ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ನೆಲದಲ್ಲಿ ಮುಂದಿನ ತಿಂಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಪುನಾರಂಭ

New Zealand Ready To Resume Cricket From Next Month

ನ್ಯೂಜಿಲೆಂಡ್‌ ಕ್ರಿಕೆಟ್ ಸುದೀರ್ಘ ಏಳು ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಪುನಾರಂಭಕ್ಕೆ ಸಕಲ ರೀತಿಯಲ್ಲೂ ಸಜ್ಜಾಗಿದೆ. ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನದ ವಿರುದ್ಧ ಟಿ20 ಹಾಗೂ ಟೆಸ್ಟ್ ಸರಣಿಯ ಮೂಲಕ ಮುಂದಿನ ತಿಂಗಳಿನಿಂದ ನ್ಯೂಜಿಲೆಂಡ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪುನಾರಂಭಗೊಳ್ಳಲಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಮಂಗಳವಾರ ಘೋಷಿಸಿದೆ.

2020ರ ತವರಿನ ಸರಣಿಯ ಪರಿಷ್ಕೃತ ಪಟ್ಟಿಯನ್ನು ನ್ಯೂಜಿಲೆಂಡ್ ಕ್ರಿಕೆಟ್ ಬಿಡುಗಡೆ ಮಾಡಿದೆ. ವೆಸ್ಟ್ ಇಂಡೀಸ್ ವಿರುದ್ಧ ನವೆಂಬರ್ 27 ರಿಂದ 3 ಟಿ20 ಹಾಗೂ 2 ಟೆಸ್ಟ್ ಸರಣಿಯ ಮೂಲಕ ಕಿವೀಸ್ ನೆಲದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರು ಚಾಲನೆ ದೊರೆಯಲಿದೆ.

'2020ರ ಐಪಿಎಲ್‌ನ ಅತ್ಯುತ್ತಮ ಪ್ರದರ್ಶನ': ಆರ್‌ಸಿಬಿ ಬೌಲರ್ ಹೊಗಳಿದ ಶಾಸ್ತ್ರಿ'2020ರ ಐಪಿಎಲ್‌ನ ಅತ್ಯುತ್ತಮ ಪ್ರದರ್ಶನ': ಆರ್‌ಸಿಬಿ ಬೌಲರ್ ಹೊಗಳಿದ ಶಾಸ್ತ್ರಿ

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಮೂರು ಟಿ20 ಪಂದ್ಯಗಳು 27, 29 ಹಾಗೂ 30 ರಂದು ನಡೆಯಲಿದ್ದು ಆಕ್ಲೆಂಡ್ ಹಾಗೂ ಟೌರಂಗದ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿ ಹ್ಯಾಮಿಲ್ಟನ್‌ನ ಸೆಡಾನ್ ಪಾರ್ಕ್ ಹಾಗೂ ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ನ್ಯೂಜಿಲೆಂಡ್ ಬಳಿಕ ಪಾಕಿಸ್ಥಾನದ ವಿರುದ್ಧ 3 ಟಿ20 ಹಾಗೂ 2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಎರಡನೇ ಟೆಸ್ಟ್ ಮೌಂಟ್ ಮೌಂಗನ್ಯೂನಲ್ಲಿ ಡಿಸೆಂಬರ್ 26ರ ಬಾಕ್ಸಿಂಗ್ ಡೇಯಂದು ನಡೆಯಲಿದೆ. ಬಳಿಕ ಆಸ್ಟ್ರೇಲಿಯಾದಲ್ಲಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ನಡೆಯಲಿರುವ 5 ಟಿ20 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ.

ಕೊಹ್ಲಿ ಕಳಪೆ ಪ್ರದರ್ಶನದಲ್ಲೂ ಆರ್‌ಸಿಬಿ ಖುಷಿ ಪಡುವ ಸಂಗತಿ ಹೇಳಿದ ಆಕಾಶ್ ಚೋಪ್ರಕೊಹ್ಲಿ ಕಳಪೆ ಪ್ರದರ್ಶನದಲ್ಲೂ ಆರ್‌ಸಿಬಿ ಖುಷಿ ಪಡುವ ಸಂಗತಿ ಹೇಳಿದ ಆಕಾಶ್ ಚೋಪ್ರ

ಆಸ್ಟ್ರೇಲಿಯಾ ಸರಣಿಯ ಬಳಿಕ ಬಾಂಗ್ಲಾದೇಶದ ವಿರುದ್ಧ ಸರಣಿಯನ್ನು ಆಯೋಜನೆ ಮಾಡಲಿದೆ ನ್ಯೂಜಿಲೆಂಡ್. ಬಾಂಗ್ಲಾದೇಶದ ವಿರುದ್ಧ 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಮಾರ್ಚ್ 21 ರಿಂದ ಏಕದಿನ ಸರಣಿ ಆಯೋಜನೆಯಾಗಲಿದ್ದು ಒಂದು ವರ್ಷದ ಬಳಿಕ ಏಕದಿನ ಸರಣಿಯನ್ನು ನ್ಯೂಜಿಲೆಂಡ್ ಆಡಲಿದೆ.

Story first published: Tuesday, September 29, 2020, 17:06 [IST]
Other articles published on Sep 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X