ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿದೇಶಿ ಲೀಗ್‌ಗಳಲ್ಲಿ ಆಡಲು ನ್ಯೂಜಿಲೆಂಡ್‌ ತಂಡದಿಂದ ದೂರವುಳಿದ ಆಲ್‌ರೌಂಡರ್ ಜಿಮ್ಮಿ ನೀಶಮ್

ಟಿ20 ವಿಶ್ವಕಪ್‌ನ ಆರಂಭ ಮತ್ತು ಜಗತ್ತಿನಾದ್ಯಂತ ಪ್ರಮುಖ ಟಿ20 ಲೀಗ್‌ಗಳ ಆಗಮನದ ಮುಂಚೆಯೇ, ಕ್ರಿಕೆಟಿಗರು ತಮ್ಮ ಅಂತರಾಷ್ಟ್ರೀಯ ಬದ್ಧತೆಗಳಿಗೆ ಹೋಲಿಸಿದರೆ ಲೀಗ್-ಆಧಾರಿತ ಸ್ವರೂಪಕ್ಕೆ ಆದ್ಯತೆ ನೀಡಲು ಪ್ರಾರಂಭಿಸಿದ್ದಾರೆ. ಬೆನ್ ಸ್ಟೋಕ್ಸ್ ಈ ವರ್ಷದ ಆರಂಭದಲ್ಲಿ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವುದರೊಂದಿಗೆ ಮತ್ತು ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಕೇಂದ್ರ ಒಪ್ಪಂದವನ್ನು ನಿರಾಕರಿಸುವುದರೊಂದಿಗೆ ರಾಷ್ಟ್ರೀಯ ತಂಡಕ್ಕಾಗಿ ಆಡುವುದಕ್ಕಿಂತ ಇತರೆ ಲೀಗ್‌ಗಳಲ್ಲಿ ಆಡಲು ಆದ್ಯತೆ ನೀಡುತ್ತಿದ್ದಾರೆ.

ಆಲ್ ರೌಂಡರ್ ಜಿಮ್ಮಿ ನೀಶಮ್ ಅವರು ಈಗಾಗಲೇ ಸಾಗರೋತ್ತರ ದೇಶೀಯ ಲೀಗ್‌ಗಳೊಂದಿಗೆ ಮಾಡಿಕೊಂಡಿರುವ ಪೂರ್ವ-ಯೋಜಿತ ಒಪ್ಪಂದಗಳ ಆಧಾರದ ಮೇಲೆ ರಾಷ್ಟ್ರೀಯ ತಂಡದ ಜೊತೆಗಿನ ಒಪ್ಪಂದವನ್ನು ನಿರಾಕರಿಸಿದ್ದಾರೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಶುಕ್ರವಾರ ದೃಢಪಡಿಸಿದೆ.

ಒಂದು ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ವಿರಾಟ್ ಕೊಹ್ಲಿಗೆ ಸಿಗುವ ಹಣ ಎಷ್ಟು ಕೋಟಿ ಗೊತ್ತಾ?ಒಂದು ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ವಿರಾಟ್ ಕೊಹ್ಲಿಗೆ ಸಿಗುವ ಹಣ ಎಷ್ಟು ಕೋಟಿ ಗೊತ್ತಾ?

ಲಭ್ಯವಿದ್ದಾಗ ನ್ಯೂಜಿಲೆಂಡ್‌ ತಂಡಕ್ಕಾಗಿ ಆಯ್ಕೆಗೆ ನೀಶಮ್ ಅವರನ್ನು ಇನ್ನೂ ಪರಿಗಣಿಸಲಾಗುವುದು ಎಂದು ನ್ಯೂಜಿಲೆಂಡ್ ಕ್ರಿಕೆಟ್ ದೃಢಪಡಿಸಿದೆ. ನ್ಯೂಜಿಲೆಂಡ್ ಕ್ರಿಕೆಟ್‌ನ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಲ್‌ರೌಂಡರ್ ಜಿಮ್ಮಿ ನೀಶಮ್ ಇದೊಂದು ಕಷ್ಟಕರ ನಿರ್ಧಾರ ಎಂದು ಹೇಳಿದ್ದಾರೆ, ಈ ಬಗ್ಗೆ ತಮ್ಮ ಸ್ಪಷ್ಟೀಕರಣವನ್ನು ನೀಡಿದ್ದಾರೆ.

ನ್ಯೂಜಿಲೆಂಡ್‌ಗಾಗಿ ಆಡುವುದು ವೃತ್ತಿಜೀವನದ ಶ್ರೇಷ್ಠ ಗೌರವ

ನ್ಯೂಜಿಲೆಂಡ್‌ಗಾಗಿ ಆಡುವುದು ವೃತ್ತಿಜೀವನದ ಶ್ರೇಷ್ಠ ಗೌರವ

"ಇಂದು ಕೇಂದ್ರ ಒಪ್ಪಂದವನ್ನು ನಿರಾಕರಿಸುವ ನನ್ನ ನಿರ್ಧಾರದ ಸುದ್ದಿಯು ನನ್ನ ದೇಶವನ್ನು ಪ್ರತಿನಿಧಿಸುವ ಬದಲು ಹಣವನ್ನು ಆಯ್ಕೆ ಮಾಡುವಂತೆ ನೋಡಲಾಗುತ್ತದೆ ಎಂದು ನನಗೆ ತಿಳಿದಿದೆ. ಜುಲೈನಲ್ಲಿ ನಾನು ಒಪ್ಪಂದದ ಪ್ರಸ್ತಾಪವನ್ನು ಸ್ವೀಕರಿಸಲು ಯೋಜಿಸಿದ್ದೆ, ಆದರೆ ನ್ಯೂಜಿಲೆಂಡ್ ತಂಡದ ಆಯ್ಕೆ ಪಟ್ಟಿಯಿಂದ ಹೊರಗುಳಿದ ನಂತರ ನಾನು ಪ್ರಪಂಚದಾದ್ಯಂತ ಇತರ ಲೀಗ್‌ಗಳಲ್ಲಿ ಆಡಲು ಬದ್ಧನಾಗಿದ್ದೇನೆ. ಇದು ಕಠಿಣ ನಿರ್ಧಾರವಾಗಿತ್ತು ಆದರೆ ನ್ಯೂಜಿಲೆಂಡ್‌ ಕ್ರಿಕೆಟ್‌ಗೆ ಮರು ಸಹಿ ಮಾಡುವ ನನ್ನ ಮಾತಿಗೆ ಹಿಂತಿರುಗುವ ಬದಲು ಆ ಬದ್ಧತೆಗಳನ್ನು ಗೌರವಿಸಲು ನಾನು ನಿರ್ಧರಿಸಿದ್ದೇನೆ" ಎಂದು ನೀಶಮ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.

ನ್ಯೂಜಿಲೆಂಡ್‌ಗಾಗಿ ಆಡುವುದು ನನ್ನ ವೃತ್ತಿಜೀವನದ ಶ್ರೇಷ್ಠ ಗೌರವವಾಗಿದೆ ಮತ್ತು ನಿರೀಕ್ಷಿತ ಭವಿಷ್ಯಕ್ಕಾಗಿ, ವಿಶೇಷವಾಗಿ ಪ್ರಮುಖ ಪಂದ್ಯಾವಳಿಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಲು ನಾನು ಬದ್ಧನಾಗಿರುತ್ತೇನೆ ಎಂದು ಅವರು ಹೇಳಿದರು.

ಆಸ್ಟ್ರೇಲಿಯಾದಲ್ಲಿ ಭಾರತದ ಈ ಆಟಗಾರನಿಗೆ ಆಡುವ ಅವಕಾಶ ನೀಡಬೇಕು ಎಂದ ವೆಟ್ಟೋರಿ

ವಿಶ್ವದ ಪ್ರಮುಖ ಲೀಗ್‌ಗಳಲ್ಲಿ ಭಾಗಿ

ವಿಶ್ವದ ಪ್ರಮುಖ ಲೀಗ್‌ಗಳಲ್ಲಿ ಭಾಗಿ

ಇಂಡಿಯನ್ ಪ್ರೀಮಿಯರ್ ಲೀಗ್, ಬಿಗ್‌ ಬ್ಯಾಷ್ ಲೀಗ್, ಪಾಕಿಸ್ತಾನ್ ಸೂಪರ್ ಲೀಗ್ ಯಶಸ್ಸಿನ ನಂತರ ಈಗ ದುಬೈ ಮತ್ತು ದಕ್ಷಿಣ ಆಫ್ರಿಕಾ ಕೂಡ ಲೀಗ್‌ಗಳನ್ನು ಆಯೋಜನೆ ಮಾಡುತ್ತಿದ್ದು. ಆಟಗಾರರಿಗೆ ಕೋಟಿ ಕೋಟಿ ಸಂಭಾವನೆ ದೊರೆಯಲಿದೆ. ಲೀಗ್‌ಗಳಲ್ಲಿ ಭಾಗವಹಿಸಲು ಕೆಲವು ಆಟಗಾರರು ರಾಷ್ಟ್ರೀಯ ತಂಡದಿಂದ ದೂರ ಉಳಿಯುವ ನಿರ್ಧಾರ ಮಾಡುತ್ತಿದ್ದಾರೆ.

ಲೀಗ್‌ಗಳಲ್ಲಿ ಸತತವಾಗಿ ಭಾಗವಹಿಸುವ ಸಲುವಾಗಿ ತಮ್ಮ ಸಮಯವನ್ನು ಹೊಂದಿಸಿಕೊಳ್ಳಲು ರಾಷ್ಟ್ರೀಯ ತಂಡವನ್ನೇ ತೊರೆಯುತ್ತಿದ್ದಾರೆ. ವೆಸ್ಟ್ ಇಂಡೀಸ್ ಕ್ರಿಕೆಟಿಗರು ಕೂಡ ಇದೇ ರೀತಿ ಮಾಡಿದ್ದರು. ಇದರ ಬಗ್ಗೆ ವೆಸ್ಟ್ ಇಂಡಿಸ್ ಕ್ರಿಕೆಟ್ ಮಂಡಳಿ ಬೇಸರ ವ್ಯಕ್ತಪಡಿಸಿತ್ತು.

ಬ್ಲೇರ್ ಟಿಕ್ನರ್ ಮತ್ತು ಫಿನ್ ಅಲೆನ್‌ಗೆ ಸ್ಥಾನ

ಬ್ಲೇರ್ ಟಿಕ್ನರ್ ಮತ್ತು ಫಿನ್ ಅಲೆನ್‌ಗೆ ಸ್ಥಾನ

ಬ್ಲೇರ್ ಟಿಕ್ನರ್ ಮತ್ತು ಫಿನ್ ಅಲೆನ್ ತಮ್ಮ ಮೊದಲ ನ್ಯೂಜಿಲೆಂಡ್ ಕ್ರಿಕೆಟ್ ಕೇಂದ್ರ ಒಪ್ಪಂದಗಳನ್ನು ಒಪ್ಪಿಕೊಂಡಿದ್ದಾರೆ, ಟ್ರೆಂಟ್ ಬೌಲ್ಟ್ ಮತ್ತು ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಅವರ ನಿರ್ಗಮನದಿಂದ ಖಾಲಿ ಇರುವ ಸ್ಥಾನಗಳನ್ನು ಪರಿಣಾಮಕಾರಿಯಾಗಿ ಭರ್ತಿ ಮಾಡಿದ್ದಾರೆ.

ಬ್ಲೇರ್ ಟಿಕ್ನರ್, ಸೆಂಟ್ರಲ್ ಸ್ಟಾಗ್ಸ್ ವೇಗದ ಬೌಲರ್, ಆರು ಏಕದಿನ ಮತ್ತು 11 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ನ್ಯೂಜಿಲೆಂಡ್‌ಗಾಗಿ ಆಡಿದ್ದಾರೆ, ಆದರೆ 23 ವರ್ಷದ ಫಿನ್‌ ಅಲೆನ್ ಈಗಾಗಲೇ ಎಂಟು ಏಕದಿನ ಮತ್ತು 13 ಟಿ20 ಪಂದ್ಯಗಳಲ್ಲಿ ತನ್ನ ದೇಶವನ್ನು ಪ್ರತಿನಿಧಿಸಿದ್ದಾರೆ.

ನ್ಯೂಜಿಲೆಂಡ್‌ ತಂಡದ ಮೇಲೆ ಪರಿಣಾಮ

ನ್ಯೂಜಿಲೆಂಡ್‌ ತಂಡದ ಮೇಲೆ ಪರಿಣಾಮ

ಟಿ20 ವಿಶ್ವಕಪ್‌ ಆರಂಭಕ್ಕೆ ಕೆಲವೇ ದಿನಗಳು ಇರುವ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್‌ ತಂಡಕ್ಕೆ ಜಿಮ್ಮಿ ನೀಶಮ್ ಲಭ್ಯವಿಲ್ಲದಿರುವುದು ತಂಡಕ್ಕೆ ಹಿನ್ನಡೆಯಾಗಿದೆ. ಟಿ20 ವಿಶ್ವಕಪ್‌ಗೆ ಇನ್ನೂ ನ್ಯೂಜಿಲೆಂಡ್ ಕ್ರಿಕೆಟ್ ತನ್ನ ತಂಡವನ್ನು ಪ್ರಕಟಿಸಿಲ್ಲ.

ಪ್ರಮುಖ ಬೌಲರ್ ಟ್ರೆಂಟ್ ಬೌಲ್ಟ್ ಕೂಡ ತಂಡದ ಆಯ್ಕೆಯಿಂದ ದೂರವುಳಿದಿದ್ದಾರೆ, ಈಗ ಪ್ರಮುಖ ಆಲ್‌ರೌಂಡರ್ ಆಗಿರುವ ಜಿಮ್ಮಿ ನೀಶಮ್ ಕೂಡ ತಂಡದ ಒಪ್ಪಂದದಿಂದ ಹಿಂದೆ ಸರಿದಿದ್ದಾರೆ.

Story first published: Friday, September 16, 2022, 12:43 [IST]
Other articles published on Sep 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X