ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ಯಾನ್ಸರ್ ದವಡೆಯಲ್ಲಿದ್ದು ಬದುಕಿನ ಅರ್ಥ ಕಂಡುಕೊಂಡ ಕ್ರಿಕೆಟ್ ದಂತಕತೆ ಹ್ಯಾಡ್ಲೀ

By Unnikrishnan G
From the fangs of cancer, Richard Hadlee finds new meaning to life

ವೆಲ್ಲಿಂಗ್ಟನ್, ಫೆಬ್ರವರಿ 29: ಬೂದು ಬಣ್ಣದ ಪ್ಯಾಂಟ್ ಮತ್ತು ಅದಕ್ಕೊಪ್ಪುವ ದೊಡ್ಡ ಚೆಕ್ಸ್‌ಗಳ ಅಂಗಿಯಲ್ಲಿ, ನ್ಯೂಜಿಲೆಂಡ್‌ ಕ್ರಿಕೆಟ್ ದಂತಕತೆ ಸರ್ ರಿಚರ್ಡ್ ಹ್ಯಾಡ್ಲೀ 68ರ ಹರೆಯದವರಂತೆ ಕಾಣಲಿಲ್ಲ. ಬಹುಶಃ, ಬೂದು ಬಣ್ಣದ ಕೂದಲು ಮತ್ತು ಮೀಸೆ ಮಾತ್ರ ಅವರು ವಯಸ್ಸಿನಲ್ಲಿ ಹಿರಿಯರು ಅನ್ನೋದನ್ನು ಸೂಚಿಸುತ್ತಿತ್ತಷ್ಟೆ. ಆದರೆ, ಅಸಲಿಗೆ ಆ ಲವಲವಿಕೆಯ ನೋಟದ ಹಿಂದೆ 86 ಪಂದ್ಯಗಳಲ್ಲಿ ಬರೋಬ್ಬರಿ 431 ವಿಕೆಟ್‌ಗಳನ್ನು ಮುರಿದು ವಿಶ್ವದಾಖಲೆ ನಿರ್ಮಿಸಿದ್ದ ಹ್ಯಾಡ್ಲೀ ದೈತ್ಯ ರಕ್ಕಸನೊಬ್ಬನ ವಿರುದ್ಧ ಹೋರಾಡುತ್ತಿದ್ದರು.

ಬಿಸಿಸಿಐ ಅಂದರೆ ಏನು ಸಾಮಾನ್ಯನಾ: ಕೊನೆಗೂ ಪಾಕ್ ವಿರುದ್ದ ಹಿಡಿದ ಹಠ ಸಾಧಿಸಿದ ಗಂಗೂಲಿಬಿಸಿಸಿಐ ಅಂದರೆ ಏನು ಸಾಮಾನ್ಯನಾ: ಕೊನೆಗೂ ಪಾಕ್ ವಿರುದ್ದ ಹಿಡಿದ ಹಠ ಸಾಧಿಸಿದ ಗಂಗೂಲಿ

4ನೇ ಹಂತದಲ್ಲಿ ಕೊಲೊರೆಕ್ಟಲ್ ಕ್ಯಾನ್ಸರ್
ರಿಚರ್ಡ್ ಹ್ಯಾಡ್ಲೀಗೆ ಕೊಲೊರೆಕ್ಟಲ್ ಕ್ಯಾನ್ಸರ್ (ಕರುಳಿನ ಕ್ಯಾನ್ಸರ್) ಇದೆ. ತನ್ನ ಬೆನ್ನಹಿಂದೆ ಸಾವಿಗಾಗಿ ಕಾದುಕೂತ ದೈತ್ಯ ರಕ್ಕಸನಿದ್ದರೂ ಹ್ಯಾಡ್ಲೀ ಈ ವಿಚಾರವನ್ನೆಲ್ಲಾ ಚಂದದ ನಗುವಿನೊಂದಿಗೆ ಹರವಿಕೊಂಡರು. ಯಾಕೆಂದರೆ ಈ ಖಾಯಿಲೆ ನ್ಯೂಜಿಲೆಂಡ್ ಜನರ ಸಾಮಾನ್ಯ ಲಕ್ಷಣವಂತೆ. ತನ್ನ ಖಾಯಿಲೆಯಿನ್ನೂ 5ನೇ ಹಂತ ದಾಟಿಲ್ಲ ಅನ್ನೋದು ಮತ್ತೊಂದು ನಿಟ್ಟುಸಿರಿನ ಸಂಗತಿ ಅಂತ ಸ್ವತಃ ಹ್ಯಾಡ್ಲೀಯೇ ಹೇಳುತ್ತಾರೆ.

ಭಾರತ, ಆಸ್ಟ್ರೇಲಿಯಾ ಸರಣಿಗಳಿಂದ ವೇಗಿ ಕಾಗಿಸೊ ರಬಾಡ ಹೊರಕ್ಕೆಭಾರತ, ಆಸ್ಟ್ರೇಲಿಯಾ ಸರಣಿಗಳಿಂದ ವೇಗಿ ಕಾಗಿಸೊ ರಬಾಡ ಹೊರಕ್ಕೆ

ತನ್ನ ಖಾಯಿಲೆ ಬಗ್ಗೆ ವಿಚಾರ ಹಂಚಿಕೊಂಡ ಹ್ಯಾಡ್ಲಿ, 'ನಾನೀಗ ಚೆನ್ನಾಗಿದ್ದೇನೆ. 2018ರಲ್ಲಿ ನನಗೆ ಕೊಲೊರೆಕ್ಟಲ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ನಾಲ್ಕನೇ ಹಂತದಲ್ಲಿರುವ ಖಾಯಿಲೆ ನಿಜಕ್ಕೂ ಆತಂಕಕಾರಿ. ಆದರೆ ಕೊಂಚ ನೆಮ್ಮದಿ ತಂದುಕೊಳ್ಳಬೇಕಾದ ವಿಚಾರವಂದ್ರೆ ನನ್ನ ಖಾಯಿಲೆ 5ನೇ ಹಂತದಲ್ಲಿ ಇರಲಿಲ್ಲವಲ್ಲ ಅನ್ನೋದು. ಅಷ್ಟಕ್ಕೇ ನನ್ನನ್ನು ನಾನು ಸಾಂತ್ವನಿಸಿಕೊಳ್ಳಬೇಕಿತ್ತು,' ಎಂದು ಹೇಳಿದರು.

ಭಾರತ vs ನ್ಯೂಜಿಲೆಂಡ್ ಟೆಸ್ಟ್, Live: ಪೃಥ್ವಿ, ಪೂಜಾರ, ವಿಹಾರಿ ಅರ್ಧಶತಕಭಾರತ vs ನ್ಯೂಜಿಲೆಂಡ್ ಟೆಸ್ಟ್, Live: ಪೃಥ್ವಿ, ಪೂಜಾರ, ವಿಹಾರಿ ಅರ್ಧಶತಕ

ಮಾತು ಮುಂದುವರೆಸಿದ ಹ್ಯಾಡ್ಲೀ, 'ನಾನು ಕರುಳಿನ ಮೂರನೇ ಒಂದು ಭಾಗವನ್ನು ತೆಗೆದುಹಾಕಿದೆ. ರಕ್ತ ಪರೀಕ್ಷೆಗಳು ಉತ್ತಮವಾಗಿರಲಿಲ್ಲ. ಹೀಗಾಗಿ ಸಮಸ್ಯೆ ನನ್ನ ಲಿವರ್‌ಗೂ ಹಬ್ಬಿತು. ಲಿವರ್‌ನ ಶೇ.15ರಷ್ಟು ಭಾಗ ತೊಂದರೆಗೀಡಾಯಿತು. ಸಮಸ್ಯೆ ಅಲ್ಲಿಗೆ ನಿಲ್ಲಲಿಲ್ಲ, ನನ್ನ ಪಿತ್ತಕೋಶ, ಅಪೆಂಡಿಕ್ಸ್‌ ಕೂಡ ತೊಂದರೆಗೊಳಗಾಯಿತು,' ಎಂದು ವಿವರಿಸಿದರು.

ಮಹಿಳಾ ಟಿ20 ವಿಶ್ವಕಪ್: ಶ್ರೀಲಂಕಾ ವಿರುದ್ಧ ಭಾರತಕ್ಕೆ ಸುಲಭ ಗೆಲುವುಮಹಿಳಾ ಟಿ20 ವಿಶ್ವಕಪ್: ಶ್ರೀಲಂಕಾ ವಿರುದ್ಧ ಭಾರತಕ್ಕೆ ಸುಲಭ ಗೆಲುವು

'ಅನಂತರ ನನಗೆ ಆರು ತಿಂಗಳ ಕೀಮೋಥೆರಪಿ ನಡೆಯಿತು. ಅದೂ ನಾನು ಆಯಾಸ, ಆಹಾರ ಸೇವಿಸಲಾಗದೆ, ವಾಂತಿ, ಅತಿಸಾರದಿಂದ ಬಳಲುತ್ತಿದ್ದ ಸಮಯದಲ್ಲಿ. ಆಗಿನದು ಕಷ್ಟಕರ ಸಮಯವದು. ಈ ಎಲ್ಲಾ ನನ್ನ ನರಕಯಾತನೆ ಕೊಂಚ ಕಡಿಮೆಗೊಂಡಿದ್ದು ಕಳೆದ ಜನವರಿಯಲ್ಲಿ,' ಎಂದು ತನ್ನ ಬದುಕಿನಲ್ಲಿ ಎದುರಾದ ದುರಂತಮಯ ಕ್ಷಣಗಳನ್ನು ಹ್ಯಾಡ್ಲೀ ಬಿಡಿಸಿಟ್ಟರು.

ಸಚಿನ್‌ಗಿಂತ ಇನ್ನೊಬ್ಬ ಲೆಜೆಂಡ್‌ಗೆ ಬೌಲಿಂಗ್‌ ಕಷ್ಟ ಎಂದ ಮೆಕ್‌ಗ್ರಾಥ್ಸಚಿನ್‌ಗಿಂತ ಇನ್ನೊಬ್ಬ ಲೆಜೆಂಡ್‌ಗೆ ಬೌಲಿಂಗ್‌ ಕಷ್ಟ ಎಂದ ಮೆಕ್‌ಗ್ರಾಥ್

"ಇವತ್ತು ನಾನು ಚೆನ್ನಾಗಿದ್ದೇನೆ ಎಂದುಕೊಂಡರೆ ನಾಳೆ ನಾನು ರೋಗಲಕ್ಷಣದೊಂದಿಗೆ ಎಚ್ಚರಗೊಳ್ಳುತ್ತೇನೆ. ಅದು ನನಗೆ ಜೀವನದ ಮೌಲ್ಯವನ್ನು, ಜೀವನವನ್ನು, ಪ್ರತಿ ದಿನವೂ ಬದುಕಲು ಮತ್ತು ಎದುರುನೋಡಬೇಕಾದ ಏನನ್ನಾದರೂ ಪ್ರಶಂಸಿಸುವ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಹೀಗಾಗಿಯೇ ಹ್ಯಾಡ್ಲೀ ಒಳಾಂಗಣ ಸೌಲಭ್ಯ ಯೋಜನೆಯಂತೆ. ಇದಕ್ಕಾಗಿಯೇ ನಾನು ಕ್ರೀಡಾಂಗಣದ ಕಾರ್ಯಾರಂಭ ನೋಡಲು ಬಯಸುತ್ತಿದ್ದೇನೆ,' ಎಂದು ಹ್ಯಾಡ್ಲೀ ಹೇಳಿದರು.

ಭಾರತ, ಆಸ್ಟ್ರೇಲಿಯಾ ಸರಣಿಗಳಿಂದ ವೇಗಿ ಕಾಗಿಸೊ ರಬಾಡ ಹೊರಕ್ಕೆಭಾರತ, ಆಸ್ಟ್ರೇಲಿಯಾ ಸರಣಿಗಳಿಂದ ವೇಗಿ ಕಾಗಿಸೊ ರಬಾಡ ಹೊರಕ್ಕೆ

ನ್ಯೂಜಿಲೆಂಡ್ ಕ್ರಿಕೆಟ್ ದಿಗ್ಗಜ 1973ರಲ್ಲಿ ನ್ಯೂಜಿಲೆಂಡ್‌ನ ಬೇಸಿನ್ ರಿವರ್ಸ್‌ನಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸರ್ ಡಿಚರ್ಡ್ಸ್ ಹ್ಯಾಡ್ಲೀ ಪಾದಾರ್ಪಣೆ ಮಾಡಿದ್ದರು. ಇದೇ ವರ್ಷ ಪಾಕಿಸ್ತಾನ ವಿರುದ್ಧವೇ ಏಕದಿನಕ್ಕೂ ಪಾದಾರ್ಪಣೆ ಮಾಡಿದ್ದರು. ಹ್ಯಾಡ್ಲೀ 86 ಟೆಸ್ಟ್ ಪಂದ್ಯಗಳಲ್ಲಿ 431 ವಿಕೆಟ್, 115 ಏಕದಿನ ಇನ್ನಿಂಗ್ಸ್‌ಗಳಲ್ಲಿ 158 ವಿಕೆಟ್ ವಿಶ್ವ ದಾಖಲೆ ಹೊಂದಿದ್ದಾರೆ.

(ಸದ್ಯ ನ್ಯೂಜಿಲೆಂಡ್‌ನಲ್ಲಿರುವ ನಮ್ಮ ಮೈಖೇಲ್ ಪ್ರತಿನಿಧಿ ಜಿ ಉನ್ನಿಕೃಷ್ಣನ್ ಅವರು ವಿಶೇಷ ಸ್ಟೋರಿಗಳನ್ನು ಬರೆಯುತ್ತಿದ್ದಾರೆ.)

Story first published: Sunday, May 3, 2020, 10:53 [IST]
Other articles published on May 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X