ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಹೊಸ ನಿಯಮ ಪರಿಚಯಿಸಿದ ಐಸಿಸಿ: ನಿಧಾನಗತಿಯ ಓವರ್‌ ರೇಟ್‌ಗೆ ಭಾರೀ ದಂಡ

ICC new rule

ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಹೊಸ ನಿಯಮವನ್ನ ಪರಿಚಯಿಸಿದ್ದು, ನಿಧಾನಗತಿಯ ಓವರ್‌ರೇಟ್‌ ಕುರಿತಾಗಿ ನಿಯಮಗಳನ್ನ ಅಪ್‌ಡೇಟ್‌ ಮಾಡಿದೆ.

ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಹಿನ್ನಲೆಯಲ್ಲಿ ಪಂದ್ಯದ ಸಂಭಾವನೆಯ ಶೇಕಡಾ 20, 50 ಇಲ್ಲವೇ ಶೇಕಡಾ 100ರವರೆಗೆ ದಂಡ ವಿಧಿಸಲಾಗುತ್ತದೆ. ಆದ್ರೆ ಈ ಕುರಿತಾಗಿ ಹೊಸ ನಿಯಮ ಪರಿಚಯಿಸಿರುವ ಐಸಿಸಿ ಈ ತಿಂಗಳಿನಿಂದ ನಿಧಾನಗತಿಯ ಬೌಲಿಂಗ್ ಕಂಡುಬಂದಿದ್ದೇ ಆದಲ್ಲಿ ಉಳಿದ ಕೊನೆಯ ಓವರ್‌ಗಳಲ್ಲಿ 30 ಯಾರ್ಡ್‌ ವೃತ್ತದ ಹೊರಗೆ ಫೀಲ್ಡರ್ ನಿಲ್ಲಿಸುವುದನ್ನ ಕಡಿಮೆ ಮಾಡುತ್ತದೆ ಎಂದು ಘೋಷಿಸಿದೆ.

ಐಸಿಸಿ ಆಡಳಿತ ಮಂಡಳಿಯು ತಾನು ನವೀಕರಿಸಿದ ನಿಯಮಗಳಲ್ಲಿ ದ್ವಿಪಕ್ಷೀಯ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ ಮಧ್ಯದಲ್ಲಿ ತೆಗೆದುಕೊಳ್ಳುವ ಡ್ರಿಂಕ್ಸ್‌ ಬ್ರೇಕ್ ಅನ್ನು ಆಯ್ಕೆಯಾಗಿ ನೀಡಲಾಗುವುದು. ಆಟಗಾರರು ಮತ್ತು ಸಿಬ್ಬಂದಿಗೆ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22ರಲ್ಲಿ ವಿವರಿಸಿರುವ ನಿಧಾನಗತಿ ಬೌಲಿಂಗ್ ದಂಡಗಳು ಅನ್ವಯಿಸುತ್ತವೆ.

'' ನಿಧಾನಗತಿ ಓವರ್ ರೇಟ್ ನಿಯಮಾವಳಿಗಳನ್ನ ಆಟದ ಷರತ್ತಿನ ಮೇಲೆ ಅಪ್‌ಡೇಟ್ ಮಾಡಲಾಗಿದೆ. ಇದು ಫೀಲ್ಡಿಂಗ್ ಮಾಡುವ ತಂಡವನ್ನ ಇನ್ನಿಂಗ್ಸ್‌ನ ಕೊನೆಯ ಓವರ್‌ನ ಮೊದಲ ಎಸೆತಕ್ಕೂ ಮೊದಲು ನಿಗದಿತ ಸಮಯಕ್ಕೆ ಸರಿಯಾಗಿ ಅಥವಾ ಮರುನಿಗದಿಪಡಿಸಿದ ಸಮಯದ ಮೊದಲು ಬೌಲ್‌ ಮಾಡುವ ಸ್ಥಿತಿಯಲ್ಲಿರಬೇಕು ಎಂದು ಷರತ್ತು ವಿಧಿಸುತ್ತಿದೆ'' ಎಂದು ಐಸಿಸಿ ಹೇಳಿದೆ.

ಕೊಹ್ಲಿ 3ನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಾರೋ Or ಇಲ್ಲವೋ?: ಮಹತ್ವದ ಸುಳಿವು ನೀಡಿದ ರಾಹುಲ್ ದ್ರಾವಿಡ್ಕೊಹ್ಲಿ 3ನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಾರೋ Or ಇಲ್ಲವೋ?: ಮಹತ್ವದ ಸುಳಿವು ನೀಡಿದ ರಾಹುಲ್ ದ್ರಾವಿಡ್

ಒಂದು ವೇಳೆ ನಿಗದಿತ ಸಮಯಕ್ಕೂ ಮೀರಿ ಕೊನೆಯ ಓವರ್‌ ತಲುಪಿದ್ದರೆ, 30 ಯಾರ್ಡ್ ವೃತ್ತದಿಂದ ಫಿಲ್ಡರ್‌ ಅನ್ನು ಕಡಿತಗೊಳಿಸಲಾಗುವುದು ಎಂದು ಐಸಿಸಿ ತಿಳಿಸಿದೆ.

"ಫೀಲ್ಡಿಂಗ್ ಮಾಡುವ ತಂಡವು ಅಂತಹ ಸ್ಥಿತಿಯಲ್ಲಿಲ್ಲದಿದ್ದರೆ, ಇನ್ನಿಂಗ್ಸ್‌ನ ಉಳಿದ ಓವರ್‌ಗಳಿಗೆ 30 ಯಾರ್ಡ್ ವೃತ್ತದ ಹೊರಗೆ ಕಡಿಮೆ ಫೀಲ್ಡರ್‌ಗಳನ್ನು ಅನುಮತಿಸಲಾಗುತ್ತದೆ." ಎಂದು ನಿಯಮವನ್ನ ರೂಪಿಸಿದೆ.

ಐಸಿಸಿ ಕ್ರಿಕೆಟ್ ಸಮಿತಿಯು ಈ ಬದಲಾವಣೆಯನ್ನು ಶಿಫಾರಸು ಮಾಡಿದೆ, ಇದು ಎಲ್ಲಾ ಸ್ವರೂಪಗಳಲ್ಲಿ ಆಟದ ವೇಗವನ್ನು ಸುಧಾರಿಸುವ ವಿಧಾನಗಳನ್ನು ನಿಯಮಿತವಾಗಿ ತರುತ್ತದೆ. ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಈ ಕುರಿತಾಗಿ ಸುಮಾರು 100 ದೇಶೀಯ ಪಂದ್ಯಗಳಲ್ಲಿ ಅನ್ವಯಿಸಿದ ಈ ನಿಯಮಗಳ ಪರಿಣಾಮಕಾರಿತ್ವದ ವರದಿಗಳನ್ನು ಪರಿಗಣಿಸಿದ ನಂತರ ಈ ಹೊಸ ನಿಯಮವನ್ನ ಅಂತರಾಷ್ಟ್ರೀಯ ಕ್ರಿಕೆಟ್‌ಗೂ ಪರಿಚಯಿಸಲಾಗಿದೆ.

ಇದರ ಜೊತೆಗೆ ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರಲ್ಲಿ ವಿವರಿಸಿರುವ ನಿಧಾನಗತಿಯ ಓವರ್ ರೇಟ್‌ಗೆ ನಿರ್ಬಂಧಗಳಿಗೆ ಹೆಚ್ಚುವರಿಯಾಗಿ ಪಂದ್ಯದ ದಂಡಗಳನ್ನ ವಿಧಿಸಲಾಗುವುದು. ಅಲ್ಲದೆ ಪ್ರತಿ ಸರಣಿಯ ಪ್ರಾರಂಭದಲ್ಲಿ ಸದಸ್ಯರ ನಡುವಿನ ಒಪ್ಪಂದಕ್ಕೆ ಒಳಪಟ್ಟು ಪ್ರತಿ ಇನ್ನಿಂಗ್ಸ್‌ನ ಮಧ್ಯದ ಹಂತದಲ್ಲಿ ಎರಡು ನಿಮಿಷಗಳು ಮತ್ತು ಮೂವತ್ತು ಸೆಕೆಂಡುಗಳ ಡ್ರಿಂಕ್ಸ್ ಬ್ರೇಕ್ ತೆಗೆದುಕೊಳ್ಳಬಹುದು. ಒಂದ್ವೇಳೆ ಎರಡು ತಂಡಗಳು ಬಯಸದೇ ಇದ್ದರೆ ಈ ಡ್ರಿಂಕ್ಸ್‌ ಬ್ರೇಕ್ ಇರುವುದಿಲ್ಲ.

Story first published: Friday, January 7, 2022, 15:24 [IST]
Other articles published on Jan 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X