ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020 ನಡೆಸಲು ನ್ಯೂಜಿಲೆಂಡ್, ಶ್ರೀಲಂಕಾ, ಯುಎಇ ಮಧ್ಯೆ ಪೈಪೋಟಿ!

New Zealand also offers to host IPL after UAE and Sri Lanka

ನವದೆಹಲಿ: ಆಕರ್ಷಣೀಯ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಿಸಲು ಯುನೈಟೆಡ್ ಅರಬ್ ಎಮಿರೇಟ್ಸ್‌ ಮತ್ತು ಶ್ರೀಲಂಕಾ ದೇಶಗಳು ಆಸಕ್ತಿ ತೋರಿಸಿದ್ದವು. ಇದೀಗ ನ್ಯೂಜಿಲೆಂಡ್ ಕೂಡ ಐಪಿಎಲ್‌ಗೆ ಆತಿಥ್ಯವಹಿಸುವ ಆಫರ್ ನೀಡಿದೆ. ಐಪಿಎಲ್ ನಡೆಸಲು ನ್ಯೂಜಿಲೆಂಡ್ ಆಸಕ್ತಿ ತೋರಿಸಿರುವುದಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಬೆಳವಣಿಗೆಗಳನ್ನು ಗಮನಿಸಿದರೆ ಈ ಬಾರಿಯ ಐಪಿಎಲ್ ವಿದೇಶದಲ್ಲಿ ನಡೆದರೂ ಅಚ್ಚರಿಯಿಲ್ಲ.

ಜುಲೈ 8ರಿಂದ Eng vs WI ಟೆಸ್ಟ್: ತಂಡಗಳು, ನೇರಪ್ರಸಾರ ಸಂಪೂರ್ಣ ಮಾಹಿತಿಜುಲೈ 8ರಿಂದ Eng vs WI ಟೆಸ್ಟ್: ತಂಡಗಳು, ನೇರಪ್ರಸಾರ ಸಂಪೂರ್ಣ ಮಾಹಿತಿ

ಭಾರತದಲ್ಲಿ ಕೊರೊನಾವೈರಸ್ ಸೋಂಕಿತಯ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ವಿಶ್ವದಲ್ಲೇ ಅತ್ಯಧಿಕ ಸೋಂಕಿತರಿರುವ ದೇಶಗಳ ಸಾಲಿನಲ್ಲಿ ಭಾರತವೀಗ 3ನೇ ಸ್ಥಾನಕ್ಕೆ ಜಿಗಿದಿರುವುದು ಇನ್ನಷ್ಟು ಆತಂಕಕ್ಕೀಡು ಮಾಡಿದೆ. ಭಾರತದಲ್ಲಿ ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆ 20,000ದತ್ತ ಸಾಗುತ್ತಿದೆ.

ಕ್ರಿಕೆಟ್‌ ಜಗತ್ತಿನಲ್ಲಿ ನಿರ್ಮಾಣವಾಗಿರುವ ಬಲು ಅಪರೂಪದ 5 ದಾಖಲೆಗಳು!ಕ್ರಿಕೆಟ್‌ ಜಗತ್ತಿನಲ್ಲಿ ನಿರ್ಮಾಣವಾಗಿರುವ ಬಲು ಅಪರೂಪದ 5 ದಾಖಲೆಗಳು!

ಮಾರಕ ಸೋಂಕಿನಿಂದಾಗಿ ಭಾರತದಲ್ಲಿ ಸದ್ಯಕ್ಕೆ ಯಾವುದೇ ಕ್ರಿಕೆಟ್ ಟೂರ್ನಿಗಳು ನಿಗದಿಯಾಗಿಲ್ಲ. ಟೀಮ್ ಇಂಡಿಯಾ ಆಟಗಾರರು ಅಧಿಕೃತವಾಗಿ ಜೊತೆಯಾಗಿ ಅಭ್ಯಾಸವನ್ನೇ ಶುರುಮಾಡಿಲ್ಲ ಎಂದಾದರೆ ಇನ್ನು ಐಪಿಎಲ್ ಭಾರತದಲ್ಲಿ ನಡೆಯೋದು ಅನುಮಾನವೆನಿಸಿದೆ.

ಭಾರತದಲ್ಲಿ ಐಪಿಎಲ್ ನಡೆಯೋದು ಕಷ್ಟ

ಭಾರತದಲ್ಲಿ ಐಪಿಎಲ್ ನಡೆಯೋದು ಕಷ್ಟ

2020ರ ಮಾರ್ಚ್ 29ರಂದೇ ಐಪಿಎಲ್ ಆರಂಭವಾಗುವುದರಲ್ಲಿತ್ತು. ಆದರೆ ಕೊರೊನಾದಿಂದಾಗಿ ಶ್ರೀಮಂತ ಕ್ರಿಕೆಟ್ ಟೂರ್ನಿಯನ್ನು ಮುಂದೂಡಲಾಗಿದೆ. ಸದ್ಯಕ್ಕೆ ಐಪಿಎಲ್ ಅನ್ನು ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಸಲು ಯೋಚಿಸಲಾಗಿದೆ. ಆದರೆ ಸದ್ಯದ ಕೊರೊನಾ ಆತಂಕದ ಮಧ್ಯೆ ಭಾರತದಲ್ಲಿ ಐಪಿಎಲ್ ನಡೆಸೋದು ಕಷ್ಟವೆನಿಸಿದೆ.

ನ್ಯೂಜಿಲೆಂಡ್‌ನಿಂದ ಆಫರ್

ನ್ಯೂಜಿಲೆಂಡ್‌ನಿಂದ ಆಫರ್

'ಭಾರತದಲ್ಲೇ ಐಪಿಎಲ್ ನಡೆಸೋದು ನಮ್ಮ ಮೊದಲ ಆದ್ಯತೆಯಾಗಿದೆ. ಆದರೆ ಇಲ್ಲಿ ಟೂರ್ನಿ ನಡೆಸೋದು ಸುರಕ್ಷಿತವಲ್ಲ ಅನ್ನಿಸಿದರೆ ವಿದೇಶದಲ್ಲಿ ಟೂರ್ನಿ ನಡೆಸುವ ಆಯ್ಕೆಯತ್ತ ಹೋಗಲಿದ್ದೇವೆ. ಯುಎಇ, ಶ್ರೀಲಂಕಾ ಬಳಿಕ ಈಗ ನ್ಯೂಜಿಲೆಂಡ್ ಕೂಡ ಐಪಿಎಲ್‌ಗೆ ಆತಿಥ್ಯ ವಹಿಸುವ ಆಫರ್ ನೀಡಿದೆ,' ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐ ಜೊತೆ ಹೇಳಿಕೊಂಡಿದ್ದಾರೆ.

ಐಪಿಎಲ್ ವಿದೇಶದಲ್ಲಿ ನಡೆದಿತ್ತು

ಐಪಿಎಲ್ ವಿದೇಶದಲ್ಲಿ ನಡೆದಿತ್ತು

ಭಾರತದಲ್ಲಿ ಇದೇ ರೀತಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಸಾಗಿದರೆ, ವಿದೇಶದಲ್ಲೇ ಐಪಿಎಲ್ ನಡೆಯುವ ಸಾಧ್ಯತೆ ಹೆಚ್ಚಾಗಲಿದೆ. ಈ ಹಿಂದೆಯೂ ಎರಡು ಸೀಸನ್‌ಗಳು ವಿದೇಶದಲ್ಲಿ ನಡೆದಿದ್ದವು. 2009ರ ಐಪಿಎಲ್ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದರೆ, 2014ರ ಸೀಸನ್‌ನ ಒಂದಿಷ್ಟು ಪಂದ್ಯಗಳು ಯುಎಇಯಲ್ಲಿ ನಡೆದಿತ್ತು.

ಎಲ್ಲಿ ನಡೆಯೋ ಸಾಧ್ಯತೆ ಹೆಚ್ಚು?

ಎಲ್ಲಿ ನಡೆಯೋ ಸಾಧ್ಯತೆ ಹೆಚ್ಚು?

ಐಪಿಎಲ್ ಆತಿಥ್ಯದ ಆಫರ್ ನೀಡಿರುವ ದೇಶಗಳಲ್ಲಿ ಯುಎಇ ಮುಂಚೂಣಿಯಲ್ಲಿದೆ. ಈ ಹಿಂದೆ ಯಶಸ್ವಿಯಾಗಿ ಟೂರ್ನಿ ಆಯೋಜಿಸಿದ ಹಿರಿಮೆಯೂ ಯುಎಇಗಿದೆ. ಶ್ರೀಲಂಕಾ ದೇಶದಲ್ಲಿ ನಡೆದರೆ ನೆರೆಯ ದೇಶವಾದ್ದರಿಂದ ಖರ್ಚು ಉಳಿತಾಯದ ದೃಷ್ಟಿಯಲ್ಲಿ ಅನುಕೂಲವಾಗಲಿದೆ. ಇನ್ನು ನ್ಯೂಜಿಲೆಂಡ್‌ನಲ್ಲಿ ಕೊರೊನಾ ಪ್ರಕರಣಗಳು ತೀರಾ ಕಮ್ಮಿಯಿರುವುದರಿಂದ ಆ ಭೀತಿ ಕಡಿಮೆ. ಹೀಗಾಗಿ ವಿದೇಶದಲ್ಲಿ ಐಪಿಎಲ್ ನಡೆಯುವುದಾದರೆ ಮೂರು ತಾಣಗಳಲ್ಲಿ ಎಲ್ಲಾದರೂ ನಡೆಯಬಹುದು. ಇಲ್ಲೇ ನಡೆಯಬಹುದು ಎಂದು ಈಗಲೇ ಹೇಳುವಂತಿಲ್ಲ.

Story first published: Tuesday, July 7, 2020, 10:09 [IST]
Other articles published on Jul 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X