ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಸ್ಟ್ ಇಂಡೀಸ್ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ: ತಂಡಕ್ಕೆ ಮರಳಿದ ಪ್ರಮುಖ ಆಟಗಾರರು

New Zealand announce squad for ODI and T20 series against West Indies

ಭಾರತ ವಿರುದ್ಧದ ವೈಟ್‌ಬಾಲ್ ಸರಣಿಯ ಮುಕ್ತಾಯದ ಬಳಿಕ ವೆಸ್ಟ್ ಇಂಡೀಸ್ ತಂಡ ನ್ಯೂಜಿಲೆಂಡ್ ವಿರುದ್ಧ ವೈಟ್‌ಬಾಲ್ ಸರಣಿಯಲ್ಲಿ ಮುಖಾಮುಖಿಯಾಗಲಿದೆ. ಈ ಸರಣಿಗೆ ನ್ಯೂಜಿಲೆಂಡ್ ತಂಡ ಕೆರಿಬಿಯನ್ ನಾಡಿಗೆ ಪ್ರವಾಸಕೈಗೊಳ್ಳಲಿದ್ದು ಇಂದು ಈ ಸರಣಿಯಲ್ಲಿ ಭಾಗಿಯಾಗಲಿರುವ ಆಟಗಾರರ ಬಳಗವನ್ನು ಘೋಷಣೆ ಮಾಡಲಾಗಿದೆ. ಈ ಸರಣಿಗೆ ಕೆಲ ಅನುಭವಿ ಆಟಗಾರರ ಜೊತೆಗೆ ನಾಯಕ ಕೇನ್ ವಿಲಿಯಮ್ಸನ್ ಕೂಡ ವಾಪಾಸಾಗಿದ್ದಾರೆ.

2014ರ ಬಳಿಕ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ ತಂಡ ದ್ವಿಪಕ್ಷೀಯ ಸರಣಿಯಲ್ಲಿ ಭಾಗಿಯಾಗುವ ಸಲುವಾಗಿ ಇದೇ ಮೊದಲ ಬಾರಿಗೆ ಕೆರಿಬಿಯನ್ ನಾಡಿಗೆ ಪ್ರವಾಸ ಕೈಗೊಳ್ಳುತ್ತಿದೆ. ಇನ್ನು ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ತಂಡದ ಭಾಗವಾಗಿದ್ದ ಕೇನ್ ವಿಲಿಯಮ್ಸನ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್ ಮತ್ತು ಡೆವೊನ್ ಕಾನ್ವೆ ಒಳಗೊಂಡ ಬಳಗ ಕಳೆದ ಟಿ20 ವಿಶ್ವಕಪ್‌ನ ಬಳಿಕ ಭಾರತ ಪ್ರವಾಸದ ನಂತರ ಮೊದಲ ಬಾರಿಗೆ ವೈಟ್ ಬಾಲ್ ಸೆಟ್-ಅಪ್‌ಗೆ ಮರಳುತ್ತಿದೆ.

IND vs WI: 5 ಸಿಕ್ಸ್, ಅಜೇಯ 64 ರನ್ ಚಚ್ಚಿದ ಅಕ್ಷರ್; 2ನೇ ಏಕದಿನ ಗೆದ್ದು ಸರಣಿ ವಶಪಡಿಸಿಕೊಂಡ ಭಾರತIND vs WI: 5 ಸಿಕ್ಸ್, ಅಜೇಯ 64 ರನ್ ಚಚ್ಚಿದ ಅಕ್ಷರ್; 2ನೇ ಏಕದಿನ ಗೆದ್ದು ಸರಣಿ ವಶಪಡಿಸಿಕೊಂಡ ಭಾರತ

ಇನ್ನು ಈ ಪ್ರವಾಸದಲ್ಲಿ ನ್ಯೂಜಿಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಟಿ20 ಹಾಗೂ ಏಕದಿನ ಪಂದ್ಯಗಳ ಸರಣಿಯಲ್ಲಿ ಆಡಲಿದೆ. ಮೊದಲಿಗೆ ಮೂರು ಪಂದ್ಯಗಳ ಟಿ20 ಸರಣಿ ಆಯೋಜನೆಯಾಗಲಿದೆ. ಚುಟಕು ಸರಣಿಯ ಮೂರು ಪಂದ್ಯಗಳು ಕೂಡ ಜಮೈಕಾದ ಕಿಂಗ್ಸ್‌ಸ್ಟನ್‌ನಲ್ಲಿರುವ ಸಬೀನಾ ಪಾರ್ಕ್‌ನಲ್ಲಿ ನಡೆಯಲಿದೆ. ಬಳಿಕ ಏಕದಿನ ಸರಣಿ ಆಯೋಜನೆಯಾಗಲಿದ್ದು ಆಗಸ್ಟ್ 17, 19 ಹಾಗೂ 21ರಂದು ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನ ಕೆನ್ಸಿಂಗ್ಟನ್‌ನಲ್ಲಿ ಆಯೋಜನೆಯಾಗಲಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಐರ್ಲೆಂಡ್ ವಿರುದ್ಧದ ವೈಟ್ ಬಾಲ್ ಸರಣಿಯಲ್ಲಿ ಕಿವೀಸ್ ತಂಡ ಕಣಕ್ಕಿಳಿದಿತ್ತು. ಪ್ರಮುಖ ಅನುಭವಿ ಆಟಗಾರರಿಲ್ಲದೆ ಏಕದಿನ ಮತ್ತು ಟಿ20 ಸರಣಿಯಲ್ಲಿ ಆತಿಥೇಯ ತಂಡವನ್ನು ಕ್ಲೀನ್ ಸ್ವೀಪ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಐರ್ಲೆಂಡ್ ಪ್ರವಾಸದಲ್ಲಿ ವೈಟ್-ಬಾಲ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಅದ್ಭುತ ಆರಂಭ ಪಡೆದ ಮೈಕೆಲ್ ಬ್ರೇಸ್‌ವೆಲ್ ಅವರನ್ನು ವೆಸ್ಟ್ ಇಂಡೀಸ್ ಪ್ರವಾಸದ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.

ಅತಿ ಹೆಚ್ಚು ಬಾರಿ 90+ ರನ್ ಕಲೆಹಾಕಿ ಶತಕ ಕೈತಪ್ಪಿಸಿಕೊಂಡಿರುವ ಭಾರತೀಯ ಕ್ರಿಕೆಟಿಗರ ಪಟ್ಟಿಅತಿ ಹೆಚ್ಚು ಬಾರಿ 90+ ರನ್ ಕಲೆಹಾಕಿ ಶತಕ ಕೈತಪ್ಪಿಸಿಕೊಂಡಿರುವ ಭಾರತೀಯ ಕ್ರಿಕೆಟಿಗರ ಪಟ್ಟಿ

ನ್ಯೂಜಿಲೆಂಡ್ ಏಕದಿನ ಹಾಗೂ ಟಿ20 ಸರಣಿಯ ಸ್ಕ್ವಾಡ್: ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಟ್ರೆಂಟ್ ಬೌಲ್ಟ್, ಮೈಕೆಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ಮಿಶ್ಲ್ ಸಿಲಿಪ್ಸ್, ಮಿಶ್ಲ್ ಸಿಲಿಪ್ಸ್ ಸೋಧಿ ಮತ್ತು ಟಿಮ್ ಸೌಥಿ

Story first published: Monday, July 25, 2022, 18:11 [IST]
Other articles published on Jul 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X