ಅದೇ ಕಣ್ಣು!: ಕ್ರಿಕೆಟಿಗ ಶುಭ್‌ಮನ್ ಗಿಲ್, ಸಚಿನ್ ಪುತ್ರಿ ಸಾರಾ 'ಕಣ್ಣಿಟ್ಟ' ಗುಟ್ಟೇನು?

ಯುವ ಕ್ರಿಕೆಟಿಗ ಶುಭ್‌ಮನ್ ಗಿಲ್ ಹಾಗೂ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಮಧ್ಯೆ ಸಾಕಷ್ಟು ಸಮಯಗಳಿಂದ ರೂಮರ್‌ಗಳು ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿದೆ. ಇವರಿಬ್ಬರೂ ಜೊತೆಯಾಗಿ ಸುತ್ತಾಟವನ್ನು ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೆ ನಿಖರ ಆಧಾರಗಳು ಯಾವುದೂ ಇಲ್ಲದಿದ್ದರೂ ಇತ್ತೀಚೆಗೆ ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್‌ವೊಂದರ ಅಡಿ ಬರಹ ಸಾಕಷ್ಟು ವೈರಲ್ ಆಗಿದೆ.

ಯುವ ಕ್ರಿಕೆಟಿಗ ಶುಭ್‌ಮನ್ ಗಿಲ್ ಹಾಗೂ ಸಾರಾ ತೆಂಡೂಲ್ಕರ್ ಇಬ್ಬರೂ ಇನ್ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ಆ್ಯಕ್ಟಿವ್ ಇದ್ದಾರೆ. ಒಂದೇ ದಿನ ಇಬ್ಬರೂ ತಮ್ಮ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದೇನು ದೊಡ್ಡ ಸಂಗತಿಯಲ್ಲ. ಆದರೆ ಈ ಫೋಟಗಳಿಗೆ ಹಾಕಿರುವ ಅಡಿ ಬರಹ ಈಗ ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿದೆ. ಈ ಇಬ್ಬರ ಮೇಲಿನ ಅನುಮಾನ ಬಲಗೊಳ್ಳಲು ಕಾರಣವಾಗಿದೆ.

'ನಾನು ರೋಹಿತ್ ಅವರ ದೊಡ್ಡ ಅಭಿಮಾನಿ': ನ್ಯೂಜಿಲೆಂಡ್ ಮಾರಕ ವೇಗಿ

View this post on Instagram

I spy 👀

A post shared by Ꮪhubman Gill (@shubmangill) on

View this post on Instagram

I spy 👀

A post shared by Sara Tendulkar (@saratendulkar) on

ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲೇನಿದೆ?

ಶುಭ್‌ಮನ್ ಗಿಲ್ ತಮ್ಮ ಸ್ಟೈಲಿಶ್ ಫೋಟೋಗೆ "ಐ ಸ್ಪೈ"(ನಾನು ಕಣ್ಣಿಡುತ್ತೇನೆ) ಎಂದು ಬರೆದ ಪೋಸ್ಟ್ ಮಾಡಿದ್ದಾರೆ. ಮತ್ತೊಂದೆಡೆ ಸಾರಾ ತೆಂಡೂಲ್ಕರ್ ಕೂಡ ತಮ್ಮ ಮುದ್ದಾದ ಪೋಟೋವೊಂದನ್ನು ಹಂಚಿಕೊಂಡಿದ್ದು ಅವರು ಕೂಡ "ಐ ಸ್ಪೈ" ಎಂದು ಬರೆದುಕೊಂಡು ಶುಭ್‌ಮನ್ ಗಿಲ್ ಹಾಕಿಕೊಂಡಿರುವಂತೆಯೇ ಎರಡು ಕಣ್ಣುಗಳ ಇಮೋಜಿ ಹಾಕಿದ್ದಾರೆ.

ನೆಟ್ಟಿಗರ ತಮಾಷೆ!

ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಕಾರಣವಾಗಿದೆ. ಅನೇಕ ನೆಟ್ಟಿಗರು ಈ ಬಗ್ಗೆ ತಮಾಷೆಯಾಗಿ ಸಾಕಷ್ಟು ಪೋಸ್ಟ್‌ಗಳನ್ನು ಹಾಕಿದ್ದು ಕೆಲವರಂತೂ ಸಾರಾ ತಂದೆ ಸಚಿನ್ ತೆಂಡೂಲ್ಕರ್‌ಗೆ ದೂರನ್ನೇ ನೀಡಿದ್ದಾರೆ. ಆದರೆ ಸಾರಾ ಆಗಲಿ ಶುಭ್‌ಮನ್ ಗಿಲ್ ಆಗಲಿ ಈ ಬಗ್ಗೆ ತಮಗೇನೂ ಗೊತ್ತೇ ಇಲ್ಲದಂತೆ ತಮಾಷೆ ನೋಡುತ್ತಿದ್ದಾರೆ.

ಇದೇನು ಮೊದಲಲ್ಲ!

ಸಾರಾ ಹಾಗೂ ಶುಭ್‌ಮನ್ ಬಗ್ಗೆ ಟ್ರೋಲ್‌ಗೆ ಒಳಗಾಗುತ್ತಿರುವುದು ಇದೇನೂ ಮೊದಲಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಇವರನ್ನು ಕಾಳೆಳೆದಿದ್ದರು. ಟೀಮ್ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಕೂಡ ಶುಭ್‌ಮನ್ ಗಿಲ್ ಇನ್ಸ್ಟಾಗ್ರಾಮ್ ಪೋಸ್ಟ್‌ವೊಂದಕ್ಕೆ ಸಾರಾ ಮಾಡಿದ ಕಾಮೆಂಟ್‌ಗೆ ಪ್ರತಿಕ್ರಿಯಿಸಿ ಕಾಲೆಳೆದಿದ್ದರು.

ಟೀಮ್ ಇಂಡಿಯಾದ ಭವಿಷ್ಯದ ತಾರೆ

ಟೀಮ್ ಇಂಡಿಯಾದ ಭವಿಷ್ಯದ ತಾರೆ

ಟೀಮ್ ಇಂಡಿಯಾಗೆ ಈಗಾಗಲೇ ಪದಾರ್ಪಣೆ ಮಾಡಿರುವ ಶುಭ್‌ಮನ್ ಗಿಲ್ ಭವಿಷ್ಯದ ಕ್ರಿಕೆಟಿಗ ಎಂದು ಗುರುತಿಸಿಕೊಂಡಿದ್ದಾರೆ. 20 ವರ್ಷದ ಗಿಲ್ ಐಪಿಎಲ್‌ನಲ್ಲಿ ಕೊಲ್ಕತ್ತಾ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ. ಮತ್ತೊಂದೆಡೆ ಸಾರಾ ಮುಂಬೈನಲ್ಲಿ ವಿದ್ಯಾಭ್ಯಾಸವನ್ನು ನಡೆಸುತ್ತಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, July 31, 2020, 16:46 [IST]
Other articles published on Jul 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X