ಐಪಿಎಲ್: ಮುಂದಿನ ಆವೃತ್ತಿಗೆ 2 ಹೊಸ ತಂಡಗಳು, ನೀಲ ನಕಾಶೆಯ ಸಂಪೂರ್ಣ ಮಾಹಿತಿ

13ನೇ ಆವೃತ್ತಿಯ ಐಪಿಎಲ್‌ನ ಎರಡನೇ ಹಂತದ ಪಂದ್ಯಗಳು ಇನ್ನಷ್ಟೇ ನಡೆಯಬೇಕಿದೆ. ಈ ಮಧ್ಯೆ ಬಿಸಿಸಿಐ ಮುಂದಿನ ಆವೃತ್ತಿಗೆ ಸಂಬಂಧಿಸಿದಂತೆ ಸಿದ್ಧತೆಗಳನ್ನು ಆರಂಭಿಸಿದೆ. ಅದರಲ್ಲೂ ಮುಂದಿನ ಬಾರಿ ಮೆಗಾ ಆಕ್ಷನ್ ನಡೆಯಲಿದ್ದು ಎರಡು ಹೊಸ ತಂಡಗಳ ಸೇರ್ಪಡೆಗೂ ವೇದಿಗೆ ಸಜ್ಜಾಗಿದೆ.

ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್‌ನ ನೀಲನಕಾಶೆಯನ್ನು ಸಿದ್ಧಪಡಿಸಿದೆ. ಎರಡು ಹೊಸ ತಂಡಗಳು, ಆಟಗಾರರ ರಿಟೆನ್ಶನ್, ಮಹಾ ಹರಾಜು, ಸ್ಯಾಲರಿ ಪರ್ಸ್ ಹೆಚ್ಚಳ ಮತ್ತು ಹೊಸ ಮಾಧ್ಯಮ ಹಕ್ಕು ಟೆಂಡರ್ ಈ ನೀಲನಕಾಶೆಯಲ್ಲಿ ಒಳಗೊಂಡಿದೆ. ಈ ವರ್ಷದ ಆಗಸ್ಟ್‌ನಿಂದ ಮುಂದಿನ ಮುಂದಿನ ಜನವರಿಯ ಅವಧಿಯಲ್ಲಿ ಇದು ಸಂಪೂರ್ಣವಾಗಿ ಬಹಿರಂಗವಾಗಲಿದೆ.

ದ್ವಿತೀಯ ದರ್ಜೆಯ ತಂಡ ಎಂದ ಅರ್ಜುನ್ ರಣತುಂಗಾಗೆ ಆಕಾಶ್ ಚೋಪ್ರ ತಿರುಗೇಟುದ್ವಿತೀಯ ದರ್ಜೆಯ ತಂಡ ಎಂದ ಅರ್ಜುನ್ ರಣತುಂಗಾಗೆ ಆಕಾಶ್ ಚೋಪ್ರ ತಿರುಗೇಟು

ಎರಡು ಹೊಸ ತಂಡಗಳು

ಎರಡು ಹೊಸ ತಂಡಗಳು

ಕಳೆದ ಎರಡ್ಮೂರು ವರ್ಷಗಳಿಂದ ಸಾಕಷ್ಟು ಚರ್ಚೆಯಲ್ಲಿರುವ ಎರಡು ಹೊಸ ತಂಡಗಳ ಸೇರ್ಪಡೆಯನ್ನು ಬಿಸಿಸಿಐ ಖಚಿತಪಡಿಸಿದೆ. ಯುಎಇನಲ್ಲಿ ಈ ಬಾರಿಯ ಐಪಿಎಲ್‌ನ ಉಳಿದ ಪಂದ್ಯಗಳು ಆರಂಭವಾಗುತ್ತಿದ್ದಂತೆಯೇ ಹೊಸ ತಂಡಗಳ ಸೇರ್ಪಡೆಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಗಳು ಆಗಸ್ಟ್‌ನಿಂದ ಆರಂಭವಾಗಲಿದೆ.

ಸಂಬಳದ ಪರ್ಸ್‌ನ ಮೊತ್ತದಲ್ಲಿ ಏರಿಕೆ

ಸಂಬಳದ ಪರ್ಸ್‌ನ ಮೊತ್ತದಲ್ಲಿ ಏರಿಕೆ

ಇನ್ನು ಬಿಸಿಸಿಐ ಆಟಗಾರರ ವಾರ್ಷಿಕ ಸಂಬಳದ ಪರ್ಸ್‌ನ ಮೊತ್ತವನ್ನು ಹೆಚ್ಚಿಸಿದೆ. ಈಗ ಇದರ ಮಿತಿ 85 ಕೋಟಿಯಿದ್ದು ಇದನ್ನು 90 ಕೋಟಿಗೆ ಹೆಚ್ಚಿಸಲಾಗುತ್ತದೆ. ಈ ಮೂಲಕ ಹತ್ತು ತಂಡಗಳ ಒಟ್ಟು ಸಂಬಳದ ಮೊತ್ತ 50 ಕೋಟಿ ರೂಪಾಯಿ ಏರಿಕೆಯಾಗಲಿದೆ. ನಿಗದಿ ಪಡಿಸಿರುವ ಮೊತ್ತದ 75 ಶೇಕಡಾವನ್ನು ತಂಡಗಳು ಕಡ್ಡಾಯವಾಗಿ ಖರ್ಚು ಮಾಡಬೇಕಿದೆ. 2024 ಆವೃತ್ತಿಗೂ ಮುನ್ನ ಇದು ಕ್ರಮೇಣ 95 ಕೋಟಿಯಿಂದ 100 ಕೋಟಿಗೆ ಏರಿಕೆಯಾಗಲಿದೆ.

ಗರಿಷ್ಟ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ

ಗರಿಷ್ಟ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ

ಫ್ರಾಂಚೈಸಿಗಳು ಉಳಿಸಿಕೊಳ್ಳುವ ಆಟಗಾರರ ಬಗ್ಗೆಯೂ ಬಿಸಿಸಿಐ ತೀರ್ಮಾನವನ್ನು ತೆಗೆದುಕೊಂಡಿದೆ. ಪ್ರತಿ ತಂಡಗಳು ಷರತ್ತಿನೊಂದಿಗೆ ಕೂಡ ಗರಿಷ್ಟ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಮೂವರು ಭಾರತೀಯ ಆಟಗಾರರು ಹಾಗೂ ಓರ್ವ ವಿದೇಶಿ ಆಟಗಾರ ಮತ್ತು ಇಬ್ಬರು ಭಾರತೀಯ ಆಟಗಾರರು ಹಾಗೂ ಇಬ್ಬರು ಭಾರತೀಯರು ಮತ್ತು ಇಬ್ಬರು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಹರಾಜಿಗೂ ಮುನ್ನ ಬಿಸಿಸಿಐ ನಿಯಮದ ಪ್ರಕಾರ ಉಳಿಸಿಕೊಂಡಿರುವ ಆಟಗಾರರಿಗೆ ಸಂಬಳವನ್ನು ಫ್ರಾಂಚೈಸಿ ನಿಗದಿಪಡಿಸಬೇಕಾಗುತ್ತದೆ.

ಮಾಧ್ಯಮ ಹಕ್ಕು

ಮಾಧ್ಯಮ ಹಕ್ಕು

ಇನ್ನು ಮುಂದಿನ ಆವೃತ್ತಿಗೂ ಮುನ್ನ ಬಿಸಿಸಿಐ ಬೃಹತ್ ಮೀಡಿಯಾ ರೈಟ್ಸ್ ಹರಾಜನ್ನು ಕೂಡ ನಡೆಸಲಿದೆ. ಇದು ಈ ವರ್ಷಾಂತ್ಯದಲ್ಲಿ ನಡೆಯುವ ಸಾಧ್ಯತೆಯಿದೆ. ಮುಂದಿನ ಆವೃತ್ತಿಗೆ 10 ತಂಡಗಳು ಇರುವ ಕಾರಣ 90ಕ್ಕೂ ಅಧಿಕ ಪಂದ್ಯಗಳು ನಡೆಲಿದೆ. ಹೀಗಾಗಿ ಕನಿಷ್ಟ 25 ಶೇಕಡಾಗೂ ಹೆಚ್ಚಿನ ಮೌಲ್ಯವನ್ನು ಮಾಧ್ಯಮ ಹಕ್ಕಿನಿಂದ ಬಿಸಿಸಿಐ ಆದಾಯಗಳಿಸುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

For Quick Alerts
ALLOW NOTIFICATIONS
For Daily Alerts
Story first published: Monday, July 5, 2021, 10:31 [IST]
Other articles published on Jul 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X