ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಸ್ಟ್ ಇಂಡೀಸ್-ಐರ್ಲೆಂಡ್ ಸರಣಿ ವೇಳೆಯೂ ನೂತನ ತಂತ್ರಜ್ಞಾನ ಪರೀಕ್ಷೆ

New technology to be tested in West Indies-Ireland series

ಬ್ರಿಡ್ಜ್‌ಟೌನ್, ಜನವರಿ 6: ಫ್ರಂಟ್‌ ಫೂಟ್‌ ನೋ-ಬಾಲ್‌ ಕಡೆ ಥರ್ಡ್ ಅಫೈರ್‌ ಹದ್ದಿನ ಕಣ್ಣಿಡುವ, ಪ್ರತೀ ಚೆಂಡೂ ಲೀಗಲ್ ಎಂದು ತಂತ್ರಜ್ಞಾನದ ಮೂಲಕ ನಿರ್ಧರಿಸುವ ಪ್ರಕ್ರಿಯೆ ವೆಸ್ಟ್ ವಿಂಡೀಸ್-ಐರ್ಲೆಂಡ್‌ ತಂಡಗಳ ನಿಯಮಿತ ಓವರ್‌ಗಳ ಸರಣಿ ವೇಳೆಯೂ ಮುಂದುವರೆಯಲಿದೆ. ವಿಂಡೀಸ್-ಐರ್ಲೆಂಡ್ ಸರಣಿ 3 ಏಕದಿನ, 3 ಟಿ20 ಪಂದ್ಯಗಳನ್ನು ಒಳಗೊಂಡಿದೆ. ಆರಂಭಿಕ ಏಕದಿನ ಪಂದ್ಯ ಜನವರಿ 7ರಂದು ನಡೆಯಲಿದೆ.

142 ವರ್ಷಗಳಲ್ಲೇ ಮೊದಲು! ಇಂಗ್ಲೆಂಡ್ ಪರವಾಗಿ ವಿಶೇಷ ದಾಖಲೆ ಮಾಡಿದ ಬೆನ್ ಸ್ಟೋಕ್ಸ್142 ವರ್ಷಗಳಲ್ಲೇ ಮೊದಲು! ಇಂಗ್ಲೆಂಡ್ ಪರವಾಗಿ ವಿಶೇಷ ದಾಖಲೆ ಮಾಡಿದ ಬೆನ್ ಸ್ಟೋಕ್ಸ್

ವೆಸ್ಟ್ ಇಂಡೀಸ್ ತಂಡ ಭಾರತಕ್ಕೆ ಪ್ರವಾಸ ಕೈಗೊಂಡಿದ್ದಾಗ ಫ್ರಂಟ್‌ ಫೂಟ್‌ ನೋಬಾಲ್ ಕಡೆ ಥರ್ಡ್ ಅಂಪೈರ್‌ ಸೂಕ್ಷ್ಮ ಲಕ್ಷ್ಯ ಕೊಡುತ್ತಾರೋ ಇಲ್ಲವೋ ಎಂದು ಮೊದಲ ಬಾರಿಗೆ ಪರೀಕ್ಷಿಸಲಾಗಿತ್ತು. ಅಂದರೆ ಫ್ರಂಟ್‌ ಫೂಟ್‌ ನೋಬಾಲ್ ಆಗಿದ್ದನ್ನು ತಂತ್ರಜ್ಞಾನದ ಮೂಲಕ ಪರಿಶೀಲಿಸಿ, ಆನ್ ಫೀಲ್ಡ್‌ ಅಂಪೈರ್‌ಗೆ ತಿಳಿಸಿ ನೋ ಬಾಲ್‌ ಕರೆ ನೀಡಿಸುವ ಜವಾಬ್ದಾರಿ ಥರ್ಡ್ ಅಂಪೈರ್‌ಗೆ ವಹಿಸಲಾಗಿತ್ತು.

India vs Sri Lanka: ಇಂದೋರ್‌ನಲ್ಲಿ 2ನೇ ಟಿ20 ನಡೆಯುತ್ತಾ, ಇಲ್ವಾ?!India vs Sri Lanka: ಇಂದೋರ್‌ನಲ್ಲಿ 2ನೇ ಟಿ20 ನಡೆಯುತ್ತಾ, ಇಲ್ವಾ?!

ಫ್ರಂಟ್‌ ಫೂಟ್‌ ನೋಬಾಲನ್ನು ಅಂಪೈರ್‌ ಗಮನಿಸದೆ ಈ ಮೊದಲು ಅನೇಕಬಾರಿ ವಿವಾದ ನಡೆದಿತ್ತು. ಇಂಥ ವಿವಾದ ತಪ್ಪಿಸಲು ಐಸಿಸಿ ಈಗ ಸರಣಿಗಳ ವೇಳೆ ಥರ್ಡ್ ಅಂಪೈರ್‌ಗೆ ವಿಶೇಷ ಜವಾಬ್ದಾರಿ ವಹಿಸುತ್ತಿದೆ. ಥರ್ಡ್ ಅಂಪೈರ್‌ ಗಮನಕ್ಕೆ ತಂದ ಮೇಲೂ ಫೀಲ್ಡ್ ಅಂಪೈರ್‌ ನೋ ಬಾಲ್‌ ಕರೆ ನೀಡದಿದ್ದರೆ ಆ ನಿರ್ಧಾರದ ಜವಾಬ್ದಾರಿ ಫೀಲ್ಡ್‌ ಅಂಪೈರ್‌ನದ್ದೇ ಆಗಿರಲಿದೆ.

ಆರು ಬಾಲ್‌ಗೆ ಆರು ಸಿಕ್ಸರ್: ಯುವರಾಜ್ ದಾಖಲೆ ನೆನಪಿಸಿದ ಕೀವಿಸ್ ಕ್ರಿಕೆಟಿಗಆರು ಬಾಲ್‌ಗೆ ಆರು ಸಿಕ್ಸರ್: ಯುವರಾಜ್ ದಾಖಲೆ ನೆನಪಿಸಿದ ಕೀವಿಸ್ ಕ್ರಿಕೆಟಿಗ

ಫ್ರಂಟ್‌ ಫೂಟ್‌ ನೋ ಬಾಲ್‌ ಪರಿಶೀಲನೆಯ ಲಾಭ-ನಷ್ಟ ಬೌಲರ್‌ನನ್ನು ಅವಲಂಭಿಸಿದೆ. ನೋ ಬಾಲ್‌ ಅನ್ನು ಥರ್ಡ್ ಅಂಪೈರ್‌ ಒಂದುವೇಳೆ ತಡವಾಗಿ ಆನ್ ಫೀಲ್ಡ್‌ ಅಂಪೈರ್‌ ಗಮನಕ್ಕೆ ತಂದರೆ, ಫೀಲ್ಡ್‌ ಅಂಪೈರ್‌ ನೋ ಬಾಲ್ ಕರೆ ನೀಡಿ ಔಟಾಗಿರುವ ಬ್ಯಾಟ್ಸ್‌ಮನ್‌ಗೆ ಬ್ಯಾಟಿಂಗ್‌ಗೆ ಅವಕಾಶ ನೀಡಲು ಇಲ್ಲಿ ಸಾಧ್ಯತೆಯಿದೆ.

Story first published: Monday, January 6, 2020, 22:13 [IST]
Other articles published on Jan 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X