ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾ ವೈರಸ್‌ಗೆ ತುತ್ತಾಗಿರುವ ಟಿಮ್ ಸೈಫರ್ಟ್ ಬಗ್ಗೆ ಕೀವಿಸ್ ಕೋಚ್ ಆತ್ಮವಿಶ್ವಾಸದ ಮಾತು

New Zealand coach Stead says Tim Seifert in much better space

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ನ್ಯೂಜಿಲೆಂಡ್ ಮೂಲದ ಟಿಮ್ ಸೈಫರ್ಟ್ ಕೊರೊನಾ ವೈರಸ್‌ಗೆ ತುತ್ತಾಗಿ ಭಾರತದಲ್ಲಿಯೇ ಉಳಿದುಕೊಂಡಿದ್ದಾರೆ. ಈ ಬಗ್ಗೆ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಕೋಚ್ ಗ್ಯಾರಿ ಸ್ಟೀಡ್ ಪ್ರತಿಕ್ರಿಯಿಸಿದ್ದು ಕೊರೊನಾ ವೈರಸ್‌ಅನ್ನು ಮಣಿಸಿ ಸೈಫರ್ಟ್ ಬಲಿಷ್ಠರಾಗಿ ತವರಿಗೆ ಮರಳಲಿದ್ದಾರೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ನ್ಯೂಜಿಲೆಂಡ್ ತಂಡದ ಬಹುತೇಕ ಎಲ್ಲಾ ಆಟಗಾರರು ಭಾರತದಿಂದ ಮರಳಿದ್ದಾರೆ. ಎರಡು ಹಂತದಲ್ಲಿ ಕೀವಿಸ್ ಆಟಗಾರರು ಹಾಗೂ ಸಿಬ್ಬಂದಿಗಳು ಚಾರ್ಟರ್ಡ್ ವಿಮಾನದಲ್ಲಿ ನ್ಯೂಜಿಲೆಂಡ್‌ಗೆ ಪ್ರಯಾಣವನ್ನು ಬೆಳೆಸಿದ್ದಾರೆ. ಕೇನ್‌ ವಿಲಿಯಮ್ಸನ್ ಹಾಗೂ ಇನ್ನೂ ಕೆಲ ಆಟಗಾರರು ನೇರವಾಗಿ ಇಂಗ್ಲೆಂಡ್‌ಗೆ ಪ್ರಯಾಣಿಸುವ ಕಾರಣ ಮಾಲ್ಡೀವ್ಸ್‌ನಲ್ಲಿ ತಂದಿದ್ದಾರೆ. ಆದರೆ ಕೊರೊನಾ ವೈರಸ್‌ಗೆ ತುತ್ತಾಗಿರುವ ಕಾರಣ ಟಿಮ್ ಸೈಫರ್ಡ್ ಭಾರತದಲ್ಲಿಯೇ ಉಳಿದುಕೊಂಡಿದ್ದಾರೆ.

ಯುಎಇಯಲ್ಲಿ ಪಿಎಸ್‌ಎಲ್ ನಡೆಸುವ ಪಾಕಿಸ್ತಾನ್ ಯೋಜನೆಗೆ ತಣ್ಣೀರು!ಯುಎಇಯಲ್ಲಿ ಪಿಎಸ್‌ಎಲ್ ನಡೆಸುವ ಪಾಕಿಸ್ತಾನ್ ಯೋಜನೆಗೆ ತಣ್ಣೀರು!

"ಆತ ಅಲ್ಲಿದ್ದುಕೊಂಡು (ಭಾರತದಲ್ಲಿ)ಪ್ರತ್ಯೇಕವಾಗಿರುವುದು ಕಷ್ಟಕರ ವಿಚಾರ. ಆ ಸುದ್ದಿಯನ್ನು ಪಡೆಯುವುದು ನಿಜಕ್ಕೂ ಬೇಸರದ ಸಂಗತಿ. ಆದರೆ ಅವನು ಈಗ ಉತ್ತಮ ಜಾಗದಲ್ಲಿದ್ದಾನೆ ಎಂದು ನಾನು ಭಾವಿಸುತ್ತೇನೆ" ಎಂದು ಕೋಚ್ ಗ್ಯಾರಿ ಸ್ಟೀಡ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಐಪಿಎಲ್ 14ನೇ ಆವೃತ್ತಿಯಲ್ಲಿ 29 ಪಂದ್ಯಗಳು ನಡೆದ ನಂತರ ಕೊರನ ವೈರಸ್ ಪ್ರಕರಣಗಳು ಪತ್ತೆಯಾದವು. ಬಯೋಬಬಲ್‌ನ ಒಳಗೆ ಸತತವಾಗಿ ಕೊರೊನಾ ಪ್ರಕರಣಗಳು ಕಾಣಿಸಿಕೊಂಡ ನಂತರ ಟೂರ್ನಿಯನ್ನು ಮುಂದೂಡುವ ನಿರ್ಧಾರವನ್ನು ಬಿಸಿಸಿಐ ಘೋಷಿಸಿತು. ಕೆಕೆಆರ್ ತಂಡದಲ್ಲಿದ್ದ ಸೈಫರ್ಟ್ ಕೂಡ ಈ ಸಂದರ್ಭದಲ್ಲಿ ಕೊರೊನಾ ವೈರಸ್‌ಗೆ ತುತ್ತಾಗಿರುವುದು ಬೆಳಕಿಗೆ ಬಂದಿತ್ತು.

Story first published: Tuesday, May 11, 2021, 13:54 [IST]
Other articles published on May 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X