ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ಕೇಂದ್ರೀಯ ಒಪ್ಪಂದದಿಂದ ಹೊರ ನಡೆದ ಟ್ರೆಂಟ್‌ ಬೌಲ್ಟ್‌! ಏಕೆ ಈ ನಿರ್ಧಾರ?

Trent boult

ಏಕದಿನ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿ ಇಡೀ ಕ್ರಿಕೆಟ್ ಲೋಕಕ್ಕೆ ಶಾಕ್ ನೀಡಿದ್ದ ಬೆನ್ ಸ್ಟೋಕ್ಸ್ ಸುದ್ದಿ ಮಾಸುವ ಮುನ್ನವೇ ನ್ಯೂಜಿಲೆಂಡ್ ಬೌಲರ್ ಟ್ರೆಂಟ್ ಬೋಲ್ಟ್ ತೆಗೆದುಕೊಂಡಿರುವ ನಿರ್ಧಾರ ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿದೆ.

ಈಗಾಗಲೇ ಏಕದಿನ ಫಾರ್ಮೆಟ್ ಕೊನೆಗೊಳ್ಳುತ್ತಿದೆ ಎಂದು ಅನೇಕರು ಟೀಕೆ ಮಾಡುತ್ತಿರುವಾಗ, ಖ್ಯಾತ ಕ್ರಿಕೆಟಿಗರು ಅಂತರಾಷ್ಟ್ರೀಯ ಕ್ರಿಕೆಟ್ ಆಡಲು ಹಿಂಜರಿಯುವಂತಹ ಪರಿಸ್ಥಿತಿ ಎದುರಾಗುತ್ತಿದೆ. ಇದಕ್ಕೆ ದೊಡ್ಡ ಉದಾಹರಣೆ ಕಿವೀಸ್‌ ಪ್ರಮುಖ ಬೌಲರ್ ಟ್ರೆಂಟ್ ಬೌಲ್ಟ್ ಅವರಂಥವರು ತೆಗೆದುಕೊಂಡ ನಿರ್ಧಾರ.

ಇತ್ತೀಚೆಗಷ್ಟೇ ಬೆನ್ ಸ್ಟೋಕ್ಸ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಸಾಕಷ್ಟು ವಿವಾದ ಸೃಷ್ಟಿಸಿದ್ದರು. ಇದೀಗ ನ್ಯೂಜಿಲೆಂಡ್ ತಂಡದ ಟ್ರೆಂಟ್ ಬೌಲ್ಟ್ ಇಂತಹ ನಿರ್ಧಾರ ಕೈಗೊಂಡು ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ.

31 ವರ್ಷದ ಬೆನ್‌ ಸ್ಟೋಕ್ಸ್ ಮೂರು ಫಾರ್ಮೆಟ್ ಆಡಲು ತನ್ನ ದೇಹ ಸಹಕರಿಸುತ್ತಿಲ್ಲ ಎಂಬ ಕಾರಣ ನೀಡಿದ್ದಲ್ಲದೆ ಏಕದಿನ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿಯ ನಿರ್ಧಾರ ತೆಗೆದುಕೊಂಡಿದ್ದರು.

ವಿಶ್ವದಾದ್ಯಂತ ಅರ್ಧ ಡಜನ್‌ಗೂ ಹೆಚ್ಚು ಟಿ20 ಲೀಗ್‌

ವಿಶ್ವದಾದ್ಯಂತ ಅರ್ಧ ಡಜನ್‌ಗೂ ಹೆಚ್ಚು ಟಿ20 ಲೀಗ್‌

ಸದ್ಯ ವಿಶ್ವದಾದ್ಯಂತ ಕ್ರಿಕೆಟ್ ಆಡುವ ದೇಶಗಳು ತಮ್ಮದೇ ಆದ ಟಿ20 ಲೀಗ್ ಸರಣಿಯನ್ನು ಐಪಿಎಲ್ ಶೈಲಿಯಲ್ಲಿ ನಡೆಸುತ್ತಿವೆ.ಈಗಾಗಲೇ ಐಪಿಎಲ್, ಬಿಗ್ ಬ್ಯಾಷ್, ಸಿಪಿಎಲ್ ಹೀಗೆ ಅರ್ಧ ಡಜನ್ ಟಿ20 ಸರಣಿಗಳು ನಡೆಯುತ್ತಿವೆ. ಇದೀಗ ದಕ್ಷಿಣ ಆಫ್ರಿಕಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಐಪಿಎಲ್ ತಂಡದ ಮೈತ್ರಿಯೊಂದಿಗೆ ಹೊಸ ಕ್ರಿಕೆಟ್ ಸರಣಿಯನ್ನು ಪ್ರಾರಂಭಿಸುತ್ತಿವೆ.

ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾಗೆ ಸವಾಲೊಡ್ಡುವ 3 ಪಾಕಿಸ್ತಾನದ ಕ್ರಿಕೆಟಿಗರು

ಟಿ20 ಲೀಗ್‌ನಿಂದ ಹರಿಯುತ್ತಿದೆ ಹಣದ ಹೊಳೆ

ಟಿ20 ಲೀಗ್‌ನಿಂದ ಹರಿಯುತ್ತಿದೆ ಹಣದ ಹೊಳೆ

ಹೊಸ ಹೊಸ ಟಿ20 ಲೀಗ್ ಹುಟ್ಟಿಕೊಂಡಿರುವ ಪರಿಣಾಮ ಈ ಎರಡೂ ಸರಣಿಗಳಲ್ಲಿ ಹಣದ ಹೊಳೆ ಹರಿಯುತ್ತಿದೆ. ಈ ಕಾರಣದಿಂದಾಗಿ, ಈ ಟಿ20 ಸರಣಿಗಳಲ್ಲಿ ಆಡಲು ವಿವಿಧ ಆಟಗಾರರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ನಾವು ಭಾರತದಲ್ಲಿ ಇತರ ಕ್ರೀಡೆಗಳನ್ನು ಹೇಗೆ ನೋಡುತ್ತೇವೆ ಮತ್ತು ಇತರ ಕ್ರೀಡಾಪಟುಗಳು ಹೇಗೆ ಹಣ ಗಳಿಸಲು ಸಾಧ್ಯವಾಗುತ್ತಿಲ್ಲ, ಅದೇ ಇತರ ದೇಶಗಳ ಕ್ರಿಕೆಟಿಗರ ಪರಿಸ್ಥಿತಿ.

ಈ ಪರಿಸ್ಥಿತಿಯಲ್ಲಿ ಆಟಗಾರರು ಐಪಿಎಲ್‌ನಂತಹ ಸರಣಿಗಳಲ್ಲಿ ಸಿಗುವ ಹಣದಿಂದ ದೇಶಕ್ಕಾಗಿ ಆಡುವುದನ್ನು ತಪ್ಪಿಸುತ್ತಿದ್ದಾರೆ. ಇದೀಗ ಈ ಸಾಲಿಗೆ ನ್ಯೂಜಿಲೆಂಡ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಸೇರಿದ್ದಾರೆ.

ವಿದೇಶಿ ಕ್ರಿಕೆಟ್ ಲೀಗ್‌ಗಳಲ್ಲಿ ಆಡಲು ಭಾರತೀಯ ಆಟಗಾರರಿಗೆ ಅನುಮತಿ ನೀಡಿ; ಮಾಜಿ ಕ್ರಿಕೆಟಿಗ ಆಗ್ರಹ

Sanju , DK ಹಾಗು Ashwin ಅಭಿಮಾನಿಗಳಿಗೆ ಮನರಂಜನೆ ಕೊಟ್ಟಿದ್ದು ಹೀಗೆ | *Cricket |OneIndia Kannada
ನ್ಯೂಜಿಲೆಂಡ್ ಕೇಂದ್ರೀಯ ಒಪ್ಪಂದ ತಿರಸ್ಕರಿಸಿದ ಬೋಲ್ಟ್‌

ನ್ಯೂಜಿಲೆಂಡ್ ಕೇಂದ್ರೀಯ ಒಪ್ಪಂದ ತಿರಸ್ಕರಿಸಿದ ಬೋಲ್ಟ್‌

ಟ್ರೆಂಟ್ ಬೋಲ್ಟ್‌ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ನೀಡಿದ್ದ ಒಪ್ಪಂದವನ್ನು ತಿರಸ್ಕರಿಸಿದ್ದಾರೆ. ಇದರೊಂದಿಗೆ ನ್ಯೂಜಿಲೆಂಡ್ ಕ್ರಿಕೆಟ್ ತಂಡಕ್ಕೆ ಬೌಲ್ಟ್ ಸೇರ್ಪಡೆಯಾಗುವುದು ಅನುಮಾನವಾಗಿದೆ.

ಬೌಲ್ಡ್ ಒಪ್ಪಂದಕ್ಕೆ ಸಹಿ ಹಾಕಿದರೆ, ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಅನುಮತಿಯಿಲ್ಲದೆ ಅವರು ಇತರ ದೇಶಗಳಿಗೆ ಪ್ರಯಾಣಿಸಲು ಮತ್ತು ಟಿ20 ಲೀಗ್‌ಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಆದರೆ ಪತ್ನಿ ಮತ್ತು ಮಗುವಿನೊಂದಿಗೆ ಸಮಯ ಕಳೆಯುವ ನಿರ್ಧಾರ ಕೈಗೊಂಡಿದ್ದೇನೆ ಎಂದು ಬೋಲ್ಟ್‌ ಹೇಳಿಕೆ ನೀಡಿದ್ದಾರೆ.

Story first published: Thursday, August 11, 2022, 10:24 [IST]
Other articles published on Aug 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X