ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಾರ್ನಸ್ ಲ್ಯಾಬುಸ್ಚಾಗ್ನೆ ಕ್ಯಾಚ್‌ ಬಿಟ್ಟಿದ್ದಕ್ಕೆ ಬೆಲೆತೆತ್ತ ಆಸ್ಟಲ್: ವೀಡಿಯೋ

New Zealand pay price for Todd Astle’s massive blunder

ಸಿಡ್ನಿ, ಜನವರಿ 6: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ನ್ಯೂಜಿಲೆಂಡ್‌ ಆತಿಥೇಯ ಆಸೀಸ್ ವಿರುದ್ಧ 3ನೇ ಟೆಸ್ಟ್ ಪಂದ್ಯವನ್ನಾಡಿತ್ತು. ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಪಾಯಕಾರಿ ಬ್ಯಾಟ್ಸ್‌ಮನ್ ಮಾರ್ನಸ್ ಲ್ಯಾಬುಸ್ಚಾಗ್ನೆ ಕ್ಯಾಚ್‌ ಕೈಚೆಲ್ಲಿ ಕಿವೀಸ್ ಬೌಲರ್ ಟಾಡ್ ಆಸ್ಟಲ್ ಭಾರಿ ಪ್ರಮಾದ ಪ್ರಮಾದವೆಸಗಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.

142 ವರ್ಷಗಳಲ್ಲೇ ಮೊದಲು! ಇಂಗ್ಲೆಂಡ್ ಪರವಾಗಿ ವಿಶೇಷ ದಾಖಲೆ ಮಾಡಿದ ಬೆನ್ ಸ್ಟ್ರೋಕ್ಸ್142 ವರ್ಷಗಳಲ್ಲೇ ಮೊದಲು! ಇಂಗ್ಲೆಂಡ್ ಪರವಾಗಿ ವಿಶೇಷ ದಾಖಲೆ ಮಾಡಿದ ಬೆನ್ ಸ್ಟ್ರೋಕ್ಸ್

ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್‌ ಆಡುತ್ತಿದ್ದಾಗ 31.2ನೇ ಓವರ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದ ಟಾಡ್ ಆಸ್ಟಲ್‌ಗೆ ಮಾರ್ನಸ್ ಲ್ಯಾಬುಸ್ಚಾಗ್ನೆ ಕ್ಯಾಚ್ ಲಭಿಸುವುದರಲ್ಲಿತ್ತು. ಆಸ್ಟಲ್ ಕ್ಯಾಚ್‌ಗೆ ಯತ್ನಿಸಿದರಾದರೂ ಚೆಂಡು ನೆಲಕ್ಕುರುಳಿತು. ಆಗ ಲ್ಯಾಬುಸ್ಚಾಗ್ನೆ ಕೇವಲ 4 ರನ್ ಗಳಿಸಿದ್ದರು.

ಟಿ20 ವಿಶ್ವದಾಖಲೆ ನಿರ್ಮಿಸಲು ವಿರಾಟ್ ಕೊಹ್ಲಿಗೆ ಕೇವಲ 1 ರನ್‌ ಬೇಕು!ಟಿ20 ವಿಶ್ವದಾಖಲೆ ನಿರ್ಮಿಸಲು ವಿರಾಟ್ ಕೊಹ್ಲಿಗೆ ಕೇವಲ 1 ರನ್‌ ಬೇಕು!

ಆಸ್ಟಲ್ ಅವರಿಂದಾದ ಪ್ರಮಾದದಿಂದ ಜೀವದಾನ ಪಡೆದ ಲ್ಯಾಬುಸ್ಚಾಗ್ನೆ ಆ ಬಳಿಕ ಅರ್ಧ ಶತಕ (59 ರನ್‌) ಬಾರಿಸಿ 51.6ನೇ ಓವರ್‌ನಲ್ಲಿ ಮ್ಯಾಟ್‌ ಹೆನ್ರಿ ಎಸೆತಕ್ಕೆ ನ್ಯೂಜಿಲೆಂಡ್‌ ನಾಯಕ ಟಾಮ್ ಲ್ಯಾಥಮ್‌ಗೆ ಕ್ಯಾಚಿತ್ತರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸೀಸ್ ಓಪನರ್ ಡೇವಿಡ್ ವಾರ್ನರ್ ಶತಕದ (111 ರನ್) ಕೊಡುಗೆಯೂ ದೊರೆತಿದ್ದರಿಂದ ಪಂದ್ಯದಲ್ಲಿ ಆಸೀಸ್ 279 ರನ್ ಗೆಲುವು ದಾಖಲಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ, ಮಾರ್ನಸ್ ದ್ವಿಶತಕ (215 ರನ್), ಸ್ಟೀವ್ ಸ್ಮಿತ್ 63 ರನ್‌ನೊಂದಿಗೆ 150.1 ಓವರ್‌ಗೆ 454 ರನ್ ಮಾಡಿತ್ತು. ವಿಶೇಷವೆಂದರೆ ಆಸೀಸ್ ಆರಂಭಿಕ ಇನ್ನಿಂಗ್ಸ್‌ನಲ್ಲಿ ಮಾರ್ನಸ್ ವಿಕೆಟನ್ನು ಟಾಡ್ ಆಸ್ಟಲ್ ಅವರೇ ಕ್ಯಾಚ್‌ ಆ್ಯಂಡ್‌ ಬೌಲ್ಡ್ ಮಾಡಿದ್ದರು (ಸಂಕ್ಷಿಪ್ರ ಸ್ಕೋರ್‌: ಆಸ್ಟ್ರೇಲಿಯಾ 454+217 ಡಿ, ನ್ಯೂಜಿಲೆಂಡ್: 256+136).

Story first published: Monday, January 6, 2020, 16:36 [IST]
Other articles published on Jan 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X