ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೌರವ್ ಗಂಗೂಲಿ ಹೆಸರಿನಲ್ಲಿದ್ದ 25 ವರ್ಷಗಳ ದಾಖಲೆ ಮುರಿದ ಡೆವೊನ್ ಕಾನ್ವೇ!

New Zealand batsman Devon Conway breaks Sourav Gangulys 25-year-old record on debut

ಲಂಡನ್: ನ್ಯೂಜಿಲೆಂಡ್ ಆರಂಭಿಕ ಬ್ಯಾಟ್ಸ್‌ಮನ್‌ ಡೆವೊನ್ ಕಾನ್ವೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ಆಡಿದ ಪಾದಾರ್ಪಣೆ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿದ 6ನೇ ಬ್ಯಾಟ್ಸ್‌ಮನ್‌ ಆಗಿ ಕ್ವಾನ್ವೇ ದಾಖಲೆ ಪಟ್ಟಿ ಸೇರಿದಿದ್ದಾರೆ. ಅಷ್ಟೇ ಅಲ್ಲ, ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಹೆಸರಿನಲ್ಲಿದ್ದ ಸುದೀರ್ಘ ಕಾಲದ ದಾಖಲೆಯನ್ನೂ ಕ್ವಾನ್ವೇ ಸರಿಗಟ್ಟಿದ್ದಾರೆ.

 ಐಪಿಎಲ್ 2022ರ ಹರಾಜಿನಲ್ಲಿ ಆರ್‌ಸಿಬಿ ಉಳಿಸಿಕೊಳ್ಳಬಹುದಾದ ಆಟಗಾರರು ಐಪಿಎಲ್ 2022ರ ಹರಾಜಿನಲ್ಲಿ ಆರ್‌ಸಿಬಿ ಉಳಿಸಿಕೊಳ್ಳಬಹುದಾದ ಆಟಗಾರರು

ಲಂಡನ್‌ನ ಲಾರ್ಡ್ಸ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್-ನ್ಯೂಜಿಲೆಂಡ್ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಕಾನ್ವೇ ಈ ಸಾಧನೆ ಮಾಡಿದ್ದಾರೆ. ಮೊದಲ ಟೆಸ್ಟ್‌ನ ಆರಂಭಿಕ ಇನ್ನಿಂಗ್ಸ್‌ನಲ್ಲಿ ಬುಧವಾರ ಮೊದಲನೇ ದಿನದಾಟದ ಅಂತ್ಯಕ್ಕೆ ಕಾನ್ವೇ ಅಜೇಯ 136 ರನ್ ಗಳಿಸಿದ್ದರು.

ನ್ಯೂಜಿಲೆಂಡ್ vs ಇಂಗ್ಲೆಂಡ್, 1ನೇ ಟೆಸ್ಟ್‌ ಪಂದ್ಯ, Live ಸ್ಕೋರ್‌

1
50239
ಚೊಚ್ಚಲ ಟೆಸ್ಟ್‌ನಲ್ಲಿ ದಾಖಲೆ

ಚೊಚ್ಚಲ ಟೆಸ್ಟ್‌ನಲ್ಲಿ ದಾಖಲೆ

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನೊಂದಿಗೆ ಚೊಚ್ಚಲ ಟೆಸ್ಟ್ ಪಂದ್ಯ ಆಡುತ್ತಿರುವ 29ರ ಹರೆಯದ ಡೆವೊನ್ ಕಾನ್ವೇ 86 ಓವರ್‌ ಮುಕ್ತಾಯದ ವೇಳೆಗೆ 240 ಎಸೆತಗಳಲ್ಲಿ 136 ರನ್ ಬಾರಿಸಿ ಆಡುತ್ತಿದ್ದರು. ಇದರಲ್ಲಿ 16 ಫೋರ್‌ಗಳು ಸೇರಿದ್ದವು. ಈ ಬ್ಯಾಟಿಂಗ್‌ನೊಂದಿಗೆ ಕಾನ್ವೇ ಲಾರ್ಡ್ಸ್‌ನಲ್ಲಿ ಚೊಚ್ಚಲ ಟೆಸ್ಟ್‌ ಪಂದ್ಯದಲ್ಲೇ ಶತಕ ಬಾರಿಸಿದ 6ನೇ ಬ್ಯಾಟ್ಸ್‌ಮನ್‌ ಆಗಿ ಮತ್ತು ಲಾರ್ಡ್ಸ್‌ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

ಗಂಗೂಲಿ ದಾಖಲೆ ಪತನ

ಗಂಗೂಲಿ ದಾಖಲೆ ಪತನ

ಎಡಗೈ ಬ್ಯಾಟ್ಸ್‌ಮನ್‌ ಆಗಿರುವ ಡೆವೊನ್ ಕಾನ್ವೆ, ಎಡಗೈ ಬ್ಯಾಟ್ಸ್‌ಮನ್‌ ಸೌರವ್ ಗಂಗೂಲಿ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. 1996ರಲ್ಲಿ ಲಾರ್ಡ್ಸ್‌ನಲ್ಲಿ ನಡೆದಿದ್ದ ಪಂದ್ಯದ ಮೂಲಕ ಪಾದಾರ್ಪಣೆ ಮಾಡಿದ್ದ ಗಂಗೂಲಿ 131 ರನ್ ಗಳಿಸಿದ್ದರು. ಇದು ಲಾರ್ಡ್ಸ್‌ನಲ್ಲಿ ಚೊಚ್ಚಲ ಟೆಸ್ಟ್‌ ಪಂದ್ಯದಲ್ಲಿ ದಾಖಲಾಗಿದ್ದ ಅತೀ ಹೆಚ್ಚಿನ ರನ್‌ ಆಗಿ 25 ವರ್ಷಗಳವರೆಗೆ ದಾಖಲೆ ಉಳಿಸಿಕೊಂಡಿತ್ತು. ಆದರೆ ಕಾನ್ವೇ ಈಗ ಅಜೇಯ 136 ರನ್ ಬಾರಿಸಿರುವುದರಿಂದ ಸೌರವ್ ದಾಖಲೆ ಬದಿಗೆ ಸರಿದಿದೆ.

ಇನ್ನೊಂದು ಅಚ್ಚರಿಯ ಸಂಗತಿ!

ಇನ್ನೊಂದು ಅಚ್ಚರಿಯ ಸಂಗತಿ!

ಟೆಸ್ಟ್‌ನಲ್ಲಿ ಸೌರವ್ ಗಂಗೂಲಿ ಹೆಸರಿನಲ್ಲಿದ್ದ ದಾಖಲೆಯನ್ನು ಡಿವೊನ್ ಕಾನ್ವೇ ಮುರಿದಿದ್ದಾರೆ. ಇಬ್ಬರೂ ಎಡಗೈ ಬ್ಯಾಟ್ಸ್‌ಮನ್‌ಗಳು. ಅಷ್ಟೇ ಅಲ್ಲ, ಇಬ್ಬರ ಜನ್ಮ ದಿನಾಂಕವೂ ಜುಲೈ 8. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ನ್ಯೂಜಿಲೆಂಡ್ ತಂಡ 86 ಓವರ್‌ ಮುಕ್ತಾಯಕ್ಕೆ 3 ವಿಕೆಟ್‌ ಕಳೆದು 246 ರನ್ ಬಾರಿಸಿತ್ತು. ಜೂನ್ 2ರ ದಿನದಾಟದ ಅಂತ್ಯಕ್ಕೆ ಕಾನ್ವೆ 136, ಹೆನ್ರಿ ನಿಕೋಲ್ಸ್ 46 ರನ್ ಬಾರಿಸಿ ಆಡುತ್ತಿದ್ದರು.

Story first published: Thursday, June 3, 2021, 12:31 [IST]
Other articles published on Jun 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X