ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಬೆದರಿದ ನ್ಯೂಜಿಲೆಂಡ್

new zealand cricket turned down offer to tour pakistan

ವೆಲ್ಲಿಂಗ್ಟನ್, ಜುಲೈ 31: ಪಾಕಿಸ್ತಾನಕ್ಕೆ ಬಂದು ಆಡುವಂತೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ (ಪಿಸಿಬಿ) ನೀಡಿದ್ದ ಆಹ್ವಾನವನ್ನು ನ್ಯೂಜಿಲೆಂಡ್ ಕ್ರಿಕೆಟ್ (ಎನ್‌ಜೆಡ್‌ಸಿ) ತಿರಸ್ಕರಿಸಿದೆ.

ಸರ್ಕಾರದ ಸಲಹೆ ಮತ್ತು ಭದ್ರತಾ ಸಂಸ್ಥೆಗಳ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ಈ ಆಹ್ವಾನವನ್ನು ತಿರಸ್ಕರಿಸಿರುವುದಾಗಿ ಎನ್‌ಜೆಡ್‌ಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೆ ತಿಳಿಸಿದ್ದಾರೆ.

'ಪಾಕ್‌ನಲ್ಲಿ ಆಡಲು ನಾವು ಮುಕ್ತ ಮನಸ್ಸಿನಿಂದಿದ್ದೆವು. ಹೀಗಾಗಿ ಎಲ್ಲ ಮಾಹಿತಿಗಳನ್ನೂ ಪರಿಶೀಲಿಸಿದೆವು. ಸರ್ಕಾರದ ಸಲಹೆ, ಎಂಫ್ಯಾಟ್, ಐಸಿಸಿ, ಸ್ವತಂತ್ರ ಭದ್ರತಾ ಸಂಸ್ಥೆಗಳು ಸೇರಿದಂತೆ ವಿವಿಧ ಮೂಲಗಳಿಂದ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆದುಕೊಂಡೆವು.

ಭಾರತ vs ಇಂಗ್ಲೆಂಡ್ 1ನೇ ಟೆಸ್ಟ್: ಸಮಯ, ನೇರ ಪ್ರಸಾರ ಯಾವುದರಲ್ಲಿ? ಭಾರತ vs ಇಂಗ್ಲೆಂಡ್ 1ನೇ ಟೆಸ್ಟ್: ಸಮಯ, ನೇರ ಪ್ರಸಾರ ಯಾವುದರಲ್ಲಿ?

ಪ್ರಸ್ತುತದ ಸನ್ನಿವೇಶವು ಪಾಕಿಸ್ತಾನದಲ್ಲಿ ಆಡುವಂತೆ ನೀಡಿರುವ ಆಹ್ವಾನವನ್ನು ಒಪ್ಪಿಕೊಳ್ಳಲು ಪೂರಕವಾಗಿಲ್ಲ ಎಂದು ಈ ನಿರ್ಧಾರ ತೆಗೆದುಕೊಂಡಿದ್ದೇವೆ' ಎಂದು ಅವರು ಹೇಳಿದ್ದಾರೆ.

ಯುನೈಟೆಡ್ ಅರಬ್ ಎಮಿರೈಟ್ಸ್‌ನಲ್ಲಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನಗಳು ಮೂರು ಟಿ20, ಮೂರು ಏಕದಿನ ಹಾಗೂ ಮೂರು ಟೆಸ್ಟ್ ಪಂದ್ಯಗಳ ಸರಣಿಗಳನ್ನು ಆಡಲಿವೆ.

ಇದಕ್ಕೂ ಮುನ್ನ ಪಾಕಿಸ್ತಾನವು ತನ್ನ ನೆಲದಲ್ಲಿ ಎರಡು ಟಿ20 ಪಂದ್ಯಗಳನ್ನು ಆಡುವಂತೆ ನ್ಯೂಜಿಲೆಂಡ್‌ಗೆ ಆಹ್ವಾನ ನೀಡಿತ್ತು.

ಟೆಸ್ಟ್ Rankingನಲ್ಲಿ ಸ್ಮಿತ್ ಮೀರಿಸಲು ಕೊಹ್ಲಿಗಿದು ಸುವರ್ಣಾವಕಾಶ!ಟೆಸ್ಟ್ Rankingನಲ್ಲಿ ಸ್ಮಿತ್ ಮೀರಿಸಲು ಕೊಹ್ಲಿಗಿದು ಸುವರ್ಣಾವಕಾಶ!

2002ರಲ್ಲಿ ನ್ಯೂಜಿಲೆಂಡ್ ತಂಡವು ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಕರಾಚಿಯಲ್ಲಿ ತಂಡ ಉಳಿದುಕೊಂಡಿದ್ದ ಹೋಟೆಲ್ ಹೊರಭಾಗ ಆತ್ಮಾಹುತಿ ಬಾಂಬ್ ದಾಳಿ ನಡೆದಿತ್ತು. ಆಗ ನ್ಯೂಜಿಲೆಂಡ್ ಪ್ರವಾಸವನ್ನು ಮೊಟಕುಗೊಳಿಸಿ ತವರಿಗೆ ಮರಳಿತ್ತು.

ಅದರ ಮರು ವರ್ಷ 2003ರಲ್ಲಿ ನ್ಯೂಜಿಲೆಂಡ್ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು.

2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡವಿದ್ದ ಬಸ್‌ ಮೇಲೆ ಗುಂಡಿನ ದಾಳಿ ನಡೆದ ಬಳಿಕ ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿರಲಿಲ್ಲ. ಹೀಗಾಗಿ ಪಾಕ್ ಯುಎಇಯನ್ನೇ ತನ್ನ ತವರು ನೆಲವಾಗಿ ಬಳಸಿಕೊಳ್ಳುತ್ತಿದೆ.

ಆದರೆ, ಈ ವರ್ಷದ ಏಪ್ರಿಲ್‌ನಲ್ಲಿ ವೆಸ್ಟ್ ಇಂಡೀಸ್ ತಂಡವು ಪಾಕಿಸ್ತಾನಕ್ಕೆ ತೆರಳಿ ಮೂರು ಪಂದ್ಯಗಳ ಟಿ20 ಸರಣಿ ಆಡಿತ್ತು.

Story first published: Tuesday, July 31, 2018, 17:29 [IST]
Other articles published on Jul 31, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X