ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಭಿಮಾನ ತೋರಿಸಿದವರ ವಿರುದ್ಧವೇ ದೂರು ಕೊಟ್ಟ ಗಂಭೀರ್; ಇಂಥವನು ಸ್ಟಾರ್ ಹೇಗಾದ ಎಂದ ನೆಟ್ಟಿಗರು!

Netizens troll Gautam Gambhir after he posts about against a gully cricket tournament organiser

ಬಹುಶಃ ಭಾರತ ದೇಶದಲ್ಲಿ ಓರ್ವ ಕ್ರಿಕೆಟ್ ಆಟಗಾರನಿಗೆ ಸಿಗುವಷ್ಟು ಮನ್ನಣೆ, ಪ್ರೀತಿ ಹಾಗೂ ಗೌರವ ಬೇರೆ ಯಾವುದೇ ದೇಶದಲ್ಲಿಯೂ ಕೂಡ ಸಿಗುವುದಿಲ್ಲ ಎನಿಸುತ್ತದೆ. ಕ್ರಿಕೆಟ್ ಹಲವಾರು ಕ್ರಿಕೆಟಿಗರನ್ನು ವಿಶ್ವಮಟ್ಟಕ್ಕೆ ಗುರುತಿಸಿಕೊಳ್ಳಲು ವೇದಿಕೆಯನ್ನು ನಿರ್ಮಿಸಿ ಕೊಟ್ಟಿದೆ. ಈ ಕ್ರೀಡೆಯಿಂದ ಜಗತ್ತಿನಾದ್ಯಂತ ಅಪಾರವಾದ ಅಭಿಮಾನಿ ಬಳಗವನ್ನು ಹಲವಾರು ಕ್ರಿಕೆಟಿಗರು ಗಳಿಸಿದ್ದಾರೆ.

ಐಪಿಎಲ್ 2022: ಮೆಗಾ ಹರಾಜಿನಲ್ಲಿ ನೂತನ ನಾಯಕರನ್ನು ಖರೀದಿಸಲಿರುವ 5 ತಂಡಗಳಿವುಐಪಿಎಲ್ 2022: ಮೆಗಾ ಹರಾಜಿನಲ್ಲಿ ನೂತನ ನಾಯಕರನ್ನು ಖರೀದಿಸಲಿರುವ 5 ತಂಡಗಳಿವು

ಇನ್ನು ಟೀಮ್ ಇಂಡಿಯಾ ಆಟಗಾರರ ಅಭಿಮಾನಿಗಳ ವಿಚಾರಕ್ಕೆ ಬಂದರೆ ಕ್ರೇಜ್ ಇತರೆ ದೇಶಗಳಿಗಿಂತ ದುಪ್ಪಟ್ಟು ಎಂದೇ ಹೇಳಬಹುದು. ಬೇರೆ ದೇಶಗಳ ಕ್ರೀಡಾಂಗಣಗಳಲ್ಲಿ ಸಚಿನ್ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದಾಗ ಇಡೀ ಮೈದಾನವೇ ಸಚಿನ್ ಸಚಿನ್ ಎಂದು ಕೂಗುವಂತಹ ಕ್ರೇಜ್ ಇತ್ತು. ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಎಂಎಸ್ ಧೋನಿ ಬಾರಿಸಿದ ಚೆಂಡು ಕ್ರೀಡಾಂಗಣದಲ್ಲೇ ಇದ್ದ ಪಕ್ಕದ ರಸ್ತೆಯಲ್ಲಿ ಬಿದ್ದಿತ್ತು. ಹೀಗಾಗಿ ಈ ಜಾಗಕ್ಕೆ ಧೋನಿ ಸಿಕ್ಸ್ ಪಾಯಿಂಟ್ ಎಂಬ ಹೆಸರನ್ನು ಇಡಲಾಗಿದೆ. ಇನ್ನು ಮೆಲ್ಬೋರ್ನ್ ನಗರದ ರಸ್ತೆಗಳಿಗೆ ಸಚಿನ್ ತೆಂಡೂಲ್ಕರ್ ರಸ್ತೆ ಮತ್ತು ವಿರಾಟ್ ಕೊಹ್ಲಿ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಹಾಗೂ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಗಳು ಆಸ್ಟ್ರೇಲಿಯಾ ನೆಲದಲ್ಲಿ ನಡೆಯುವಾಗ ಅಲ್ಲಿನ ಸುದ್ದಿ ಮಾಧ್ಯಮಗಳು ತಮ್ಮ ದೇಶದ ಆಟಗಾರರನ್ನೇ ಕಡೆಗಣಿಸಿ ವಿರಾಟ್ ಕೊಹ್ಲಿ ಕುರಿತು ದೊಡ್ಡ ದೊಡ್ಡ ಸುದ್ದಿಗಳನ್ನು ಮಾಡುತ್ತವೆ. ಅಷ್ಟೇ ಏಕೆ ಇತ್ತೀಚಿಗಷ್ಟೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಪ್ರಕಟಿಸುವ ಮುನ್ನ ಆಸ್ಟ್ರೇಲಿಯಾದ ಸಿಡ್ನಿ ನಗರದ ಬೀದಿ ಬೀದಿಗಳಲ್ಲಿ ವಿರಾಟ್ ಕೊಹ್ಲಿ ಅವರ ಎಲ್ ಇ ಡಿ ಚಿತ್ರಗಳು ರಾರಾಜಿಸಿದ್ದವು. ಹೀಗೆ ಭಾರತದ ಕ್ರಿಕೆಟಿಗರು ವಿಶ್ವದಾದ್ಯಂತ ಇಷ್ಟು ದೊಡ್ಡ ಮಟ್ಟದ ಅಭಿಮಾನವನ್ನು ಸಂಪಾದಿಸಿದ್ದಾರೆ ಎಂದರೆ ಅದಕ್ಕೆ ಕಾರಣ ಆ ಆಟಗಾರರ ಶ್ರಮ, ಮೈದಾನದಲ್ಲಿ ಮತ್ತು ಮೈದಾನದಿಂದ ಈಚೆ ಅವರು ನಡೆದುಕೊಳ್ಳುವ ರೀತಿ..

ಲೆಜೆಂಡ್ಸ್ ಲೀಗ್: 21 ಎಸೆತಕ್ಕೆ 56 ರನ್ ಚಚ್ಚಿದ ಇರ್ಫಾನ್ ಪಠಾಣ್; ಆ ಒಬ್ಬನಿಂದ ಭಾರತದ ಫೈನಲ್ ಕನಸು ಭಗ್ನ!ಲೆಜೆಂಡ್ಸ್ ಲೀಗ್: 21 ಎಸೆತಕ್ಕೆ 56 ರನ್ ಚಚ್ಚಿದ ಇರ್ಫಾನ್ ಪಠಾಣ್; ಆ ಒಬ್ಬನಿಂದ ಭಾರತದ ಫೈನಲ್ ಕನಸು ಭಗ್ನ!

ಹೌದು, ಯಾವುದೇ ಕ್ರಿಕೆಟಿಗರಾಗಲಿ ಅಥವಾ ಸೆಲೆಬ್ರಿಟಿಗಳಾಗಲಿ ಕೇವಲ ತಮ್ಮ ಕ್ಷೇತ್ರದಲ್ಲಿ ಉತ್ತಮ ಎನಿಸಿಕೊಂಡರೆ ಸಾಲುವುದಿಲ್ಲ ಬದಲಾಗಿ ಹೊರಗಿನ ಪ್ರಪಂಚದಲ್ಲಿಯೂ ಕೂಡ ಒಳ್ಳೆಯ ನಡತೆಯನ್ನು ಹೊಂದಿರಬೇಕು, ಇಲ್ಲದಿದ್ದರೆ ಹೊರಗಿನ ಪ್ರಪಂಚದಲ್ಲಿ ದೊಡ್ಡ ಮಟ್ಟದ ಗೌರವ ಲಭಿಸುವುದಿಲ್ಲ. ಇದೇ ಹಾದಿಯಲ್ಲಿ ಭಾರತದ ವರ್ಲ್ಡ್ ಕಪ್ ಹೀರೋ ಎಂದೇ ಖ್ಯಾತಿಯನ್ನು ಪಡೆದಿರುವ ಗೌತಮ್ ಗಂಭೀರ್ ಕೂಡ ಇದ್ದರು. ರಾಜಕೀಯ ಪ್ರವೇಶಿಸಿದ ನಂತರ ಕಲುಷಿತ ಗಾಳಿಯನ್ನು ಕಡಿಮೆ ಮಾಡುವ ಕೆಲಸ ಮಾಡಿದರು ಹಾಗೂ ಬಡಜನರಿಗೆ 1 ರೂಪಾಯಿಗೆ ಊಟ ನೀಡುವುದರ ಮೂಲಕ ಮಾನವೀಯತೆಯನ್ನು ಮರೆದಿದ್ದಾರೆ. ಹೀಗೆ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿ ಭೇಷ್ ಎನಿಸಿಕೊಂಡಿದ್ದ ಗೌತಮ್ ಗಂಭೀರ್ ಇದೀಗ ತಮ್ಮ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಬೇಡವಾಗಿದ್ದ ಪೋಸ್ಟ್ ಒಂದನ್ನು ಹಾಕುವುದರ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಹಾಗೂ ಈತ ಸ್ಟಾರ್ ಕ್ರಿಕೆಟಿಗ ಹೇಗಾದ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಗೌತಮ್ ಗಂಭೀರ್ ಈ ರೀತಿಯ ಟೀಕೆಗಳಿಗೆ ಒಳಗಾಗಲು ಕಾರಣವೇನು ಎಂಬುದು ಮುಂದೆ ಇದೆ ಓದಿ..

ಗಲ್ಲಿ ಕ್ರಿಕೆಟ್ ಟೂರ್ನಿಗೆ ತನ್ನ ಫೋಟೋ ಬಳಸಿದ್ದಕ್ಕೆ ಗಂಭೀರ್ ಕೆಂಡಾಮಂಡಲ!

ಗಲ್ಲಿ ಕ್ರಿಕೆಟ್ ಟೂರ್ನಿಗೆ ತನ್ನ ಫೋಟೋ ಬಳಸಿದ್ದಕ್ಕೆ ಗಂಭೀರ್ ಕೆಂಡಾಮಂಡಲ!

ಭಾರತದಲ್ಲಿ ಯಾವುದಾದರೂ ಕ್ರಿಕೆಟ್ ಟೂರ್ನಮೆಂಟ್ ನಡೆದರೆ ಅಲ್ಲಿ ಸಚಿನ್ ತೆಂಡೂಲ್ಕರ್ ಅಥವಾ ವಿರಾಟ್ ಕೊಹ್ಲಿ ಚಿತ್ರಗಳನ್ನು ಬಳಸಿಕೊಳ್ಳುತ್ತಾರೆ, ಫುಟ್‌ಬಾಲ್‌ ಟೂರ್ನಿಗಳು ನಡೆದರೆ ಆ ಕ್ರೀಡೆಯ ಜನಪ್ರಿಯ ಆಟಗಾರರ ಚಿತ್ರಗಳನ್ನು ಬಳಸಿಕೊಳ್ಳುತ್ತಾರೆ. ಹೀಗೆ ದೊಡ್ಡ ಮಟ್ಟದ ಹೆಸರನ್ನು ಮಾಡಿರುವ ಆಟಗಾರರ ಫೋಟೋಗಳನ್ನು ಚಿಕ್ಕಚಿಕ್ಕ ಟೂರ್ನಿಗಳಲ್ಲಿ ಬಳಸಿಕೊಳ್ಳುವುದು ಸರ್ವೇಸಾಮಾನ್ಯ. ಅದೇ ರೀತಿ ಚಿಕ್ಕ ಕ್ರಿಕೆಟ್ ಟೂರ್ನಿ ನಡೆಸಿರುವ ತಂಡವೊಂದು ಗೌತಮ್ ಗಂಭೀರ್ ಅವರ ಚಿತ್ರವನ್ನು ಪ್ರಚಾರಕ್ಕಾಗಿ ಬಳಸಿದೆ. ಇಷ್ಟಕ್ಕೇ ಕೋಪಗೊಂಡಿರುವ ಗೌತಮ್ ಗಂಭೀರ್ ತನ್ನ ಭಾವಚಿತ್ರವನ್ನು ಬಳಸಿದ ಕ್ರಿಕೆಟ್ ಟೂರ್ನಿಯ ಆಯೋಜಕರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

ದೂರು ನೀಡಲು ಕಾರಣವೇನು?

ದೂರು ನೀಡಲು ಕಾರಣವೇನು?

ತನ್ನ ಭಾವಚಿತ್ರವನ್ನು ಕ್ರಿಕೆಟ್ ಟೂರ್ನಿಯ ಪ್ರಚಾರಕ್ಕಾಗಿ ಬಳಸಿಕೊಂಡಿರುವ ಆಯೋಜಕರ ವಿರುದ್ಧ ದೂರು ನೀಡುತ್ತೇನೆ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಗೌತಮ್ ಗಂಭೀರ್ ಅದಕ್ಕೆ ಕಾರಣವನ್ನು ಕೂಡ ತಿಳಿಸಿದ್ದಾರೆ. ಈ ರೀತಿಯ ಗಲ್ಲಿ ಕ್ರಿಕೆಟ್ ಟೂರ್ನಿಗಳಲ್ಲಿ ಕ್ರಿಕೆಟ್ ನಡೆಸುವವರು ಪ್ರವೇಶ ಶುಲ್ಕವನ್ನು ವಿಧಿಸುವುದು ಸಾಮಾನ್ಯ. ಅದೇ ರೀತಿ ಗಂಭೀರ್ ಚಿತ್ರ ಬಳಸಿರುವ ಆ ಆಯೋಜಕರು ಪ್ರವೇಶ ಶುಲ್ಕವನ್ನು ಕೂಡ ಪಕ್ಕದಲ್ಲಿಯೇ ಪ್ರಕಟಿಸಿದ್ದಾರೆ. ಇದನ್ನು ಕಂಡಿರುವ ಗಂಭೀರ್ ನಾನು ಈ ರೀತಿಯ ಯಾವುದೇ ಟೂರ್ನಿಗಳಿಗೂ ಕೂಡಾ ಪ್ರೋತ್ಸಾಹವನ್ನು ನೀಡುತ್ತಿಲ್ಲ, ಯಾರೂ ಸಹ ಈ ರೀತಿಯ ಟೂರ್ನಿಗಳಿಗೆ ಹಣವನ್ನು ನೀಡಬೇಡಿ ಹಾಗೂ ನಾನು ನನ್ನ ಚಿತ್ರವನ್ನು ಬಳಸಿಕೊಂಡಿರುವ ಈ ಆಯೋಜಕರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಈತ ಎಂತಹ ಸ್ಟಾರ್ ಎಂದ ನೆಟ್ಟಿಗರು

ಈತ ಎಂತಹ ಸ್ಟಾರ್ ಎಂದ ನೆಟ್ಟಿಗರು

ಗೌತಮ್ ಗಂಭೀರ್ ಹಾಕಿರುವ ಈ ಪೋಸ್ಟ್ ಕಂಡ ನಂತರ ನೆಟ್ಟಿಗರು ಗಂಭೀರ್ ಕಾಲನ್ನು ಎಳೆದಿದ್ದಾರೆ. ನೀವೊಬ್ಬರು ಖ್ಯಾತ ಕ್ರಿಕೆಟಿಗ ಹೀಗಾಗಿ ಜನಪ್ರಿಯರಾಗಿರುವ ನಿಮ್ಮ ಫೋಟೋವನ್ನು ಇಂತಹ ಟೂರ್ನಿಗಳಲ್ಲಿ ಬಳಸುವುದು ಸಾಮಾನ್ಯ, ಪ್ರೀತಿಯಿಂದ ನಿಮ್ಮ ಫೋಟೋ ಬಳಸಿರುವ ಅಭಿಮಾನಿಗಳ ವಿರುದ್ಧವೇ ನೀವು ಈ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವುದು ಎಷ್ಟು ಸರಿ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಈ ರೀತಿ ಪ್ರತಿಯೊಬ್ಬ ಕ್ರಿಕೆಟಿಗನೂ ಕೂಡಾ ಚಿಂತಿಸಿ ಬಿಟ್ಟರೆ ಟೂರ್ನಿ ನಡೆಸುವ ಪ್ರತಿಯೊಬ್ಬ ಆಯೋಜಕ ಕೂಡ ಜೈಲು ಸೇರಬೇಕಾಗುತ್ತದೆ ಎಂದು ಗಂಭೀರ್ ವಿರುದ್ಧ ಟ್ರೋಲ್ ಮಾಡಿದ್ದಾರೆ. ಮತ್ತೊಂದಷ್ಟು ಜನ ಇಂತಹ ಚಿಕ್ಕ ವಿಷಯಗಳಿಗೂ ತಲೆಕೆಡಿಸಿಕೊಂಡು ವಿವಾದಗಳನ್ನು ಎಬ್ಬಿಸುವ ಇಂತಹ ಆಟಗಾರ ಸ್ಟಾರ್ ಹೇಗಾದ ಅರ್ಥವಾಗುತ್ತಿಲ್ಲ ಎಂದು ಮೂದಲಿಸಿದ್ದಾರೆ.

Sachin Tendulkarಗೆ DRS ಇದ್ದಿದ್ದರೆ ಕಥೆಯೇ ಬೇರೆ ಆಗುತ್ತಿತ್ತು | Oneindia Kannada

Story first published: Friday, January 28, 2022, 21:20 [IST]
Other articles published on Jan 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X