ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೊಸ ಪರೀಕ್ಷೆಗೆ ಒಳಗಾಗಬೇಕು ಕ್ರಿಕೆಟ್ ತಾರೆಯರು: 8.30 ನಿಮಿಷದಲ್ಲಿ 2 ಕಿ.ಮೀ ಗುರಿ

new test for For team indian cricketers : 2 km in 8.30 minutes

ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ನಲ್ಲಿ ದೈಹಿಕ ಸಾಮರ್ಥ್ಯ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ ಕಂಡುಕೊಂಡಿದ್ದು ಆಟಗಾರರಿಗೆ ಹೊಸ ಫಿಟ್‌ಸನೆಸ್ ಪರೀಕ್ಷೆಯನ್ನು ಪರಿಚಯಿಸಲು ಸಿದ್ಧವಾಗಿದೆ. ಉನ್ನತ ಆಟಗಾರರಿಗಾಗಿ ತನ್ನ ತರಬೇತಿ ಕಾರ್ಯಕ್ರಮದಲ್ಲಿ ವೇಗ ಮತ್ತು ಸಹಿಷ್ಣುತೆಯ ಮಟ್ಟವನ್ನು ಅಳೆಯಲು ಕಡ್ಡಾಯವಾಗಿ 2 ಕಿ.ಮೀ ಸಮಯದ ಪ್ರಯೋಗಗಳನ್ನು ಪರಿಚಯಿಸಲು ಮುಂದಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಈಗಾಗಲೇ ಟೀಮ್ ಇಂಡಿಯಾದ ಆಟಗಾರರು ತಂಡದಲ್ಲಿ ಸ್ಥಾನವನ್ನು ಪಡೆಯಲು ಯೋ-ಯೋ ಪರೀಕ್ಷೆಯನ್ನು ಕಡ್ಡಾಯವಾಗಿ ಪೂರೈಸಬೇಕಿದೆ. ಇದರ ಜೊತೆಗೆ ಬಿಸಿಸಿಐನ ಗುತ್ತಿಗೆ ಪಡೆದ ಆಟಗಾರರು ಮತ್ತು ಭಾರತೀಯ ತಂಡದಲ್ಲಿ ಸ್ಥಾನ ಪಡೆಯಲು ಸ್ಪರ್ಧಿಸುವವರು ಈಗ 2 ಕಿ. ಮೀ ಗುರಿಯನ್ನು ನಿಗದಿತ ಸಮಯದಲ್ಲಿ ಓಡಿ ಗುರಿ ತಲುಪುವುದು ಕಡ್ಡಾಯವಾಗಿದೆ.

ಅಜಿಂಕ್ಯ ರಹಾನೆ ಬಳಗಕ್ಕೆ ಕ್ವಾರಂಟೈನ್ ವಿನಾಯಿತಿ ನೀಡಿದ ಮಹಾರಾಷ್ಟ್ರಅಜಿಂಕ್ಯ ರಹಾನೆ ಬಳಗಕ್ಕೆ ಕ್ವಾರಂಟೈನ್ ವಿನಾಯಿತಿ ನೀಡಿದ ಮಹಾರಾಷ್ಟ್ರ

ಇಂಡಿಯನ್ ಎಕ್ಸ್‌ಪ್ರೆಸ್ ಈ ವಿಚಾರವಾಗಿ ಬಿಸಿಸಿಐ ಮೂಲಗಳ ಹೇಳಿಯನ್ನು ಪ್ರಕಟಿಸಿದೆ. ಈ ಹೇಳಿಕೆಯಲ್ಲಿ "ನಮ್ಮ ಫಿಟ್‌ನೆಸ್‌ಅನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಈಗಿರುವ ಫಿಟ್‌ನೆಸ್ ಮಾನದಂಡ ಪ್ರಮುಖ ಪಾತ್ರವಹಿಸಿದೆ. ಹೊಸದಾಗಿ ಕಾರ್ಯರೂಪಕ್ಕೆ ತರಲು ಮುಂದಾಗಿರುವ ಸಮಯ ಪ್ರಯೋಗದ ವ್ಯಾಯಾಮ ಇನ್ನೂ ಉತ್ತಮವಾಗಿ ಸ್ಪರ್ಧಿಸಲು ನಮಗೆ ಸಹಾಯ ಮಾಡುತ್ತದೆ. ಮಂಡಳಿ ಯಾವಾಗಲೂ ಮಾನದಂಡಗಳನ್ನು ನವೀಕರಿಸುತ್ತಿರುತ್ತದೆ" ಎಂದು ಬಿಸಿಸಿಐ ಮೂಲಗಳ ಪ್ರತಿಕ್ರಿಯೆಯನ್ನು ಉಲ್ಲೇಖಿಸಿದೆ.

ಹೊಸ ನಿಯಮದ ಪ್ರಕಾರ ವೇಗದ ಬೌಲರ್‌ಗಳು 2 ಕಿ.ಮೀ ಅಂತರವನ್ನು 8 ನಿಮಿಷ 15 ಸೆಕೆಂಡ್‌ಗಳಲ್ಲಿ ಪೂರೈಸಬೇಕಿದೆ. ಬ್ಯಾಟ್ಸ್‌ಮನ್, ವಿಕೆಟ್ ಕೀಪರ್ ಮತ್ತು ಸ್ಪಿನ್ನರ್‌ಗಳಿಗೆ 8 ನಿಮಿಷ 30 ಸೆಕೆಂಡ್‌ಗಳ ಅವಧಿಯಲ್ಲಿ ಪೂರೈಸುವ ಗುರಿಯನ್ನು ನಿಗದಿಪಡಿಸಲಾಗಿದೆ.

ಭಾರತ vs ಇಂಗ್ಲೆಂಡ್: ಟೆಸ್ಟ್ ಪಂದ್ಯಗಳಿಗೆ ಇಂಗ್ಲೆಂಡ್ ತಂಡ ಪ್ರಕಟಭಾರತ vs ಇಂಗ್ಲೆಂಡ್: ಟೆಸ್ಟ್ ಪಂದ್ಯಗಳಿಗೆ ಇಂಗ್ಲೆಂಡ್ ತಂಡ ಪ್ರಕಟ

ಈ ಹೊಸ ಪರೀಕ್ಷೆಯ ಪ್ರಸ್ತಾಪಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಒಪ್ಪಿಗೆಯನ್ನು ಸೂಚಿಸಿದ್ದಾರೆ. ಈ ಬಗ್ಗೆ ಟೀಮ್ ಇಂಡಿಯಾದ ಎಲ್ಲಾ ಆಟಗಾರರಿಗೂ ಮಾಹಿತಿಯನ್ನು ನೀಡಲಾಗಿದ್ದು ಫೆಬ್ರವರ್, ಜೂನ್ ಮತ್ತು ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಈ ಪರೀಕ್ಷೆಗೆ ಆಟಗಾರರು ಒಳಗಾಗಬೇಕಿದೆ.

Story first published: Friday, January 22, 2021, 9:58 [IST]
Other articles published on Jan 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X