ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಅಂಗಳದಲ್ಲಿ ಮತ್ತೆ ಸದ್ದು ಮಾಡಿದ ಜನಾಂಗೀಯ ನಿಂದನೆ

New Zealand Cricket sorry for racist abuse towards Jofra Archer

ಜಂಟಲ್ಮೆನ್ ಗೇಮ್ ಎಂದು ಕರೆಯಲ್ಪಡುವ ಕ್ರೀಡೆ ಕ್ರಿಕೆಟ್. ಆದರೆ ಈ ಅನ್ವರ್ಥನಾಮಕ್ಕೆ ಅಪವಾದವೆಂಬಂತೆ ಸಾಕಷ್ಟು ಘಟನೆಗಳು ನಡೆದಿದೆ. ಅದರಲ್ಲಿ ಪ್ರಮುಖವಾಗಿ ಕೇಳಿ ಬರೋದು ಜನಾಂಗೀಯ ನಿಂದನೆ. ಕ್ರಿಕೆಟ್ ಲೋಕಕ್ಕೆ ಈ ಕಪ್ಪು ಚುಕ್ಕೆ ಆಗಾಗ ಅಂಟಿಕೊಳ್ಳುತ್ತಲೇ ಇದೆ. ಈಗ ಮತ್ತೆ ಈ ಆರೋಪ ಕೇಳಿ ಬಂದಿದೆ.

ಈ ಬಾರಿ ಜನಾಂಗೀಯ ನಿಂದನೆಗೆ ಗುರಿಯಾದ ಆಟಗಾರ ಇಂಗ್ಲೆಂಡ್‌ನ ಯುವ ವೇಗಿ ಜೋಫ್ರ ಆರ್ಚರ್. ನ್ಯೂಝಿಲ್ಯಾಂಡ್ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಜೋಫ್ರ ಆರ್ಚರ್ ಅವರನ್ನು ಜನಾಂಗೀಯವಾಗಿ ನಿಂದಿಸಲಾಗಿದೆ ಎಂದು ಸ್ವತಃ ಆರ್ಚರ್ ಹೇಳಿದ್ದಾರೆ. ಆದರೆ ಅದು ಆಟಗಾರರಿಂದ ಅಲ್ಲ ಬದಲಾಗಿ ಕ್ರಿಕೆಟ್ ವೀಕ್ಷಣೆಗಾಗಿ ಬಂದಿದ್ದ ಓರ್ವ ಪ್ರೇಕ್ಷಕನಿಂದ.

ಸೂಪರ್‌ ಓವರ್‌ನಲ್ಲಿ ವಿಶ್ವಕಪ್‌ ಗೆದ್ದು ಇತಿಹಾಸ ಬರೆದ ಇಂಗ್ಲೆಂಡ್‌ಸೂಪರ್‌ ಓವರ್‌ನಲ್ಲಿ ವಿಶ್ವಕಪ್‌ ಗೆದ್ದು ಇತಿಹಾಸ ಬರೆದ ಇಂಗ್ಲೆಂಡ್‌

ನ್ಯೂಜಿಲ್ಯಾಂಡ್‌ನ ಬೇ ಓವಲ್‌ನಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್‌ ಪಂದ್ಯದಲ್ಲಿಇಂಗ್ಲೆಂಡ್ ನ್ಯೂಜೀಲ್ಯಾಂಡ್‌ಗೆ ಇನ್ನಿಂಗ್ಸ್‌ ಹಾಗೂ 65 ರನ್‌ ಅಂತರದಿಂದ ಶರಣಾಗಿತ್ತು. ಪಂದ್ಯ ಮುಗಿದ ಬಳಿಕ ಪ್ರೇಕ್ಷಕರ ಗ್ಯಾಲರಿಯಿಂದ ಓರ್ವ ವ್ಯಕ್ತ ತನ್ನನ್ನು ಜನಾಂಗೀಯವಾಘಿ ನಿಂದಿಸಿದ್ದಾನೆ ಎಂದು ಸ್ವತಃ ಜೋಓ್ರಾ ಆರ್ಚರ್ ಅರೋಪ ಮಾಡಟಿದ್ದಾರೆ. ಈ ವಿಚಾರವಾಗಿ ಟ್ವಿಟ್ಟರ್‌ನಲ್ಲಿ ಆರ್ಚರ್ ಆರೋಪ ಮಾಡಿದ್ದು ಘಟನೆಗೆ ಸಾಕಷ್ಟು ಖಂಡನೆ ವ್ಯಕ್ತವಾಗಿದೆ.

twitter ember link:

ಜೋಫ್ರಾ ಆರ್ಚರ್ ಈ ವಿಚಾರವಾಗಿ ಆರೋಪ ಮಾಡುತ್ತಿದ್ದಂತೆಯೇ ನ್ಯೂಜಿಜ್ಯಾಂಡ್ ಘಟನೆ ಬಗ್ಗೆ ಕ್ಷಮೆಯಾಚನೆಯನ್ನು ಮಾಡಿದೆ. ನಡೆದಿರುವ ಘಟನೆ ಬಗ್ಗೆ ಸೂಕ್ತವಾದ ತನಿಖೆಯನ್ನು ಮಾಡಲಾಗುತ್ತೆ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ಹೇಳಿದೆ. 'ತನ್ನ ತಂಡವನ್ನು ಉಳಿಸಿಕೊಳ್ಳಲು ಹೋರಾಟವನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ನಡೆದ ಜನಾಂಗೀಯ ನಿಂದನೆ ನನ್ನನ್ನು ಗೊಂದಲಕ್ಕೊಳಪಡಿಸಿತು. ಆ ಓರ್ವ ಪ್ರೇಕ್ಷಕನ್ನು ಹೊರತು ಪಡಿಸಿ ಉಳಿದ ವೀಕ್ಷಕರು ಉತ್ತಮವಾಗಿ ಬೆಂಬಲಿಸಿದ್ದಾರೆ' ಎಂದು ಜೋಫ್ರಾ ಆರ್ಚರ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು.

ವಿಶ್ವಕಪ್‌: ಕಿವೀಸ್‌ ಕಿವಿ ಹಿಂಡಿದ ಇಂಗ್ಲೆಂಡ್‌ ಸೆಮಿಫೈನಲ್ಸ್‌ಗೆವಿಶ್ವಕಪ್‌: ಕಿವೀಸ್‌ ಕಿವಿ ಹಿಂಡಿದ ಇಂಗ್ಲೆಂಡ್‌ ಸೆಮಿಫೈನಲ್ಸ್‌ಗೆ

ಈ ಘಟನೆಯನ್ನು ತುಂಬಾ ಗಂಭೀರವಾಗಿ ಪರಿಗಣಿಸಿರುವ ನ್ಯೂಜಿಲ್ಯಾಂಡ್ ಕ್ರಿಕೆಟ್ ಸಿಸಿಟಿವಿ ದೃಶ್ಯಾವಳಿಗಳನ್ನು ಇಂದು(ಮಂಗಳವಾರ) ಪರಿಶೀಲನೆ ನಡೆಸಿ, ಆರೋಪಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ನಿಂದನೆ ಮತ್ತು ಕೆಟ್ಟ ಭಾಷೆ ಬಳಕೆ ಮಾಡುವುದನ್ನು ನ್ಯೂಜಿಲ್ಯಾಂಡ್ ಕ್ರಿಕೆಟ್ ಎಳ್ಳಷ್ಟೂ ಸಹಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದು ಮುಂದಿನ ಪಂದ್ಯಗಳಲ್ಲಿ ಈ ರೀತಿಯ ಘಟನೆಗಳಾಗದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿಸಿದೆ.

Story first published: Tuesday, November 26, 2019, 10:34 [IST]
Other articles published on Nov 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X