ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಕೀವಿಸ್: ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾಗೆ 10 ವಿಕೆಟ್‌ಗಳ ಸೋಲು

New Zealand Defeated India By 10 Wickets In The First Test

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೆಸ್ಟ್ ನಂಬರ್ 1 ತಂಡ ಟೀಮ್ ಇಂಡಿಯಾ ಹೀನಾಯವಾಗಿ ಸೋತಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ನಲ್ಲಿ ಟೀಮ್ ಇಂಡಿಯಾದ ಜಯದ ಸರಪಳಿ ಮುರಿದಿದೆ. ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಆರಂಭವಾದ ಬಳಿಕ ಟೆಸ್ಟ್‌ನಲ್ಲಿ ಕಂಡ ಮೊದಲ ಸೋಲು ಇದಾಗಿದೆ.

ಎರಡೂ ಇನ್ನಿಂಗ್ಸ್‌ಗಳಲ್ಲಿ ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದರು. ಎರಡು ಇನ್ನಿಂಗ್ಸ್‌ಗಳಲ್ಲಿ ಟೀಮ್ ಇಂಡಿಯಾ ಪರವಾಗಿ ಕನ್ನಡಿಗ ಮಯಾಂಕ್ ಅಗರ್ವಾಲ್ ಮಾತ್ರ ಏಕೈಕ ಅರ್ಧ ಶತಕವನ್ನು ಸಿಡಿಸಿದ್ದರು. ಇದರಿಂದಲೇ ತಿಳಿಯುತ್ತದೆ ಟೀಮ್ ಇಂಡಿಯಾ ನ್ಯೂಜಿಲೆಂಡ್ ನೆಲದಲ್ಲಿ ಎಷ್ಟು ಕೆಟ್ಟ ಪ್ರದರ್ಶನವನ್ನು ನೀಡಿದೆ ಎಂದು. ಹೀಗಾಗಿ ನ್ಯೂಜಿಲೆಂಡ್ ಇನ್ನೂ ಒಂದು ದಿನ ಇರುವಂತೆಯೇ ಪಂದ್ಯವನ್ನು ಗೆದ್ದು ಬೀಗಿದೆ.

ಮೂರನೇ ದಿನದಾಟದಲ್ಲಿ ಕೊಹ್ಲಿ ತಂತ್ರಗಾರಿಕೆಗೆ ವಿವಿಎಸ್ ಲಕ್ಷಣ್ ಅಸಮಾಧಾನಮೂರನೇ ದಿನದಾಟದಲ್ಲಿ ಕೊಹ್ಲಿ ತಂತ್ರಗಾರಿಕೆಗೆ ವಿವಿಎಸ್ ಲಕ್ಷಣ್ ಅಸಮಾಧಾನ

ಮೂರನೇ ದಿನದಂತ್ಯಕ್ಕೆ 144 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಭಾರತ ನಾಲ್ಕನೇ ದಿನ ಸ್ವಲ್ಪ ಪ್ರತಿರೋಧವನ್ನು ಒಡ್ಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಟೀಮ್ ಇಂಡಿಯಾದ ಆಟಗಾರರು ಕೀವಿಸ್ ಬೌಲರ್‌ಗಳಿಗೆ ಸುಲಭ ತುತ್ತಾದರು. ನಿನ್ನೆಯ ಮೊತ್ತಕ್ಕೆ 21 ರನ್ ಸೇರಿಸಿ ಟೀಮ್ ಇಂಡಿಯಾ ಉಳಿದ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು.

ನ್ಯೂಜಿಲೆಂಡ್ ವೇಗಿಗಳನ್ನು ಎದುರಿಸುವಲ್ಲಿ ಟೀಮ್ ಇಂಡಿಯಾ ಆಟಗಾರರು ಸಂಪೂರ್ಣ ವಿಫಲರಾದರು. ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದಿದ್ದ ಟಿಮ್ ಸೌಥಿ ಎರಡನೇ ಇನ್ನಿಂಗ್ಸ್‌ನಲ್ಲಿ5 ವಿಕೆಟ್ ಪಡೆದು ಮಿಂಚಿದರು. ಈ ಅದ್ಭುತ ಪ್ರದರ್ಶನಕ್ಕೆ ಟಿಮ್ ಸೌಥಿ ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ಪಡೆದುಕೊಂಡರು.

'ಅವನೊಬ್ಬ ರಾಕ್‌ಸ್ಟಾರ್': ಹ್ಯಾಟ್ರಿಕ್ ಹೀರೋ ಆ್ಯಷ್ಟನ್‌ಗೆ ಭಾರತೀಯನೇ ಸ್ಪೂರ್ತಿ !'ಅವನೊಬ್ಬ ರಾಕ್‌ಸ್ಟಾರ್': ಹ್ಯಾಟ್ರಿಕ್ ಹೀರೋ ಆ್ಯಷ್ಟನ್‌ಗೆ ಭಾರತೀಯನೇ ಸ್ಪೂರ್ತಿ !

ಇಂದು ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಕೇವಲ 8 ರನ್‌ಗಳ ಮುನ್ನಡೆಯನ್ನು ಪಡೆದುಕೊಂಡಿತು. ಹೀಗಾಗಿ ನ್ಯೂಜಿಲೆಂಡ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 9 ರನ್‌ ಗಳಿಸುವ ಸವಾಲು ಪಡೆಯಿತು. ಇದನ್ನು ನ್ಯೂಜಿಲೆಂಡ್ ಯಾವುದೇ ವಿಕೆಟ್ ಕಳೆದುಕೊಳ್ಳದೆ ಗೆದ್ದು ಬೀಗಿದೆ. ಈ ಮೂಲಕ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

Story first published: Monday, February 24, 2020, 8:10 [IST]
Other articles published on Feb 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X