ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್ ಏಕದಿನದಲ್ಲಿ ನೇಪಾಳಕ್ಕೆ ಚೊಚ್ಚಲ ಗೆಲುವು

Nepal registered its first international odi win against netherlands

ಆಮ್ಸ್‌ಸ್ಟೆಲ್ವೀನ್, ಆಗಸ್ಟ್ 4: ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಎರಡನೆಯ ಪಂದ್ಯದಲ್ಲಿಯೇ ನೇಪಾಳ ತಂಡ ಚೊಚ್ಚಲ ಜಯ ದಾಖಲಿಸಿದೆ.

ನೆದರ್‌ಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸಿಸುವ ಮೂಲಕ ನೇಪಾಳ ಮೊದಲ ಜಯವನ್ನು ಸ್ಮರಣೀಯವನ್ನಾಗಿಸಿಕೊಂಡಿತು.

ಬುಧವಾರ ನಡೆದ ತನ್ನ ಪಾದಾರ್ಪಣೆಯ ಪಂದ್ಯದಲ್ಲಿ ನೆದರ್‌ಲೆಂಡ್ ವಿರುದ್ಧ 55 ರನ್‌ಗಳಿಂದ ಸೋಲು ಅನುಭವಿಸಿದ್ದ ನೆರೆಯ ದೇಶದ ಆಟಗಾರರು, ಎರಡನೆಯ ಪಂದ್ಯದಲ್ಲಿ ಕೇವಲ ಒಂದು ರನ್‌ನಿಂದ ಗೆಲುವು ಪಡೆದು ರೋಮಾಂಚನದ ಸಂಭ್ರಮ ಅನುಭವಿಸಿತು. ಜತೆಗೆ ಎರಡು ಪಂದ್ಯಗಳ ಸರಣಿಯಲ್ಲಿ ಸಮಬಲ ಸಾಧಿಸಿತು.

ಮಹಿಳಾ ಕ್ರಿಕೆಟ್ ಲೀಗ್‌: ಮೊದಲ ಶತಕ ಸಿಡಿಸಿದ ಸ್ಮೃತಿ ಮಂದಾನಮಹಿಳಾ ಕ್ರಿಕೆಟ್ ಲೀಗ್‌: ಮೊದಲ ಶತಕ ಸಿಡಿಸಿದ ಸ್ಮೃತಿ ಮಂದಾನ

ಒತ್ತಡದ ಸನ್ನಿವೇಶದಲ್ಲಿ ಜವಾಬ್ದಾರಿಯನ್ನು ಸ್ವತಃ ತಮ್ಮ ಹೆಗಲಿಗೆ ವರ್ಗಾಯಿಸಿಕೊಂಡು ಬೌಲಿಂಗ್ ಮಾಡಿದ ನೇಪಾಳದ ನಾಯಕ ಪರಾಸ್ ಖಾಡ್ಕ ತಂಡಕ್ಕೆ ಗೆಲುವು ತಂದಿತ್ತರು.

ಮೊದಲು ಬ್ಯಾಟಿಂಗ್ ಮಾಡಿದ ನೇಪಾಳ, ನಾಯಕ ಪರಾಸ್ ಖಾಡ್ಕ ಅವರ ತಾಳ್ಮೆಯ 51 (69) ಮತ್ತು ಸೊಂಪಾಲ್ ಕಮಿ ಅವರ ಬಿರುಸಿನ 61 (46) ರನ್‌ಗಳ ನೆರವಿನಿಂದ 48.5 ಓವರ್‌ಗಳಲ್ಲಿ 216 ರನ್ ಗಳಿಸಿ ಆಲೌಟ್ ಆಯಿತು.

ವಿರಾಟ್ ಕೊಹ್ಲಿ-ಜೇಮ್ಸ್ ಆಂಡರ್ಸನ್ ಯುದ್ಧದಲ್ಲಿ ಗೆದ್ದಿದ್ದು ಯಾರು? ವಿರಾಟ್ ಕೊಹ್ಲಿ-ಜೇಮ್ಸ್ ಆಂಡರ್ಸನ್ ಯುದ್ಧದಲ್ಲಿ ಗೆದ್ದಿದ್ದು ಯಾರು?

ಗುರಿ ಬೆನ್ನತ್ತಿದ ನೆದರ್‌ಲೆಂಡ್ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳತೊಡಗಿತು. 185 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಸೋಲಿನ ಅಂಚಿಗೆ ಸಿಲುಕಿದ್ದ ತಂಡಕ್ಕೆ ಕೊನೆಯ ಆಟಗಾರರಾದ ಫ್ರೆಸ್ ಕ್ಲಾಸೆನ್ ಮತ್ತು ಪೌಲ್ ವಾನ್ ಮೀಕೆರೆನ್ ಆಸರೆಯಾದರು.

ಕೊನೆಯ ಓವರ್‌ನಲ್ಲಿ ನೆದರ್‌ಲೆಂಡ್ ತಂಡಕ್ಕೆ ಆರು ರನ್ ಅವಶ್ಯಕತೆಯಿತ್ತು. ಆಗ ಚೆಂಡನ್ನು ಸ್ವತಃ ಬೌಲಿಂಗ್‌ಗೆ ಇಳಿದ ಖಾಡ್ಕ ಚುರುಕಿನ ದಾಳಿ ನಡೆಸಿದರು. ಕೊನೆಯ ಎಸೆತದಲ್ಲಿ ಎರಡು ರನ್ ಬೇಕಿದ್ದಾಗ ಕ್ಲಾಸೆನ್ ರನ್‌ಔಟ್ ಆದರು.

ಇದರಿಂದ ನೇಪಾಳ ಒಂದು ರನ್‌ನಿಂದ ಗೆಲುವಿನ ನಗೆ ಬೀರಿತು.

Story first published: Saturday, August 4, 2018, 15:21 [IST]
Other articles published on Aug 4, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X