ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ನ್ಯೂಜಿಲೆಂಡ್‌ v/s ಶ್ರೀಲಂಕಾ ಫೈಟ್‌ನಲ್ಲಿ ಗೆಲ್ಲೋರು ಯಾರು?

New Zealand aim for confident World Cup start against Sri Lanka


ಲಂಡನ್‌, ಮೇ 31: ವೆಸ್ಟ್‌ ಇಂಡೀಸ್‌ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅನುಭವಿಸಿದ ಸೋಲನ್ನು ಮರೆತು ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಶುಭಾರಂಭ ಮಾಡುವ ತವಕದಲ್ಲಿರುವ ಕಳೆದ ಬಾರಿಯ ರನ್ನರ್ಸ್‌ಅಪ್‌ ನ್ಯೂಜಿಲೆಂಡ್‌ ತಂಡ, 1996ರ ಚಾಂಪಿಯನ್ಸ್‌ ಶ್ರೀಲಂಕಾ ವಿರುದ್ಧ ಇದೇ ಶನಿವಾರ ಪೈಪೋಟಿ ನಡೆಸಲಿದೆ.

ಪಂದ್ಯದ ಲೈವ್‌ ಸ್ಕೋರ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ವಿಶ್ವಕಪ್‌ಗೂ ಮುನ್ನ ನಡೆದ ಎರಡು ಅಭ್ಯಾಸ ಪಂದ್ಯಗಳಲ್ಲಿ ನ್ಯೂಜಿಲೆಂಡ್‌ ಮಿಶ್ರ ಫಲ ಕಂಡಿದೆ. ಮೊದಲಿಗೆ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ಸ್‌ ಟೀಮ್‌ ಇಂಡಿಯಾ ವಿರುದ್ಧ 6 ವಿಕೆಟ್‌ಗಳ ಜಯ ದಾಖಲಿಸಿದ ಕಿವೀಸ್‌, ತನ್ನ ಎರಡನೇ ಅಭ್ಯಾಸ ಪಂದ್ಯದಲ್ಲಿ ವಿಂಡೀಸ್‌ ಕೈಲಿ 421 ರನ್‌ಗಳನ್ನು ಚಚ್ಚಿಸಿಕೊಂಡು 91 ರನ್‌ಗಳ ಸೋಲನುಭವಿಸುವ ಮೂಲಕ ಬೆಚ್ಚಿಬಿದ್ದಿತ್ತು.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು

{headtohead_cricket_4_7}

ಆದರೆ, ಎರಡೂ ಪಂದ್ಯಗಳಲ್ಲಿ ನ್ಯೂಜಿಲೆಂಡ್‌ ತಂಡದ ಪರ ವೇಗಿ ಟ್ರೆಂಟ್‌ ಬೌಲ್ಟ್‌ ಯಶಸ್ಸು ಗಳಿಸಿರುವುದು ನಾಯಕ ಕೇನ್‌ ವಿಲಿಯಮ್ಸನ್‌ಗೆ ಆತ್ಮವಿಶ್ವಾಸ ತಂದುಕೊಟ್ಟಿದೆ. ಜೊತೆಗೆ ಎರಡನೇ ಪಂದ್ಯದಲ್ಲಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಟಾಮ್‌ ಬ್ಲಂಡಲ್‌ ಶತಕ ಸಿಡಿಸಿ ಗಮನ ಸೆಳೆದಿದ್ದರು. ಒಟ್ಟಾರೆ ಅಭ್ಯಾಸ ಪಂದ್ಯಗಳಲ್ಲಿ ತನ್ನ ಸಾಮರ್ಥ್ಯ ಮತ್ತು ದೌರ್ಬಲ್ಯ ಎರಡನ್ನೂ ಕಂಡುಕೊಂಡಿರುವ ನ್ಯೂಜಿಲೆಂಡ್‌, ಸೂಕ್ತ ರಣತಂತ್ರದೊಂದಿಗೆ ಅಖಾಡಕ್ಕೆ ಇಳಿಯಲು ಸಜ್ಜಾಗಿದೆ.

ವಿಶ್ವಕಪ್ 2019: ವಿಂಡೀಸ್ ವಿರುದ್ಧ ಅನಗತ್ಯ ದಾಖಲೆ ಬರೆದ ಪಾಕಿಸ್ತಾನವಿಶ್ವಕಪ್ 2019: ವಿಂಡೀಸ್ ವಿರುದ್ಧ ಅನಗತ್ಯ ದಾಖಲೆ ಬರೆದ ಪಾಕಿಸ್ತಾನ

1
43646

ಟಾಮ್‌ ಲೇಥಮ್‌, ರಾಸ್‌ ಟೇಲರ್‌ ಹಾಗೂ ನಾಯಕ ಕೇನ್‌ ವಿಲಿಯಮ್ಸನ್‌ ತಂಡದ ಬ್ಯಾಟಿಂಗ್‌ ಶಕ್ತಿಯಾಗಿದ್ದಾರೆ. ಜೊತೆಗೆ ಆರಂಭಿಕರಾದ ಮಾರ್ಟಿನ್‌ ಗಪ್ಟಿಲ್‌ ಮತ್ತು ಕಾಲಿನ್‌ ಮನ್ರೊ ಯಾವುದೇ ಸಂದರರ್ಭದಲ್ಲಿ ತಂಡಕ್ಕೆ ಜಯ ತಂದುಕೊಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಟ್ರೆಂಟ್‌ ಬೌಲ್ಟ್‌ ಜೊತೆಗೆ ಜಿಮ್ಮಿ ನೀಶಮ್‌ ಮತ್ತು ಟಿಮ್‌ ಸೌಥೀ ಪ್ರಮುಖ ಅಸ್ತ್ರಗಳಾಗಿದ್ದಾರೆ.

ವಿಶ್ವಕಪ್‌: ಸೋಲಿಗೆ ಕಾರಣ ಹೇಳಿದ ದ.ಆಫ್ರಿಕಾ ನಾಯಕ ಫಾಫ್‌ ಡು'ಪ್ಲೆಸಿಸ್‌ವಿಶ್ವಕಪ್‌: ಸೋಲಿಗೆ ಕಾರಣ ಹೇಳಿದ ದ.ಆಫ್ರಿಕಾ ನಾಯಕ ಫಾಫ್‌ ಡು'ಪ್ಲೆಸಿಸ್‌

ಮತ್ತೊಂದೆಡೆ ಶ್ರೀಲಂಕಾ ತಂಡ ಈ ಬಾರಿಯ ವಿಶ್ವಕಪ್‌ ಅಖಾಡದಲ್ಲಿ ಅಷ್ಟೇನು ಬಲಿಷ್ಠವಾಗಿ ಕಾಣಿಸುತ್ತಿಲ್ಲ. ಕೇವಲ ಬೆರಳೆಣಿಕೆಯಷ್ಟು ಏಕದಿನ ಪಂದ್ಯಗಳನ್ನು ಆಡಿರುವ ಆರಂಭಿಕ ಬ್ಯಾಟ್ಸ್‌ಮನ್‌ ದಿಮುತ್‌ ಕರುಣಾರತ್ನೆ ಈ ಬಾರಿ ವಿಶ್ವಕಪ್‌ನಲ್ಲಿ ಲಮಕಾ ಪಡೆಯನ್ನು ಮುನ್ನಡೆಸಲಿದ್ದಾರೆ. ಆದರೂ, ಏಂಜಲೋ ಮ್ಯಾಥ್ಯೂಸ್‌ ಮತ್ತು ಲಸಿತ್‌ ಮಾಲಿಂಗ ಅವರಂತಹ ಅನುಭವಿ ಆಟಗಾರರ ನೆರವು ತಂಡಕ್ಕಿದೆ.

ಪಂದ್ಯ ಆರಂಭ: ಮಧ್ಯಾಹ್ನ 3:00ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ಕಾರ್ಡಿಫ್‌ ವೇಲ್ಸ್‌ ಕ್ರೀಡಾಂಗಣ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ತಂಡಗಳ ವಿವರ

ನ್ಯೂಜಿಲೆಂಡ್‌: ಕೇನ್‌ ವಿಲಿಯಮ್ಸನ್‌ (ನಾಯಕ), ಟಾಮ್‌ ಬ್ಲಂಡಲ್‌, ಟ್ರೆಂಟ್‌ ಬೌಲ್ಟ್‌, ಕಾಲಿನ್‌ ಡಿ'ಗ್ರ್ಯಾಂಡ್‌ಹೋಮ್‌, ಲಾಕಿ ಫರ್ಗ್ಯೂಸನ್‌, ಮಾರ್ಟಿನ್‌ ಗಪ್ಟಿಲ್‌, ಮ್ಯಾಟ್‌ ಹೆನ್ರಿ, ಟಾಮ್‌ ಲೇಥಮ್‌, ಕಾಲಿನ್‌ ಮನ್ರೊ, ಜಿಮ್ಮಿ ನೀಶಮ್‌, ಹೆನ್ರಿ ನಿಕೋಲ್ಸ್‌, ಮಿಚೆಲ್‌ ಸ್ಯಾಂಟ್ನರ್‌, ಇಶ್‌ ಸೋಧಿ, ಟಿಮ್‌ ಸೌಥೀ, ರಾಸ್‌ ಟೇಲರ್‌.

ಶ್ರೀಲಂಕಾ: ದಿಮುತ್‌ ಕರುಣಾರತ್ನೆ (ನಾಯಕ), ಅವಿಷ್ಕಾ ಫರ್ನಾಂಡೊ, ಸುರಂಗ ಲಕ್ಮಲ್‌, ಲಸಿತ್‌ ಮಾಲಿಂಗ, ಏಂಜಲೊ ಮ್ಯಾಥ್ಯೂಸ್‌, ಜೀವನ್‌ ಮೆಂಡಿಸ್‌, ಕುಶಲ್‌ ಮೆಂಡಿಸ್‌, ಕುಶಲ್‌ ಪೆರೆರಾ, ತಿಸಾರ ಪೆರೆರಾ, ನುವಾನ್‌ ಪ್ರದೀಪ್‌, ಧನಂಜಯ ಡಿ'ಸಿಲ್ವಾ, ಮಲಿಂಡಾ ಸಿರಿವರ್ಧನ, ಲಾಹಿರು ತಿರಿಮನ್ನೆ, ಇಸುರು ಉದನಾ, ಜೆಫ್ರೀ ವಾಂಡರ್ರ್ಸೆ.

Story first published: Friday, May 31, 2019, 18:27 [IST]
Other articles published on May 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X