RCB ಆಭಿಮಾನಿಗಳು ಹೊಸ ಹಾಡು ಕೇಳಿ ಹೇಳುತ್ತಿರೋದೇನು | Oneindia Kannada
ಯುಎಇಯಲ್ಲಿ ಮುಕ್ತಾಯಗೊಂಡ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎಲಿಮಿನೇಟರ್ ಹಂತದಲ್ಲಿನ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಸೋಲುವುದರ ಮೂಲಕ ಟೂರ್ನಿಯಿಂದ ಹೊರಬಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಮ್ಮೆ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವ ತನ್ನ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ವಿಫಲವಾಯಿತು.
2025ಕ್ಕೆ ಪಾಕಿಸ್ತಾನಕ್ಕೆ ತೆರಳುವುದು ಟೀಂ ಇಂಡಿಯಾಗೆ ಸವಾಲಿನದ್ದಾಗಿದೆ: ಐಸಿಸಿ ಅಧ್ಯಕ್ಷ
ಮೊದಲಿಗೆ ಭಾರತದಲ್ಲಿ ಆರಂಭವಾಗಿ ಕೊರೋನಾವೈರಸ್ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡ ನಂತರ ಯುಎಇಗೆ ಸ್ಥಳಾಂತರಿಸಲ್ಪಟ್ಟ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮವಾಗಿಯೇ ಪ್ರದರ್ಶನವನ್ನು ನೀಡಿತ್ತು. ಮೊದಲಿಗೆ ಭಾರತದಲ್ಲಿ ಟೂರ್ನಿ ಆರಂಭವಾದಾಗ ತನ್ನ ಮೊದಲ ನಾಲ್ಕೂ ಪಂದ್ಯಗಳಲ್ಲಿ ಸತತವಾಗಿ ಜಯಗಳಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿತ್ತು. ನಂತರ ಯುಎಇಯಲ್ಲಿಯೂ ಜವಾಬ್ದಾರಿಯುತ ಪ್ರದರ್ಶನವನ್ನು ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ವಾಲಿಫೈಯರ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಇಶನ್ ಕಿಶನ್ ಬೊಂಬಾಟ್ ಫೀಲ್ಡಿಂಗ್: ದಿಲೀಪ್ ಬೆನ್ನು ತಟ್ಟಿದ ರಾಹುಲ್ ದ್ರಾವಿಡ್
ಆದರೆ ಎಲಿಮಿನೇಟರ್ ಹಂತದಲ್ಲಿ ಎಡವಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಯಿಂದ ಹೊರಬೀಳಬೇಕಾಗಿ ಬಂತು. ದುರಾದೃಷ್ಟವಶಾತ್ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಫಿ ಎತ್ತಿ ಹಿಡಿಯಬೇಕೆಂಬ ಹಲವಾರು ಆಟಗಾರರ ಮತ್ತು ಸಹಸ್ರಾರು ಅಭಿಮಾನಿಗಳ ಕನಸು ಕೊನೆಗೂ ನನಸಾಗಲೇ ಇಲ್ಲ. ಹೌದು, ಯುಎಇಯಲ್ಲಿ ಐಪಿಎಲ್ ಪುನರಾರಂಭವಾಗುವ ಮುನ್ನವೇ ವಿಶೇಷ ಪ್ರಕಟಣೆಯೊಂದನ್ನು ಹೊರಡಿಸಿದ್ದ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್ ಟೂರ್ನಿ ಮುಗಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವದಿಂದ ಕೆಳಗಿಳಿಯಲಿದ್ದೇನೆ ಎಂದಿದ್ದರು. ಹೀಗಾಗಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಆಡಿದ ಅಂತಿಮ ಟೂರ್ನಿ ಇದಾಗಿತ್ತು ಮತ್ತು ಇತ್ತೀಚೆಗಷ್ಟೇ ನಿವೃತ್ತಿ ನೀಡಿದ ಎಬಿ ಡಿವಿಲಿಯರ್ಸ್ ಜೊತೆ ಆಡಿದ ಅಂತಿಮ ಐಪಿಎಲ್ ಟೂರ್ನಿಯೂ ಕೂಡ ಇದಾಗಿದೆ.
ಹೌದು, ಇತ್ತೀಚೆಗಷ್ಟೇ ಎಬಿ ಡಿವಿಲಿಯರ್ಸ್ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವುದರ ಮೂಲಕ ಮತ್ತೆ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂಬ ಬೇಸರದ ಸುದ್ದಿಯನ್ನು ನೀಡಿದ್ದರು. ಹೀಗೆ ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಹೆಚ್ಚು ನೋವಿನೊಂದಿಗೆ ಮುಕ್ತಾಯಗೊಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ಹೊಸದೊಂದು ಡಾನ್ಸ್ ವಿಡಿಯೋ ಅಪ್ ಲೋಡ್ ಮಾಡುವ ಮೂಲಕ ಸದ್ದು ಮಾಡುತ್ತಿದೆ. ಈ ವಿಡಿಯೋ ವಿಶೇಷತೆಗಳು ಮತ್ತು ವಿಡಿಯೊದ ವಿವರ ಈ ಕೆಳಕಂಡಂತಿದೆ..
"ವಿ ಆರ್ ಚಾಲೆಂಜರ್ಸ್" ಮ್ಯೂಸಿಕ್ ವಿಡಿಯೋ ಬಿಡುಗಡೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಾಮಾಜಿಕ ಜಾಲತಾಣಗಳಲ್ಲಿನ ತನ್ನ ಅಧಿಕೃತ ಖಾತೆಗಳಲ್ಲಿ 1 ನಿಮಿಷ 38 ಸೆಕೆಂಡ್ ಅವಧಿಯ ಮ್ಯೂಸಿಕ್ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದೆ. ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಮೊಹಮ್ಮದ್ ಸಿರಾಜ್ ಹಾಗೂ ಯಜುವೇಂದ್ರ ಚಹಾಲ್ ಸೇರಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿವಿಧ ಆಟಗಾರರು ವಿಭಿನ್ನವಾದ ಹೆಜ್ಜೆಗಳನ್ನು ಹಾಕುವುದರ ಮೂಲಕ ಹಾಡಿಗೆ ನೃತ್ಯ ಮಾಡಿದ್ದಾರೆ.
ಬಿಟ್ಟುಕೊಡಬೇಡಿ, ಹಿಂದೆ ಸರಿಯಬೇಡಿ, ಮುನ್ನುಗ್ಗಿ
"ಯಾವತ್ತಿಗೂ ಬಿಟ್ಟುಕೊಡಬೇಡಿ, ಹಿಂದೆ ಸರಿಯಬೇಡಿ ಮತ್ತು ಮುನ್ನುಗ್ಗುತ್ತಾ ಇರಿ! ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರ ಕಳಪೆ ಬೋಲ್ಡ್ ಸ್ಪಿರಿಟ್ ಮತ್ತು ಒಗ್ಗಟ್ಟನ್ನು ಆಚರಿಸಲಾಗುತ್ತಿದೆ. ಆರ್ಸಿಬಿ ಜೆರ್ಸಿ ಧರಿಸಿದಾಗಲೆಲ್ಲ 100% ಪ್ರದರ್ಶನವನ್ನು ನೀಡಿದ ಎಲ್ಲ ಆಟಗಾರರಿಗೂ ವಿಶೇಷ ಧನ್ಯವಾದಗಳು" ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮ್ಯೂಸಿಕ್ ವಿಡಿಯೋ ಟ್ವೀಟ್ ಮಾಡಿ ಬರೆದುಕೊಂಡಿದೆ. ಈ ವಿಡಿಯೋದಲ್ಲಿ ಇತ್ತೀಚೆಗಷ್ಟೇ ನಿವೃತ್ತಿ ಘೋಷಿಸಿರುವ ಎಬಿಡಿವಿಲಿಯರ್ಸ್ ಅವರು ಕೂಡ ಕಾಣಿಸಿಕೊಂಡಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ. ಎಬಿ ಡಿವಿಲಿಯರ್ಸ್ ಆಟಗಾರನಾಗಿ ಅಲ್ಲದಿದ್ದರೂ ಸಿಬ್ಬಂದಿ ವರ್ಗದವರಾಗಿ ತಂಡದಲ್ಲಿಯೇ ಉಳಿಯಲಿದ್ದಾರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿಯೇ ಮುಂದುವರಿಯುವ ಸುಳಿವನ್ನು ಈ ವಿಡಿಯೋ ನೀಡುತ್ತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಈ ವಿಶೇಷ ಹಾಡಿಗೆ ಧನಶ್ರೀ ನಿರ್ದೇಶನ
ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ವೀಟ್ ಮಾಡಿರುವ ವಿಶೇಷ ಹಾಡಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಲವಾರು ಆಟಗಾರರು ಭಿನ್ನ ವಿಭಿನ್ನ ಹೆಜ್ಜೆಗಳನ್ನು ಹಾಕಿ ವೀಕ್ಷಕರಿಂದ ಪ್ರಶಂಸೆ ಗಿಟ್ಟಿಸಿದ್ದಾರೆ. ಸಿನಿಮಾ ಹಾಡಿನಂತೆ ಈ ಮ್ಯೂಸಿಕ್ ವಿಡಿಯೊ ಮೂಡಿ ಬಂದಿದ್ದು ಇದರ ಹಿಂದೆ ಯುಜುವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ ಅವರ ನಿರ್ದೇಶನ ಮತ್ತು ನೃತ್ಯ ಸಂಯೋಜನೆ ಪ್ರಮುಖ ಪಾತ್ರ ವಹಿಸಿದೆ.
myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ.
Allow Notifications
You have already subscribed