ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ ಸೋಲಿನ ಪ್ರತಿಕಾರದ ಬಗ್ಗೆ ಕೊಹ್ಲಿ ಉತ್ತರಕ್ಕೆ ಕೀವಿಸ್ ಅಭಿಮಾನಿಗಳೂ ಫಿದಾ!

IND VS NZ 1st T20 : ಕೇನ್ ವಿಲಿಯಮ್ಸನ್ ಬಗ್ಗೆ ವಿರಾಟ್ ಹೇಳಿದ್ದೇನು ನೋಡಿ | Kane Williamson | Virat Kohli
New Zealand Guys Are So Nice, Can’t Think Of Revenge - Virat Kohli

ಇನ್ನೇನನು ಕೆಲವೇ ಹೊತ್ತಿನಲ್ಲಿ ನ್ಯೂಜಿಲ್ಯಾಂಡ್ ತಂಡದ ವಿರುದ್ಧದ ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ. ಪಂದ್ಯದ ಆರಂಭಕ್ಕೂ ಮುನ್ನ ನಿನ್ನೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸುದ್ದಿಗಾರರ ಜೊತೆ ಮಾತನಾಡಿದ್ದಾರೆ. ಈ ವೇಳೆ ನ್ಯೂಜಿಲ್ಯಾಂಡ್ ವಿರುದ್ಧದ ಪ್ರತಿಕಾರದ ಬಗ್ಗೆ ಕೊಹ್ಲಿ ಹೇಳಿಕೆ ನೀಡಿದ್ದಾರೆ.

ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲ್ಯಾಂಡ್‌ ವಿರುದ್ಧ ಸೋತು ಆಘಾತಕಾರಿಯಾಗಿ ಹೊರಬಿದ್ದಿತ್ತು. ಆ ಸೋಲಿನ ಬಳಿಕ ಟೀಮ್ ಇಂಡಿಯಾ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಹಾಗಾಗಿ ಈ ಸರಣಿ ವಿಶ್ವಕಪ್ ಸೋಲಿಗೆ ಪ್ರತಿಕಾರ ಎಂಬ ರೀತಿ ಬಿಂಬಿಸಲಾಗುತ್ತಿದೆ.

ಭಾರತ vs ನ್ಯೂಜಿಲೆಂಡ್: ಮೊದಲನೇ ಟಿ20ಐಗೆ ಭಾರತ ಸಂಭಾವ್ಯ XIಭಾರತ vs ನ್ಯೂಜಿಲೆಂಡ್: ಮೊದಲನೇ ಟಿ20ಐಗೆ ಭಾರತ ಸಂಭಾವ್ಯ XI

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೂ ಈ ಬಗ್ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ವಿರಾಟ್ ಕೊಹ್ಲಿ ಅದ್ಭುತ ಉತ್ತರವನ್ನು ನೀಡಿದ್ದಾರೆ. ನ್ಯೂಜಿಲ್ಯಾಂಡ್ ತಂಡದ ಆಟಗಾರರು ತುಂಬಾ ಒಳ್ಳೆಯವರು. ಅವರ ವಿರುದ್ಧ ಪ್ರತಿಕಾರದ ಚಿಂತನೆಯೇ ಬಂದಿಲ್ಲ ಎಂದಿದ್ದಾರೆ.

ನೀವು ಪ್ರತಿಕಾರದ ಬಗ್ಗೆ ಚಿಂತನೆ ನಡೆಸಿದರು ಕೂಡ ನ್ಯೂಜಿಲ್ಯಾಂಡದ ತಂಡದ ಹುಡುಗರು ತುಂಬಾ ಒಳ್ಳೆಯವರು. ಪ್ರತಿಕಾರದ ವಲಯದೊಳಗೆ ಹೊಗಲು ನಿಮ್ಮಿಂದ ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ಅಂಗಳದೊಳಗೆ ಪ್ರತಿಸ್ಪರ್ಧಿಯಾಗಿದ್ದರೂ ನ್ಯೂಜಿಲ್ಯಾಂಡ್ ಮತ್ತು ಟೀಮ್ ಇಂಡಿಯಾ ಮಧ್ಯೆ ಅತ್ಯುತ್ತಮ ಬಾಂಧವ್ಯ ಇದೆ ಎಂಬ ಮಾತನ್ನು ವಿರಾಟ್ ಕೊಹ್ಲಿ ಹೇಳಿದ್ದಾರೆ.

ನ್ಯೂಜಿಲ್ಯಾಂಡ್ vs ಭಾರತ: ಪಂದ್ಯದ ಸಮಯ, ಪ್ರಸಾರ, ತಂಡದ ಮಾಹಿತಿನ್ಯೂಜಿಲ್ಯಾಂಡ್ vs ಭಾರತ: ಪಂದ್ಯದ ಸಮಯ, ಪ್ರಸಾರ, ತಂಡದ ಮಾಹಿತಿ

ನ್ಯೂಜಿಲ್ಯಾಂಡ್ ಆಟಗಾರರ ಆನ್‌ಫೀಲ್ಡ್ ವರ್ತನೆಯ ಬಗ್ಗೆ ಟೀಮ್ ಇಂಡಿಯಾ ನಾಯಕ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಅವರು ನಿಜವಾದ ಕ್ರೀಡಾ ರಾಯಭಾರಿಗಳು ಎಂದಿದ್ದಾರೆ.

Story first published: Friday, January 24, 2020, 11:02 [IST]
Other articles published on Jan 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X