ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾ ವಿರುದ್ಧ ಸೇಡು ತೀರಿಸಿಕೊಂಡ ನ್ಯೂಜಿಲೆಂಡ್: ಇನ್ನಿಂಗ್ಸ್ ಸೇರಿದಂತೆ 117ರನ್‌ಗಳ ಬೃಹತ್ ಗೆಲುವು

Newzealand won

ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಇನ್ನಿಂಗ್ಸ್ ಸೇರಿದಂತೆ 117ರನ್‌ಗಳ ಬೃಹತ್ ಜಯ ಸಾಧಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದ ಕಿವೀಸ್, ಸರಣಿ ಸೋಲಿನ ಮುಖಭಂಗ ತಪ್ಪಿಸಿಕೊಂಡಿದೆ.

ನ್ಯೂಜಿಲೆಂಡ್‌ ನೀಡಿದ 521ರನ್‌ಗ ಬೃಹತ್ ಗುರಿ ಬೆನ್ನತ್ತಿದ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 126 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಫಾಲೋ ಆನ್‌ಗೆ ಸಿಲುಕಿತು. ಕಿವೀಸ್ ಪರ ಟ್ರೆಂಟ್ ಬೌಲ್ಟ್ 5 ವಿಕೆಟ್ ಉರುಳಿಸಿದ್ರೆ, ಸೌಥಿ 3 ಹಾಗೂ ಕೈಲ್ ಜೇಮಿಸನ್ 2 ವಿಕೆಟ್ ಕಬಳಿಸಿದ್ದರು.

ಭಾರತ vs ದ. ಆಫ್ರಿಕಾ 3ನೇ ಟೆಸ್ಟ್: ವಿರಾಟ್ ಕೊಹ್ಲಿ ಬಗ್ಗೆ ಭವಿಷ್ಯ ನುಡಿದ ಹರ್ಭಜನ್ ಸಿಂಗ್ಭಾರತ vs ದ. ಆಫ್ರಿಕಾ 3ನೇ ಟೆಸ್ಟ್: ವಿರಾಟ್ ಕೊಹ್ಲಿ ಬಗ್ಗೆ ಭವಿಷ್ಯ ನುಡಿದ ಹರ್ಭಜನ್ ಸಿಂಗ್

ಫಾಲೋ ಆನ್ ಪರಿಣಾಮ ಬಾಂಗ್ಲಾದೇಶ ಮತ್ತೆ ಬ್ಯಾಟಿಂಗ್‌ಗೆ ಇಳಿಯಿತು. ಆದ್ರೆ ಲಿಟ್ಟನ್ ದಾಸ್ ಶತಕದ ಹೊರತಾಗಿ ಇನ್ಯಾವುದೇ ಬ್ಯಾಟ್ಸ್‌ಮನ್ ತಂಡಕ್ಕೆ ನೆರವಾಗದೆ ಮತ್ತೊಮ್ಮೆ ವೈಫಲ್ಯ ಅನುಭವಿಸಿದ್ರು. ಶಾದ್ಮನ್ ಇಸ್ಲಾಮ್ 21, ಮೊಹಮ್ಮದ್ ನಾಸಿಂ 24, ನಜ್ಮುಲ್ ಹುಸೇನ್ 29, ಮೊಮಿನುಲ್ ಹಕ್ವಿ 37, ಲಿಟ್ಟನ್ ದಾಸ್ 117, ಯಾಸಿರ್ ಅಲಿ 2, ನುರುಲ್ ಹಸನ್ 36, ಮೆಹದಿ ಹಸನ್ 3, ಟಸ್ಕಿನ್ ಅಹ್ಮದ್ 9, ಎಬಾಡೊಟ್ ಹುಸೇನ್ 4 ರನ್‌ಗಳಿಸಿ ಔಟಾದ್ರು.

ಮೊದಲ ಇನ್ನಿಂಗ್ಸ್‌ನಲ್ಲಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದರ ಪರಿಣಾಮವಾಗಿ ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್‌ನಲ್ಲಿ 278 ರನ್‌ಗಳಿಗೆ ಆಲೌಟ್ ಆಗಿದೆ. ಪರಿಣಾಮ ಪಂದ್ಯ ಮೂರೇ ದಿನಕ್ಕೆ ಮುಕ್ತಾಯಗೊಂಡಿದ್ದು, ನ್ಯೂಜಿಲೆಂಡ್ ಇನ್ನಿಂಗ್ಸ್ ಸೇರಿದಂತೆ 117ರನ್‌ಗಳ ಗೆಲುವು ಸಾಧಿಸಿತು. ನ್ಯೂಜಿಲೆಂಡ್ ಪರ ಕೈಲ್ ಜೇಮಿಸನ್ 4, ನೀಲ್ ವ್ಯಾಗ್ನರ್ 3 ವಿಕೆಟ್‌ಗಳಿಸುವ ಮೂಲಕ ಯಶಸ್ವಿ ಬೌಲರ್ ಎನಿಸಿಕೊಂಡ್ರು.

ಮೌಂಟ್ ಮೌಂಗನ್ಯುಯಿನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶ ಐತಿಹಾಸಿಕ ಗೆಲುವನ್ನ ಸಾಧಿಸಿತ್ತು. ಹೀಗಾಗಿ ಎರಡನೇ ಟೆಸ್ಟ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಕಿವೀಸ್, ಟಾಸ್ ಸೋತರು ಮೊದಲು ಬ್ಯಾಟಿಂಗ್ ಅವಕಾಶದ ಮೂಲಕ 6 ವಿಕೆಟ್ ನಷ್ಟಕ್ಕೆ 521 ರನ್ ಕಲೆಹಾಕಿ ಡಿಕ್ಲೇರ್ ಮಾಡಿಕೊಂಡಿತು.

ನ್ಯೂಜಿಲೆಂಡ್ ಪರ ಭರ್ಜರಿ ಆಟವಾಡಿದ ಸ್ಟಾಂಡ್ ಇನ್ ಕ್ಯಾಪ್ಟನ್ ಟಾಮ್ ಲಥಾಮ್ ದ್ವಿಶತದ ಆಟವಾಡುವ ಮೂಲಕ ತಂಡಕ್ಕೆ ನೆರವಾದರು. 373 ಎಸೆತಗಳಲ್ಲಿ 252 ರನ್ ಕಲೆಹಾಕಿದ ಲಥಾಮ್ ಇನ್ನಿಂಗ್ಸ್‌ನಲ್ಲಿ 34 ಬೌಂಡರಿ ಮತ್ತು 2 ಸಿಕ್ಸರ್‌ಗಳಿದ್ದವು. ಲಥಾಮ್‌ಗೆ ಸಾಥ್ ನೀಡಿದ ಡಿವೊನ್ ಕಾನ್ವೆ 166 ಎಸೆತಗಳಲ್ಲಿ 109 ರನ್ ಕಲೆಹಾಕುವ ಮೂಲಕ ಲಥಾಮ್‌ಗೆ ಉತ್ತಮ ಸಾಥ್ ನೀಡಿದ್ರು.

ಪಂದ್ಯದಲ್ಲಿ ದ್ವಿಶತಕ ಸಿಡಿಸಿ ನ್ಯೂಜಿಲೆಂಡ್ ಬೃಹತ್ ಮೊತ್ತಕ್ಕೆ ಕಾರಣನಾದ ಟಾಮ್ ಲಥಾಮ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.

ಕೊನೆಯ ಟೆಸ್ಟ್ ಪಂದ್ಯವನ್ನಾಡಿದ ರಾಸ್ ಟೇಲರ್
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ 37 ವರ್ಷದ ಕಿವೀಸ್ ಬ್ಯಾಟ್ಸ್‌ಮನ್ ರಾಸ್‌ ಟೇಲರ್ ತನ್ನ ಕೊನೆಯ ಇನ್ನಿಂಗ್ಸ್‌ನಲ್ಲಿ 39 ಎಸೆತಗಳಲ್ಲಿ 28 ರನ್ ಕಲೆಹಾಕುವ ಮೂಲಕ ವಿಕೆಟ್ ಒಪ್ಪಿಸಿದ್ರು. ಅಂತಿಮವಾಗಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 112 ಪಂದ್ಯಗಳಲ್ಲಿ 44.16 ಸರಾಸರಿಯಲ್ಲಿ ಟೇಲರ್ 7684 ರನ್ ಕಲೆಹಾಕಿದ್ದಾರೆ. 19 ಶತಕ, 3 ದ್ವಿಶತಕ ಮತ್ತು 35 ಅರ್ಧಶತಕಗಳು ಒಳಗೊಂಡಿವೆ.

ಇದೇ ವರ್ಷ ಬಾಂಗ್ಲಾದೇಶ ವಿರುದ್ಧವೇ ತನ್ನ ಕೊನೆಯ ಏಕದಿನ ಪಂದ್ಯವನ್ನಾಡಿದ್ದ ರಾಸ್ ಟೇಲರ್ 233 ಏಕದಿನ ಪಂದ್ಯಗಳಲ್ಲಿ 48.18ರ ಬ್ಯಾಟಿಂಗ್ ಸರಾಸರಿಯಲ್ಲಿ 8576 ರನ್ ಕಲೆಹಾಕಿದ್ದಾರೆ. 21 ಶತಕ, 51 ಅರ್ಧಶತಕ ಸೇರಿದಂತೆ 146 ಸಿಕ್ಸರ್‌ಗಳು ಸೇರಿವೆ.

Pant out of 3rd Test? ಕುತೂಹಲ ಮೂಡಿಸಿದ ಸಾಹ ಟ್ವಿಟ್ಟರ್ ಪೋಸ್ಟ್:ಇವತ್ತು ಯಾರು ಇನ್ ಯಾರು ಔಟ್?|Oneindia Kannada

ಇನ್ನು ಟಿ20 ಕ್ರಿಕೆಟ್‌ನಲ್ಲೂ ಟೇಲರ್ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದು, 102 ಪಂದ್ಯಗಳಲ್ಲಿ 122.37 ಸ್ಟ್ರೈಕ್‌ರೇಟ್‌ನಿಂದ 1909 ರನ್ ಕಲೆಹಾಕಿದ್ದಾರೆ. ಏಳು ಬಾರಿ ಅರ್ಧಶತಕ ಗಡಿದಾಟಿದ್ದು, 71 ಸಿಕ್ಸರ್ ಸಿಡಿಸಿದ್ದಾರೆ.

Story first published: Tuesday, January 11, 2022, 12:46 [IST]
Other articles published on Jan 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X