಕಾರಿ ಟೂರ್ನಿ: ಸಂಪೂರ್ಣ ಮಾಹಿತಿಭಾರತದಲ್ಲಿ ಕ್ರಿಕೆಟ್‌ ದಿಗ್ಗಜರ ಕುತೂಹಲಕಾರಿ ಟೂರ್ನಿ: ಸಂಪೂರ್ಣ ಮಾಹಿತಿ

ಟೂರ್ನಿಯಲ್ಲಿ ಕ್ರಿಸ್‌ ಗೇಲ್, ನೇಪಾಳದ ಸ್ಟಾರ್ ಆಟಗಾರ ಸಂದೀಪ್ ಲಮಿಚಾನೆ ಮತ್ತು ಅಫ್ಘಾನಿಸ್ತಾನ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಮೊಹಮ್ಮದ್ ಶಹಝಾದ್ ಇನ್ನಿತರ ಆಟಗಾರರು ಆಡುವುದರಲ್ಲಿದ್ದರು. ಆದರೆ ಆ ಟೂರ್ನಿ ಈಗ ಅಧಿಕೃತವಾಗಿ ರದ್ದಾಗಿದೆ. ನೇಪಾಳದಲ್ಲಿ ಈವರೆಗೆ ಒಂದೇ ಒಂದು ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದೆ.

ಐಪಿಎಲ್ 2020: ಬಿಸಿಸಿಐ ವಿರುದ್ಧ ಪ್ರತಿಭಟನೆಗೆ ಸಿದ್ಧವಾಗಿವೆ ಫ್ರಾಂಚೈಸಿಗಳುಐಪಿಎಲ್ 2020: ಬಿಸಿಸಿಐ ವಿರುದ್ಧ ಪ್ರತಿಭಟನೆಗೆ ಸಿದ್ಧವಾಗಿವೆ ಫ್ರಾಂಚೈಸಿಗಳು

ಒಂದೇ ಪ್ರಕರಣ ಪತ್ತೆಯಾಗಿದ್ದರೂ ಸೋಂಕು ಇತರರಿಗೆ ಹಬ್ಬುವುದನ್ನು ತಪ್ಪಿಸಲು ಟಿ20 ಲೀಗ್‌ ಟೂರ್ನಿಯನ್ನು ರದ್ದುಗೊಳಿಸಲು ನೇಪಾಳದ ಆರೋಗ್ಯ ಸಚಿವ ಸೂಚಿಸಿದ್ದರು ಎಂದು ತಿಳಿದುಬಂದಿದೆ. '2020ಎ ಇಪಿಎಲ್ ಅನ್ನು ತಾತ್ಕಾಲಿಕವಾಗಿ ಮುಂದೂಡಬೇಕಾಗಿರುವ ವಿಚಾರವನ್ನು ತಿಳಿಸಲು ನಮಗೆ ಸಹಜವಾಗಿಯೇ ಬೇಸರವಾಗುತ್ತಿದೆ,' ಎಂದು ಟೂರ್ನಿಯ ನಿರ್ದೇಶಕ ಅಮೀರ್ ಅಖ್ತರ್ ಹೇಳಿದ್ದಾರೆ.

Story first published: Friday, March 6, 2020, 15:47 [IST]
Other articles published on Mar 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X