ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್ ನಿಯಮದ ಹೊಸ ಬದಲಾವಣೆಗಳಾವವು?

ಬಾರ್ಬಡಸ್, ಜೂ. 28: ಏಕದಿನ ಕ್ರಿಕೆಟ್‌ನಲ್ಲಿ ಐಸಿಸಿ ಮಹತ್ತರ ಬದಲಾವಣೆಗಳನ್ನು ಮಾಡಿದ್ದು ಜುಲೈ 5 ರಿಂದ ಅನ್ವಯವಾಗಲಿದೆ. 15ರಿಂದ 40ನೇ ಓವರ್‌ ನಡುವೆ ಬ್ಯಾಟಿಂಗ್‌ ಪವರ್‌ ಪ್ಲೇ ರದ್ದು, ಎಲ್ಲ ನೋಬಾಲ್‌ಗ‌ಳಿಗೂ ಫ್ರೀ ಹಿಟ್‌, 41ನೇ ಓವರ್‌ನಿಂದ 50ನೇ ಓವರ್‌ ಅವಧಿಯಲ್ಲಿ 30 ಅಡಿ ವೃತ್ತದ ಹೊರಗೆ 5 ಕ್ಷೇತ್ರರಕ್ಷಕರಿಗೆ ಅವಕಾಶ ಬದಲಾವಣೆಯ ಹೈಲೈಟ್ಸ್.

ಈ ಎಲ್ಲ ತಿದ್ದುಪಡಿಗೆ ಬಾರ್ಬಡಸ್ ನಲ್ಲಿ ನಡೆದ ಐಸಿಸಿ ವಾರ್ಷಿಕ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಅನಿಲ್ ಕುಂಬ್ಳೆ ನೇತೃತ್ವದ ಸಮಿತಿ ಈ ಬದಲಾವಣೆಗಳನ್ನು ತರಬೇಕು ಎಂದು ತಿಂಗಳ ಹಿಂದೆ ಶಿಫಾರಸು ಮಾಡಿತ್ತು. ಚಾಲ್ತಿಯಲ್ಲಿರುವ ನಿಯಮಗಳಲ್ಲಿ ಕೆಲ ಬದಲಾವಣೆ ತರಬೇಕು ಎಂದು ಭಾರತ ತಂಡದ ನಾಯಕ ಎಂಎಸ್ ಧೋನಿ , ಶ್ರೀಲಂಕಾದ ಕುಮಾರ ಸಂಗಕ್ಕಾರ ವಿಶ್ವಕಪ್ ನಂತರ ಅಭಿಪ್ರಾಯ ವ್ಯಕ್ತಪಡಿಸಿದ್ದರು.[ಸರಣಿ ಸೋತರೂ ಐಸಿಸಿ ಶ್ರೇಯಾಂಕ ಉಳಿಸಿಕೊಂಡ ಭಾರತ]

icc

41 ನೇ ಓವರ್ ನಂತರದ ಬ್ಯಾಟಿಂಗ್ ಪವರ್ ಪ್ಲೇ ನಲ್ಲಿ ಕೇವಲ 4 ಜನ ಆಟಗಾರರಿಗೆ ಹೊರಗಿರಲು ಅವಕಾಶ ನೀಡಿರುವುದನ್ನು ಬದಲಾವಣೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ 5 ಜನರಿಗೆ ಹೊರಗಿರಲು ಅವಕಾಶ ಕಲ್ಪಿಸಲಾಗಿದೆ.

ಮುಂಬರುವ ಭಾರತ ಮತ್ತು ಜಿಂಬಾಬ್ವೆನಡುವಿನ ಸರಣಿಯಲ್ಲಿ ಹೊಸ ನಿಯಮಗಳು ಜಾರಿಗೆ ಬರಲಿವೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇವಿಡ್ ರಿಚರ್ಡ್ ಸನ್ ತಿಳಿಸಿದ್ದಾರೆ.["ಟೀಂ ಇಂಡಿಯಾ ನಾಯಕ ಕೋತಿ ಥರಾ ಆಡ್ಬಾರದು!"]

ಬದಲಾವಣೆಗಳುನ ಏನೇನು?
* 1 ರಿಂದ 10 ಓವರ್ ಅವಧಿಯಲ್ಲಿ ಕ್ಲೋಸ್ ಕ್ಯಾಚರ್ಸ್ ಗಳು ಕಡ್ಡಾಯವಲ್ಲ
* 16ರಿಂದ 40 ಓವರ್‌ ನಡುವೆ ಬ್ಯಾಟಿಂಗ್‌ ಪವರ್‌ ಪ್ಲೇ ರದ್ದು.
* ಇನ್ನು ಎಲ್ಲ ನೋಬಾಲ್‌ಗ‌ಳಿಗೂ ಫ್ರೀ ಹಿಟ್‌ ಅವಕಾಶ(ಎದೆ ಎತ್ತರಕ್ಕೆ ಬರುವ ನೋ ಬಾಲ್ ಗಳಿಗೂ ಫ್ರೀ ಹಿಟ್)
* ಕೊನೆಯ 10 ಓವರ್‌ಗಳಲ್ಲಿ 5 ಕ್ಷೇತ್ರರಕ್ಷಕರಿಗೆ ಅವಕಾಶ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X