ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

18 ವರ್ಷಗಳ ಬಳಿಕ ಪ್ರವಾಸ ಸರಣಿಗಾಗಿ ಪಾಕ್‌ಗೆ ಬಂದಿಳಿದ ನ್ಯೂಜಿಲೆಂಡ್!

New Zealand cricket team in Pakistan for first tour in 18 years

ಇಸ್ಲಮಾಬಾದ್: ಬರೋಬ್ಬರಿ 18 ವರ್ಷಗಳ ಬಳಿಕ ನ್ಯೂಜಿಲೆಂಡ್ ಕ್ರಿಕೆಟ್‌ ತಂಡ ಪ್ರವಾಸ ಸರಣಿಗಾಗಿ ಪಾಕಿಸ್ತಾನಕ್ಕೆ ಬಂದಿಳಿದಿದೆ. ಬ್ಯಾಟಿಂಗ್ ಕೋಚ್ ಥಿಲನ್ ಸಮರವೀರ ಅವರೊಂದಿಗೆ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಶನಿವಾರ (ಸೆಪ್ಟೆಂಬರ್‌ 11) ಪಾಕಿಸ್ತಾನ ತಲುಪಿದೆ. ವಿಶೇಷವೆಂದರೆ 2009ರಲ್ಲಿ ಇದೇ ಸಮರವೀರ ಅವರ ಮೇಲೆ ಪಾಕಿಸ್ತಾನದಲ್ಲಿ ಗುಂಡು ಹಾರಿಸಲಾಗಿತ್ತು. ಅಷ್ಟೇ ಅಲ್ಲ, 2003ರಲ್ಲಿ ನ್ಯೂಜಿಲೆಂಡ್ ತಂಡ ಪಾಕ್‌ನಲ್ಲಿ ತಂಗಿದ್ದ ಹೋಟೆಲ್ ಸಮೀಪವೇ ಬಾಂಬ್ ಬ್ಲಾಸ್ಟ್ ನಡೆದಿತ್ತು.

'ಮಂದೂಡಿರುವ ಪಂದ್ಯ ಯಾವಾಗ ನಡೆದರೂ ಭಾರತವೇ ಗೆಲ್ಲುವ ಫೇವರಿಟ್ ತಂಡ''ಮಂದೂಡಿರುವ ಪಂದ್ಯ ಯಾವಾಗ ನಡೆದರೂ ಭಾರತವೇ ಗೆಲ್ಲುವ ಫೇವರಿಟ್ ತಂಡ'

ಶ್ರೀಲಂಕಾ ಕ್ರಿಕೆಟ್‌ ತಂಡದ ಭಾಗವಾಗಿದ್ದ ಥಿಲನ್ ಸಮರವೀರ 2009ರಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದಾಗ ಅವರ ಮೇಲೆ ದಾಳಿ ನಡೆದಿತ್ತು. ಲಾಹೋರ್‌ನ ಗದಾಫಿ ಸ್ಟೇಡಿಯಂ ಬಳಿಕ ಕೆಲ ಮಿಲಿಟರಿ ಪಡೆಗಳು ಸಮರವೀರ ಮೇಲೆ ದಾಳಿ ನಡೆಸಿದ್ದರು. ಆ ಘಟನೆಯಾಗಿ 12 ವರ್ಷಗಳ ಬಳಿಕ ಮತ್ತೆ ಅದೇ ದೇಶಕ್ಕೆ ಸಮರವೀರ ಬಂದಿದ್ದಾರೆ.

ಸಮರವೀರ ಎಡ ತೊಡೆಯ ಭಾಗಕ್ಕೆ ಗುಂಡು

ಸಮರವೀರ ಎಡ ತೊಡೆಯ ಭಾಗಕ್ಕೆ ಗುಂಡು

2009ರಲ್ಲಿ ಪಾಕ್‌ಗೆ ಹೋಗಿದ್ದಾಗ ಸಮರವೀರ ಅವರ ಎಡ ತೊಡೆಯ ಭಾಗಕ್ಕೆ ಗುಂಡು ಹಾರಿಸಲಾಗಿತ್ತು. ಅದಾಗಿ ಶಸ್ತ್ರ ಚಿಕಿತ್ಸೆ ನಡೆದು ಮೂರು ತಿಂಗಳ ಬಳಿಕ ಸಮರವೀರ ಮತ್ತೆ ಮೈದಾನಕ್ಕಿಳಿದಿದ್ದರು. ಈಗ 2019ರಿಂದಲೂ ಸಮರವೀರ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟರ್ಸ್ ಮೇಲೆ ಹೀಗೆ ದಾಳಿ ನಡೆಯುತ್ತಿದ್ದರಿಂದ ಅಂತಾರಾಷ್ಟ್ರೀಯ ತಂಡಗಳು ಪಾಕಿಸ್ತಾನಕ್ಕೆ ಬರಲು ನಿರಾಕರಿಸಿದ್ದವು. ಪಾಕಿಸ್ತಾನ ವಿರುದ್ಧ ಪಂದ್ಯವಿದ್ದರೆ ಎರಡೂ ದೇಶಗಳು ಪಂದ್ಯವನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಂತ ತಟಸ್ಥ ತಾಣದಲ್ಲಿ ನಡೆಸುತ್ತಿತ್ತು. ಆದರೆ ಈಚಿನ ದಿನಗಳಲ್ಲಿ ಅಂದರೆ ಕಳೆದ ಆರು ವರ್ಷಗಳಲ್ಲಿ ಪಾಕಿಸ್ತಾನ ತಂಡ ಜಿಂಬಾಬ್ವೆ, ಸೌತ್ ಆಫ್ರಿಕಾ, ಬಾಂಗ್ಲಾದೇಶ, ವೆಸ್ಟ್‌ ಇಂಡೀಸ್ ಮತ್ತು ಶ್ರೀಲಂಕಾ ದೇಶಗಳಿಗೆ ಆತಿಥ್ಯ ವಹಿಸಿದೆ. ಈಗ ದೇಶದಲ್ಲಿ ಭದ್ರತೆ ಹೆಚ್ಚಿದೆ. ಹೀಗಾಗಿಯೇ ಬಹಳ ವರ್ಷಗಳಿಂದ ಪಾಕ್‌ಗೆ ಪ್ರವಾಸ ಹೋಗದಿದ್ದ ಕೆಲ ದೇಶಗಳೂ ಕೂಡ ಈಗ ಪ್ರವಾಸ ಹೋಗಲು ಮನಸ್ಸು ಮಾಡುತ್ತಿವೆ.

ನ್ಯೂಜಿಲೆಂಡ್ ಆಟಗಾರರು ತಂಗಿದ್ದ ಹೋಟೆಲ್ ಸಮೀಪ ಬ್ಲಾಸ್ಟ್!

ನ್ಯೂಜಿಲೆಂಡ್ ಆಟಗಾರರು ತಂಗಿದ್ದ ಹೋಟೆಲ್ ಸಮೀಪ ಬ್ಲಾಸ್ಟ್!

2002ರಲ್ಲಿ ಕರಾಚಿಯಲ್ಲಿ ನ್ಯೂಜಿಲೆಂಡ್‌ ತಂಡ ತಂಗಿದ್ದ ಹೋಟೆಲ್ ಸಮೀಪ ಬಾಂಬ್ ಬ್ಲಾಸ್ಟ್ ಆಗಿತ್ತು. ಅದಾಗಿ ಒಂದು ವರ್ಷದ ಬಳಿಕ ನ್ಯೂಜಿಲೆಂಡ್ ತಂಡ ಕೂಡ ಪಾಕಿಸ್ತಾನಕ್ಕೆ ಪ್ರವಾಸ ಹೋಗುವುದನ್ನೇ ನಿಲ್ಲಿಸಿತ್ತು. ಆ ಘಟನೆ ನಡೆದು ಬರೋಬ್ಬರಿ 18 ವರ್ಷಗಳ ಬಳಿಕ ಮತ್ತೆ ಕಿವೀಸ್ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿದೆ. 2003ರಲ್ಲಿ ಐದು ಪಂದ್ಯಗಳ ಏಕದಿನ ಸರಣಿಗಾಗಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನಕ್ಕೆ ಪ್ರವಾಸ ಹೋಗಿತ್ತು. ಅದೇ ಕೊನೇ. ಆ ಬಳಿಕ ನ್ಯೂಜಿಲೆಂಡ್ ತಂಡ ಪಾಕಿಸ್ತಾನಕ್ಕೆ ಹೋಗಿದ್ದೇ ಇಲ್ಲ. ಶನಿವಾರ ಪಾಕ್‌ಗೆ ಬಂದಿಳಿದ ನ್ಯೂಜಿಲೆಂಡ್ ಆಟಗಾರರನ್ನು ಬುಲೆಟ್ ಪ್ರೂಫ್ ಬಸ್‌ನಲ್ಲಿ ಅವರ ಹೋಟೆಲ್‌ಗೆ ಬಿಡಲಾಯ್ತು. ನ್ಯೂಝಿಲೆಂಡ್ ತಂಡ ಪಾಕಿಸ್ತಾನದಲ್ಲಿ ಸೆಪ್ಟೆಂಬರ್‌ 17, 19, 21ಕ್ಕೆ ಮೂರು ಏಕದಿನ ಪಂದ್ಯಗಳನ್ನು ಮತ್ತು ಸೆಪ್ಟೆಂಬರ್ 25, 26, 29, ಅಕ್ಟೋಬರ್‌ 1, 3ಕ್ಕೆ ಐದು ಪಂದ್ಯಗಳ ಟಿ20ಐ ಸರಣಿ ಆಡಲಿದೆ.

'ಇಲ್ಲಿರಲು ಸಹಜವಾಗಿಯೇ ನಮಗೆ ಖುಷಿಯಾಗುತ್ತಿದೆ'

'ಇಲ್ಲಿರಲು ಸಹಜವಾಗಿಯೇ ನಮಗೆ ಖುಷಿಯಾಗುತ್ತಿದೆ'

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಹಂಗಾಮಿ ನಾಯಕರಾಗಿರುವ ಟಾಮ್ ಲ್ಯಾಥಮ್ ಪಾಕ್‌ನಲ್ಲಿರುವ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನನಗೆ ಮತ್ತು ನನ್ನ ತಂಡಕ್ಕೆ ಪಾಕಿಸ್ತಾನದಲ್ಲಿರಲು ಖುಷಿಯಿದೆ ಎಂದಿದ್ದಾರೆ. "ಪಾಕಿಸ್ತಾನ ಒಂದು ದೇಶವಾಗಿರುವುದರಿಂದ ಇಲ್ಲಿರಲು ಸಹಜವಾಗಿಯೇ ನಮಗೆ ಖುಷಿಯಾಗುತ್ತಿದೆ," ಎಂದು ಲ್ಯಾಥಮ್ ಹೇಳಿದ್ದಾರೆ. ಆಟಗಾರರಿಗೆ ನಮ್ಮ ಪಾಲಿಗೆ ಬೇರೆ ಬೇರೆ ದೇಶಗಳಿಗೆ ಹೋಗಿ ಅಲ್ಲಿನ ವಿಭಿನ್ನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ಮುಖ್ಯವೆನಿಸಿದೆ. ಇಲ್ಲಿಗೆ ನಮ್ಮ ಇನ್ನೊಂದು ತಂಡ ಬರುವುದರಲ್ಲಿದೆ. ಅವರೂ ಕೂಡ ಶೀಘ್ರ ನಮ್ಮನ್ನು ಸೇರಿಕೊಳ್ಳಲಿದ್ದಾರೆ ಎಂದು ಲ್ಯಾಥಮ್ ತಿಳಿಸಿದ್ದಾರೆ. ನ್ಯೂಜಿಲೆಂಡ್‌ ಟಿ20 ತಂಡದಲ್ಲಿರುವ ಐವರು ಆಟಗಾರರಾದ ಟಾಡ್ ಆಸ್ಟಲ್, ಮಾರ್ಕ್ ಚಾಪ್ಮನ್, ಮಾರ್ಟಿನ್ ಗಪ್ಟಿಲ್, ಡಾರಿಲ್ ಮಿಚೆಲ್ ಮತ್ತು ಇಶ್ ಸೋಧಿ ಕೆಲ ದಿನಗಳ ಬಳಿಕ ಪಾಕ್‌ ಗೆ ಬರಲಿದ್ದಾರೆ.
ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡ: ಟಾಮ್ ಲ್ಯಾಥಮ್ (ಕ್ಯಾಪ್ಟನ್), ಫಿನ್ ಅಲೆನ್, ಹಮೀಶ್ ಬೆನೆಟ್, ಟಾಮ್ ಬ್ಲಂಡೆಲ್, ಡೌಗ್ ಬ್ರೇಸ್‌ವೆಲ್, ಕಾಲಿನ್ ಡಿ ಗ್ರಾಂಡ್‌ಹೋಮ್, ಜಾಕೋಬ್ ಡಫಿ, ಮ್ಯಾಟ್ ಹೆನ್ರಿ, ಸ್ಕಾಟ್ ಕುಗೆಲೆಜ್ನ್, ಕೋಲ್ ಮೆಕ್ಕಾಂಚಿ, ಹೆನ್ರಿ ನಿಕೋಲ್ಸ್, ಅಜಾಜ್ ಪಟೇಲ್, ರಾಚಿನ್ ರವೀಂದ್ರ, ಬ್ಲೇರ್ ಟಿಕ್ನರ್, ವಿಲ್ ಯಂಗ್.

Story first published: Saturday, September 11, 2021, 17:57 [IST]
Other articles published on Sep 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X