ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ಗೆ ಕೊರೊನಾ ಕರಿನೆರಳು : ನ್ಯೂಜಿಲೆಂಡ್ ಕ್ರಿಕೆಟ್‌ನಿಂದ ಆಟಗಾರರಿಗೆ ವಿಶೇಷ ಸಲಹೆ

New Zealand Cricket Board Issues Advisory To All Ipl-Bound Players

ಐಪಿಎಲ್ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಇಂತಾ ಸಂದರ್ಭದಲ್ಲಿ ಭಾರತದಲ್ಲಿ ಕೊರೊನಾ ಭೀತಿ ಆವರಿಸಿಕೊಂಡಿದೆ. ಆದರೆ ಐಪಿಎಲ್ ಟೂರ್ನಿ ಯಾವುದೇ ಆತಂಕವಿಲ್ಲದೆ ನಡೆಯಲಿದೆ ಎಂದು ಬಿಸಿಸಿಐ ಸ್ಪಷ್ಟವಾಗಿ ಹೇಳಿದೆ.

ಈ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್‌ನ ಆಟಗಾರರಿಗೆ ನ್ಯೂಜಿಲೆಂಡ್ ಕ್ರಿಕೆಟ್ ವಿಶೇಷ ಸಲಹೆಗಳನ್ನು ನೀಡಿದೆ. ನ್ಯೂಜಿಲೆಂಡ್‌ನ ಯಾವೆಲ್ಲಾ ಆಟಗಾರರು ಐಪಿಎಲ್ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದಾರೋ ಅವರಿಗೆ ಈ ವಿಶೇಷ ಸಲಹೆಯನ್ನು ನೀಡಲಾಗಿದೆ

ಕೊರೊನಾ ವೈರಸ್ ಭೀತಿ: ನಿಗದಿತ ಪ್ರಕಾರವೇ ಒಲಿಂಪಿಕ್ಸ್ ನಡೆಸಲು ಬದ್ಧ ಎಂದ ಜಪಾನ್ ಕ್ರೀಡಾ ಸಚಿವಕೊರೊನಾ ವೈರಸ್ ಭೀತಿ: ನಿಗದಿತ ಪ್ರಕಾರವೇ ಒಲಿಂಪಿಕ್ಸ್ ನಡೆಸಲು ಬದ್ಧ ಎಂದ ಜಪಾನ್ ಕ್ರೀಡಾ ಸಚಿವ

ಭಾರತದಲ್ಲಿ ಈವರೆಗೆ ಅಧಿಕೃತವಾಗಿ 30ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿದೆ. ವಿಶ್ವಾದ್ಯಂತ ಕೊರೊನಾ ವೈರಸ್‌ಗೆ 3000ಕ್ಕೂ ಅಧಿಕ ಜೀವಗಳು ಬಲಿಯಾಗಿದ್ದು 90000 ಮಂದಿ ಭಯಾನಕ ವೈರಸ್‌ಗೆ ತುತ್ತಾಗಿದ್ದಾರೆ.

ನ್ಯೂಜಿಲೆಂಡ್‌ನ ಎಲ್ಲಾ ಆಟಗಾರರಿಗೆ ಕೊರೊನಾ ವಿಚಾರವಾಗಿ ಕ್ಷಣ ಕ್ಷಣದ ಮಾಹಿತಿಯನ್ನು ನೀಡಲಾಗುತ್ತಿದೆ. ಅಭ್ಯಾಸ, ರೋಗ ನಿರೋಧಕ ಕ್ರಮಗಳು ಸೇರಿದಂತೆ ಎಲ್ಲಾ ವಿಚಾರಗಳನ್ನು ಆಟಗಾರರಿಗೆ ತಲುಪಿಸಲಾಗುತ್ತದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್‌ನ ಸಾರ್ವಜನಿಕ ವ್ಯವಹಾರಗಳ ಮುಖ್ಯಸ್ಥ ರಿಚರ್ಡ್ ಬೂಕ್ ಹೇಳಿದ್ದಾರೆ.

ಗಂಗೆಯಲ್ಲಿ ಮಿಂದೆದ್ದ ಜಾಂಟಿ ರೋಡ್ಸ್: ಭಜ್ಜಿ ಮಾಡಿದ್ರು ವಿಶೇಷ ಮನವಿಗಂಗೆಯಲ್ಲಿ ಮಿಂದೆದ್ದ ಜಾಂಟಿ ರೋಡ್ಸ್: ಭಜ್ಜಿ ಮಾಡಿದ್ರು ವಿಶೇಷ ಮನವಿ

ನ್ಯೂಜಿಲೆಂಡ್‌ನ ಆರು ಆಟಗಾರರು ಐಪಿಎಲ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ಜಿಮ್ಮಿ ನೀಶಮ್, ಲೂಕ್ ಪರ್ಗುಸನ್, ಮಿಷೆಲ್ ಮೆಕ್ಲೆನಾಘನ್, ಟ್ರೆಂಟ್ ಬೋಲ್ಟ್, ಮಿಚೆಲ್ ಸ್ಯಾಂಟ್ನರ್ ಐಪಿಎಲ್‌ನಲ್ಲಿ ಭಾಗಿಯಾಗಲಿರುವ ನ್ಯೂಜಿಲೆಂಡ್‌ನ ಆಟಗಾರರಾಗಿದ್ದಾರೆ.

Story first published: Friday, March 6, 2020, 12:51 [IST]
Other articles published on Mar 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X