ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup 2022: 90ರ ದಶಕದ ಮಾದರಿಯ ಜೆರ್ಸಿ ಅನಾವರಣ ಮಾಡಿದ ನ್ಯೂಜಿಲೆಂಡ್ ತಂಡ

New Zealand Back To Retro Look Jersey For Upcoming T20 World Cup 2022

ಅಕ್ಟೋಬರ್-ನವೆಂಬರ್ ನಡುವೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ನ್ಯೂಜಿಲೆಂಡ್ ತಂಡ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ (NZC) ಹೊಸ ಜೆರ್ಸಿಯನ್ನು ಧರಿಸಿದ ತಂಡದ ಆಟಗಾರರ ಫೋಟೋಗಳನ್ನು ಬಿಡುಗಡೆ ಮಾಡಿದೆ.

ಡೆವೊನ್ ಕಾನ್ವೇ, ಡೇರಿಲ್ ಮಿಚೆಲ್, ಮಾರ್ಟಿನ್ ಗಪ್ಟಿಲ್, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್ ಮುಂತಾದ ಪ್ರಮುಖ ನ್ಯೂಜಿಲೆಂಡ್ ಆಟಗಾರರು ಹೊಸ ಜೆರ್ಸಿಯಲ್ಲಿ ಮಿಂಚಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ನಮ್ಮ ನೂತನ ಜೆರ್ಸಿ ಇಲ್ಲಿದೆ ಎಂದು ಅದು ಪೋಸ್ಟ್ ಮಾಡಿದೆ.

IND vs SA 2022: ರಾಹುಲ್ ಜವಾಬ್ದಾರಿಯಿಂದ ಬ್ಯಾಟಿಂಗ್ ಮಾಡಿದ್ದಾರೆ, ಸುಮ್ಮನೆ ಟೀಕಿಸಬೇಡಿ ಎಂದ ಆಕಾಶ್ ಚೋಪ್ರಾIND vs SA 2022: ರಾಹುಲ್ ಜವಾಬ್ದಾರಿಯಿಂದ ಬ್ಯಾಟಿಂಗ್ ಮಾಡಿದ್ದಾರೆ, ಸುಮ್ಮನೆ ಟೀಕಿಸಬೇಡಿ ಎಂದ ಆಕಾಶ್ ಚೋಪ್ರಾ

ಶರ್ಟ್ ವಿನ್ಯಾಸವು ರೆಟ್ರೊ ನೋಟವನ್ನು ಹೊಂದಿದೆ ಮತ್ತು 90 ರ ದಶಕದ ಆರಂಭದಲ್ಲಿ ಬದಿಯಲ್ಲಿ ಧರಿಸಿರುವ ಶರ್ಟ್‌ಗಳ ಸಂಯೋಜನೆಯಾಗಿದೆ. ಇದು ಕಿವೀಸ್‌ನ ಕಪ್ಪು ಬಣ್ಣಗಳನ್ನು ಹೆರಿಟೇಜ್ ಗ್ರೇ ಜೊತೆಗೆ ಸಂಯೋಜಿಸುವ ಹೊಚ್ಚ ಹೊಸ ವಿನ್ಯಾಸವನ್ನು ಹೊಂದಿದೆ. 1990 ರ ದಶಕದಲ್ಲಿ ನ್ಯೂಜಿಲೆಂಡ್‌ ಜೆರ್ಸಿಗಳಲ್ಲಿ ಬೂದು ಬಣ್ಣ (Gray) ಪ್ರಮುಖವಾದ ಬಣ್ಣವಾಗಿತ್ತು. ಶರ್ಟ್ ಒಂದು ಪ್ರಮುಖ ಗ್ರಾಫಿಕ್ ಆಗಿ ಜರೀಗಿಡದಿಂದ ದೂರ ಹೋಗುತ್ತದೆ, ಬದಲಿಗೆ ಸದರ್ನ್ ಕ್ರಾಸ್ ಅನ್ನು ನ್ಯೂಜಿಲೆಂಡ್‌ಗೆ ಒಪ್ಪಿಗೆಯಾಗಿ ಬಳಸಲಾಗುತ್ತದೆ.

New Zealand Back To Retro Look Jersey For Upcoming T20 World Cup 2022

ಕಳೆದ ಟಿ20 ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗಿದ್ದ ನ್ಯೂಜಿಲೆಂಡ್

ಸೆಪ್ಟೆಂಬರ್ 20 ರಂದು, ನ್ಯೂಜಿಲೆಂಡ್ ಮುಂಬರುವ ಐಸಿಸಿ ಟಿ20 ವಿಶ್ವಕಪ್ 2022 ಗಾಗಿ ತಮ್ಮ ತಂಡವನ್ನು ಘೋಷಿಸಿತು ಮತ್ತು ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ ದಾಖಲೆಯ ಏಳನೇ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಆಡಲಿದ್ದಾರೆ.

ನ್ಯೂಜಿಲೆಂಡ್ ತಮ್ಮ ಟಿ20 ವಿಶ್ವಕಪ್ ಅಭಿಯಾನವನ್ನು ಅಕ್ಟೋಬರ್ 22 ರಂದು, ಶನಿವಾರ ಆಸ್ಟ್ರೇಲಿಯ ವಿರುದ್ಧ ಎಸ್‌ಸಿಜಿ (SCG) ಕ್ರೀಡಾಂಗಣದಲ್ಲಿ ಆಡಲಿದೆ. ನಂತರ ಎಂಸಿಜಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ಮತ್ತು ಗಬ್ಬಾದಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಿದ್ದಾರೆ.

2021ರ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಫೈನಲ್ ತಲುಪಿಯತ್ತು. ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುವ ಮೂಲಕ ನಿರಾಸೆ ಅನುಭವಿಸಿದ್ದ ನ್ಯೂಜಿಲೆಂಡ್ ಈ ಬಾರಿ ವಿಶ್ವಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿದೆ.

ಟಿ20 ವಿಶ್ವಕಪ್‌ಗಾಗಿ ನ್ಯೂಜಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಟ್ರೆಂಟ್ ಬೌಲ್ಟ್, ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಮಾರ್ಟಿನ್ ಗಪ್ಟಿಲ್, ಆಡಮ್ ಮಿಲ್ನೆ, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್ , ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ.

Story first published: Thursday, September 29, 2022, 16:24 [IST]
Other articles published on Sep 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X