ನ್ಯೂಜಿಲ್ಯಾಂಡ್ ವಿರುದ್ದ ಭಾರತಕ್ಕೆ ವೈಟ್ ವಾಶ್ ಮುಖಭಂಗ: ಮುಸಿಮುಸಿ ನಕ್ಕ ಪಾಕಿಸ್ತಾನ

ಟೀಂ ಇಂಡಿಯಾದ ಸೋಲನ್ನು ನೋಡಿ ಪಾಕಿಸ್ತಾನ ಮಾಡಿದ್ದೇನು ಗೊತ್ತಾ..? | Virat Kohli | Oneindia Kannada

ಮೂರು ಏಕದಿನ ಪಂದ್ಯದ, ಮೂರನೇ ಹಾಗೂ ಕೊನೆಯ ಪಂದ್ಯವನ್ನೂ ಭಾರತ ಸೋಲುವ ಮೂಲಕ, ನ್ಯೂಜಿಲ್ಯಾಂಡ್, ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಆ ಮೂಲಕ, ಟಿ20 ಸರಣಿಯಲ್ಲಾದ ಮುಖಭಂಗಕ್ಕೆ ಭರ್ಜರಿ ತಿರುಗೇಟು ನೀಡಿದೆ.

ಭಾರತ ಮತ್ತು ಕಿವೀಸ್ ನಡುವಿನ ಮೂರನೇ ಪಂದ್ಯ, ಭಾರತದ ಟ್ವಿಟ್ಟರ್ ಅಕೌಂಟ್ ನಲ್ಲಿ ನಂಬರ್ ಒನ್ ನಲ್ಲಿ ಟ್ರೆಂಡಿಂಗ್ ನಲ್ಲಿತ್ತೋ, ಅದೇರೀತಿ, ಪಾಕಿಸ್ತಾನದಲ್ಲೂ ನಂಬರ್ ಒನ್ ನಲ್ಲಿದ್ದದ್ದು ವಿಶೇಷ. ಭಾರತದ ಸೋಲಿಗೆ ತರಹೇವಾರಿ ಪ್ರತಿಕ್ರಿಯೆಗಳು ಅಲ್ಲಿನ ಅಕೌಂಟ್ ಗಳಿಂದ ಬಂದಿವೆ.

ಮುನ್ನೂರರ ಆಸುಪಾಸು ರನ್ ಹೊಡೆದರೂ, ಭಾರತದ ಬೌಲರ್ ಗಳಿಗೆ ಈ ದೊಡ್ದಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಪ್ರಮುಖವಾಗಿ, ಶಾರ್ದೂಲ್ ಠಾಕೂರ್ ಮತ್ತು ನವದೀಪ್ ಶೈನಿಯನ್ನು ಕಿವೀಸ್ ಬ್ಯಾಟ್ಸ್ ಮ್ಯಾನ್ ಗಳು ನಿರ್ದಾಕ್ಷಿಣ್ಯವಾಗಿ ದಂಡಿಸಿದರು.

ಭಾರತ vs ಕೀವಿಸ್: ಪಂದ್ಯದ ಮಧ್ಯೆ ರಾಹುಲ್ ಮತ್ತು ಮನೀಶ್ ಕನ್ನಡದಲ್ಲೇ ಮಾತುಭಾರತ vs ಕೀವಿಸ್: ಪಂದ್ಯದ ಮಧ್ಯೆ ರಾಹುಲ್ ಮತ್ತು ಮನೀಶ್ ಕನ್ನಡದಲ್ಲೇ ಮಾತು

ಪಂದ್ಯ ಗೆದ್ದ ಕೂಡಲೇ ಅಟ್ಟಕೇರಿಸುವುದು, ಸೋತ ಕೂಡಲೇ ಕೆಳಗಿಳಿಸುವುದು ಸಾಮಾಜಿಕ ತಾಣದಲ್ಲಿ ಸಾಮಾನ್ಯ. ಪಾಕಿಸ್ತಾನದ ಟ್ವಿಟ್ಟರ್ ಅಕೌಂಟ್ ಗಳಲ್ಲಿ ಭಾರತವನ್ನು ಲೇವಡಿ ಮಾಡುವ ಟ್ವೀಟ್ ಗಳನ್ನು ಅನಾಮತ್ತಾಗಿ ಮಾಡಲಾಗುತ್ತಿದೆ. ಕೆಲವೊಂದು ಸ್ಯಾಂಪಲ್:

ಸ್ವದೇಶದಲ್ಲಿ ಆಡಬೇಕಾದರೆ ಹೇಗಿರುತ್ತೆ, ವಿದೇಶದಲ್ಲಿ ಹೇಗೆ?

ಸ್ವದೇಶದಲ್ಲಿ ಆಡಬೇಕಾದರೆ ಹೇಗಿರುತ್ತೆ, ವಿದೇಶದಲ್ಲಿ ಹೇಗೆ?

ಭಾರತ ತಂಡ, ಸ್ವದೇಶದಲ್ಲಿ ಆಡಬೇಕಾದರೆ ಹೇಗಿರುತ್ತೆ, ವಿದೇಶದ ನೆಲದಲ್ಲಿ ಆಡಬೇಕಾದರೆ ಹೇಗಿರುತ್ತೆ ಎನ್ನುವ ಒಕ್ಕಣೆಯನ್ನು ಬರೆದು, ಅದಕ್ಕೆ ಎರಡು ಇಮೇಜ್ ಕೊಲೇಜ್ ಮಾಡಿ, ಅಣಕವಾಡಿರುವ ಪೋಸ್ಟ್. ಇದರ ಜೊತೆಗೆ, ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಂಡದಲ್ಲಿ ಇಲ್ಲದೇ ಇರುವುದನ್ನೂ, ಪ್ರಸ್ತಾವಿಸಲಾಗಿದೆ.

ಫೆಬ್ರವರಿ ತಿಂಗಳು ನಮ್ಮ ನೆರೆರಾಷ್ಟ್ರದವರಿಗೆ ಒಳ್ಳೆಯ ತಿಂಗಳಲ್ಲ

ಫೆಬ್ರವರಿ ತಿಂಗಳು ನಮ್ಮ ನೆರೆರಾಷ್ಟ್ರದವರಿಗೆ ಒಳ್ಳೆಯ ತಿಂಗಳಲ್ಲ

ರಾಜಾ ಅಬ್ಬಾಸ್ ಎನ್ನುವವ ಮಾಡಿರುವ ಟ್ವೀಟ್, ಫೆಬ್ರವರಿ ತಿಂಗಳು ನಮ್ಮ ನೆರೆರಾಷ್ಟ್ರದವರಿಗೆ ಒಳ್ಳೆಯ ತಿಂಗಳಲ್ಲ. ಉತ್ತಮ ಚಹಾ, ಅತ್ಯುತ್ತಮ ಫೈನಲ್ ಮತ್ತು ಅತ್ಯುತ್ತಮ ವೈಟ್ ವಾಶ್ ಎನ್ನುವ ಒಕ್ಕಣೆ ಬರೆಯಲಾಗಿದೆ. ಅದಕ್ಕೆ, ಭಾರತದ ಯೋಧ ಅಭಿನಂದನ್, ಬಾಂಗ್ಲಾ ದೇಶದ ವಿರುದ್ದ ಅಂಡರ್ 19 ವಿಶ್ವಕಪ್ ಫೈನಲ್ ಸೋಲು ಮತ್ತು ನ್ಯೂಜಿಲ್ಯಾಂಡ್ ವಿರುದ್ದದ ಕೊನೆಯ ಪಂದ್ಯದ ಇಮೇಜ್ ಕೊಲೇಜ್ ಮಾಡಿ ಹಾಕಲಾಗಿದೆ.

ಭಾರತ vs ನ್ಯೂಜಿಲೆಂಡ್ : ಮೂರನೇ ಪಂದ್ಯದಲ್ಲೂ ಭಾರತಕ್ಕೆ ಸೋಲೇ ಗತಿ

ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್

ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್

ಭಾರತ ಮತ್ತು ಫೆಬ್ರವರಿ ತಿಂಗಳ (ಫೆ 27) ಹೊಸ ಲವ್ ಸ್ಟೋರಿ ಎಂದು ಬರೆದು, ಅದಕ್ಕೆ ಮತ್ತದೇ ಫೋಟ್ ಹಾಕಿ ಟ್ವೀಟ್ ಮಾಡಲಾಗಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ, ಭಾರತ, ಪಾಕಿಸ್ತಾನದ ಉಗ್ರರ ಕ್ಯಾಂಪ್ ಮೇಲೆ ವೈಮಾನಿಕ ದಾಳಿ ನಡೆಸಿದಾಗ, ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್, ತಾವು ಚಲಾಯುಸುತ್ತಿದ್ದ ಮಿಗ್​ 21 ಯುದ್ಧ ವಿಮಾನದಿಂದ, ಪಾಕಿಸ್ತಾನದ ಎಫ್​ 16 ಜೆಟ್​ ವಿಮಾನವನ್ನು ಹೊಡೆದುರುಳಿಸಿ ಪಾಕಿಸ್ತಾನ ವಾಯುನೆಲೆಯೊಳಗೆ ಸೆರೆಯಾಗಿದ್ದರು.

ಮಲ್ಲಿಕ್ ಅನಾಸ್ ಎನ್ನುವಾತನ ಟ್ವೀಟ್

ಮಲ್ಲಿಕ್ ಅನಾಸ್ ಎನ್ನುವಾತನ ಟ್ವೀಟ್

ಮಲ್ಲಿಕ್ ಅನಾಸ್ ಎನ್ನುವಾತ ಟ್ವೀಟ್ ಮಾಡಿ, ನ್ಯೂಜಿಲ್ಯಾಂಡ್ ಭಾರತವನ್ನು ಸೋಲಿಸಿ, ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಇದೇ ಟಿಟ್ ಫಾರ್ ಟ್ಯಾಟ್. ಇದಲ್ಲದೇ, ಭಾರತದ ಬೌಲರ್ ಗಳಾದ ಶಾರ್ದೂಲ್ ಠಾಕೂರ್ ಮತ್ತು ಶೈನಿಯನ್ನು ಲೇವಡಿ ಮಾಡಲಾಗುತ್ತಿದೆ.

ಕೊಹ್ಲಿ ಮತ್ತು ಬಾಬರ್ ಆಜಾಂಗೆ ಹೋಲಿಕೆ

ಕೊಹ್ಲಿ ಮತ್ತು ಬಾಬರ್ ಆಜಾಂಗೆ ಹೋಲಿಕೆ

ಇನ್ನೊಂದು ಟ್ವೀಟ್ ನಲ್ಲಿ ಪಾಕಿಸ್ತಾನದ ಬ್ಯಾಟ್ಸ್ ಮ್ಯಾನ್ ಬಾಬರ್ ಆಜಾಂ ಮತ್ತಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯನ್ನು ಹೋಲಿಕೆ ಮಾಡಲಾಗುತ್ತಿದೆ. ಬಾಬರ್ ಒಂದೇ ಇನ್ನಿಂಗ್ಸ್ ನಲ್ಲಿ ನೂರು ರನ್ ಹೊಡೆದರೆ, ವಿರಾಟ್ ಕೊಹ್ಲಿ ನಾಲ್ಕು ಇನ್ನಿಂಗ್ಸ್ ನಲ್ಲಿ ನೂರು ಹೊಡೆದದ್ದು ಎಂದು ಟ್ವೀಟ್ ನಲ್ಲಿ ಬರೆಯಲಾಗಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, February 11, 2020, 17:20 [IST]
Other articles published on Feb 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X