ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ ವಿರುದ್ಧದ ಸರಣಿಯಿಂದ ಕೇನ್ ವಿಲಿಯಮ್ಸನ್ ಹೊರಕ್ಕೆ

New Zealand captain Kane Williamson out of Bangladesh series

ವೆಲ್ಲಿಂಗ್ಟನ್: ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯನ್ನು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮಿಸ್ ಮಾಡಿಕೊಳ್ಳಲಿದ್ದಾರೆ. ಮೊಣಕೈ ಗಾಯಕ್ಕೀಡಾಗಿರುವ ವಿಲಿಯಮ್ಸನ್, ಬಾಂಗ್ಲಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡುತ್ತಿಲ್ಲ. ನ್ಯೂಜಿಲೆಂಡ್ ಕ್ರಿಕೆಟ್ (ಎನ್‌ಝಡ್‌ಸಿ) ಈ ವಿಚಾರವನ್ನು ಮಂಗಳವಾರ (ಮಾರ್ಚ್ 9) ತಿಳಿಸಿದೆ.

ವಿಜಯ್ ಹಜಾರೆ: ಪಡಿಕ್ಕಲ್ ಬ್ಯಾಟಿಂಗ್ ಅಬ್ಬರ, ಮತ್ತೊಂದು ದಾಖಲೆ!ವಿಜಯ್ ಹಜಾರೆ: ಪಡಿಕ್ಕಲ್ ಬ್ಯಾಟಿಂಗ್ ಅಬ್ಬರ, ಮತ್ತೊಂದು ದಾಖಲೆ!

ಭಾನುವಾರವಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು 3-2ರಿಂದ ಗೆಲ್ಲಿಸಿದ್ದ ನಾಯಕ ಕೇನ್ ವಿಲಿಯಮ್ಸನ್ ಅವರ ಎಡ ಮೊಣಕೈ ಹತ್ತಿರ ಸ್ವಲ್ಪ ನೋವಿನ ಸಮಸ್ಯೆಯಿದೆ. ಇದರಿಂದ ಕಿರಿಕಿರಿಯ ಅನುಭವವಾಗುತ್ತಿದೆ ಎಂದು ಕೇನ್ ಹೇಳಿರುವುದಾಗಿ ನ್ಯೂಜಿಲೆಂಡ್ ಮಾಹಿತಿ ನೀಡಿದೆ.

'ಈ ಬೇಸಿಗೆಯಲ್ಲಿ ಕೇನ್‌ ಮೊಣಕೈಗೆ ಹಲವಾರ ಸಾರಿ ಗಾಯವಾಗಿತ್ತು. ಆದರೆ ಅವೆಲ್ಲವನ್ನು ವಿವಿಧ ಹಂತಗಳಲ್ಲಿ ವಿಲಿಯಮ್ಸನ್ ನಿರ್ವಹಿಸುತ್ತಿದ್ದಾನೆ ಮತ್ತು ದುರದೃಷ್ಟವಶಾತ್ ಈ ಗಾಯದ ಸಮಸ್ಯೆ ಸುಧಾರಿಸಿಲ್ಲ,' ಎಂದು ನ್ಯೂಜಿಲೆಂಡ್ ಕ್ರಿಕೆಟ್‌ನ ವೈದ್ಯಕೀಯ ನಿರ್ವಾಹಕ ಡೇಲ್ ಶಕೆಲ್ ಹೇಳಿದ್ದಾರೆ. ಬಾಂಗ್ಲಾ-ಕಿವೀಸ್ ಏಕದಿನ ಸರಣಿ ಮಾರ್ಚ್ 20ರಿಂದ ಆರಂಭಗೊಳ್ಳಲಿದೆ.

WTC ಫೈನಲ್ ಬಳಿಕ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ನಲ್ಲಿ ಉಳಿಯಲಿದೆ ಟೀಮ್ ಇಂಡಿಯಾ: ವರದಿWTC ಫೈನಲ್ ಬಳಿಕ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ನಲ್ಲಿ ಉಳಿಯಲಿದೆ ಟೀಮ್ ಇಂಡಿಯಾ: ವರದಿ

ಮುಂಬರುವ ಏಪ್ರಿಲ್ 9ರಿಂದ ಐಪಿಎಲ್ 2021ರ ಸೀಸನ್ ಆರಂಭವಾಗಲಿದ್ದು, ಮಾಜಿ ಚಾಂಪಿಯನ್ಸ್ ಸನ್ ರೈಸರ್ಸ್ ಹೈದರಾಬಾದ್‌ನ ಮಾಜಿ ನಾಯಕರಾಗಿರುವ ವಿಲಿಯಮ್ಸನ್ ಪ್ರದರ್ಶನಕ್ಕೆ ಗಾಯದ ಸಮಸ್ಯೆ ಅಡ್ಡಿಯಾಗುವ ಸಾಧ್ಯತೆಯಿದೆಯಾ ಗೊತ್ತಿಲ್ಲ. ಅಂದ್ಹಾಗೆ, ಐಪಿಎಲ್ ಮುಗಿದ ಬಳಿಕ ಜೂನ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

Story first published: Tuesday, March 9, 2021, 18:55 [IST]
Other articles published on Mar 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X