ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್‌ನ ಕ್ರಿಕೆಟ್ ಪೇಜ್‌ನಲ್ಲಿ ಭಾರತಕ್ಕೆ ಅವಮಾನ, ಪೋಸ್ಟ್‌ಗೆ ಕಿವೀಸ್ ಕ್ರಿಕೆಟಿಗರಿಂದ ಲೈಕ್ಸ್!

New Zealand’s Cricket Page Takes A Dig At India, Three Kiwi players Liked That Post in Social media

ಬೆಂಗಳೂರು: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಅಮಾನತಾದ ಬಳಿಕ ಕ್ರಿಕೆಟ್ ಪ್ರೇಮಿಗಳ ಚಿತ್ತ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದತ್ತ ಹೊರಳಿದೆ. ಸೌತಾಂಪ್ಟನ್‌ನಲ್ಲಿ ನಡೆಯಲಿರುವ ಕುತೂಹಲಕಾರಿ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿವೆ. ಜೂನ್ 18-22ರ ವರೆಗೆ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ನಡೆಯಲಿದೆ. ಸದ್ಯ ಚಾಂಪಿಯನ್‌ಶಿಪ್‌ನ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡೂ ತಂಡಗಳೂ ಅಗ್ರ ಎರಡರಲ್ಲಿ ಸ್ಥಾನ ಪಡೆದುಕೊಂಡಿವೆ.

ಶ್ರೀಲಂಕಾ ಪ್ರವಾಸಕ್ಕೆ ದ್ರಾವಿಡ್ ಕೋಚ್: ಹಕ್ ಹೇಳಿದ್ದೇನು ಗೊತ್ತಾ?!ಶ್ರೀಲಂಕಾ ಪ್ರವಾಸಕ್ಕೆ ದ್ರಾವಿಡ್ ಕೋಚ್: ಹಕ್ ಹೇಳಿದ್ದೇನು ಗೊತ್ತಾ?!

ಕಳೆದ ಜನವರಿಯಲ್ಲಿ ಭಾರತದಲ್ಲಿ ನಡೆದಿದ್ದ ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಭಾರತ ಸೋಲಿಸಿದ ಬಳಿಕ ನ್ಯೂಜಿಲೆಂಡ್‌ ತಂಡ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಪ್ರವೇಶಿಸಿತ್ತು. ಆ ಬಳಿಕ ನಡೆದ ಭಾರತ-ಇಂಗ್ಲೆಂಡ್ ಟೆಸ್ಟ್‌ ಸರಣಿಯಲ್ಲಿ ಭಾರತ ಗೆದ್ದಿದ್ದರಿಂದ ಬ್ಲ್ಯಾಕ್‌ಕ್ಯಾಪ್ಸ್‌ಗೆ ಎದುರಾಳಿಯಾಗಿ ಭಾರತ ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿತ್ತು.

ಕ್ರಿಕೆಟ್ ಪೇಜ್‌ನಿಂದ ಭಾರತಕ್ಕೆ ಅವಮಾನ

ಕ್ರಿಕೆಟ್ ಪೇಜ್‌ನಿಂದ ಭಾರತಕ್ಕೆ ಅವಮಾನ

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಭಾರತ-ನ್ಯೂಜಿಲೆಂಡ್ ಸಜ್ಜಾಗುತ್ತಿರುವಾಗಲೇ ನ್ಯೂಜಿಲೆಂಡ್‌ನ ಕ್ರೀಡಾ ಮನರಂಜನೆಯ ಸಾಮಾಜಿಕ ಜಾಲತಾಣದ ಪುಟವೊಂದು ಭಾರತಕ್ಕೆ ಅವಮಾನವಾಗುವಂಥಹ ಪೋಸ್ಟ್‌ ಹಾಕಿಕೊಂಡಿದೆ. ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಮತ್ತು ಭಾರತದ ನಾಯಕ ವಿರಾಟ್ ಕೊಹ್ಲಿ ಮುಖಾಮುಖಿಯಾಗಿರುವ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದ 'theaccnz' ಹೆಸರಿನ ನ್ಯೂಜಿಲೆಂಡ್‌ನ ವೆರಿಫೈಡ್ ಪುಟವೊಂದು ಚಿತ್ರದ ಕೆಳಗೆ 'ಭಾರತದ ಪಾಲಿಗೆ ಕೆಟ್ಟ ನ್ಯೂಸ್ ಇದು.. ನೀವು ಲಾರ್ಡ್ಸ್‌ನಲ್ಲಿ ಕೊಳಕಾದ ಬೌಲಿಂಗ್ ಪಿಚ್ ಅನ್ನು ಸೃಷ್ಠಿಸಲು ಸಾಧ್ಯವಿಲ್ಲ' ಎಂದು ಬರೆದುಕೊಂಡಿತ್ತು.

ಭಾರತಕ್ಕೆ ಯಾಕೀ ಅವಮಾನ?

ಭಾರತಕ್ಕೆ ಯಾಕೀ ಅವಮಾನ?

ಭಾರತಕ್ಕೆ ಇಂಗ್ಲೆಂಡ್ ತಂಡ ಪ್ರವಾಸ ಬಂದಿದ್ದಾಗ ಆಂಗ್ಲ ತಂಡ ಭಾರತದೆದುರು ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿತ್ತು. ಮೊದಲ ಎರಡು ಪಂದ್ಯಗಳು ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದರೆ ಕೊನೆಯ ಎರಡು ಟೆಸ್ಟ್‌ ಪಂದ್ಯಗಳು ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿತ್ತು. ವಿಶೇಷವೆಂದರೆ ಎರಡೂ ಪಿಚ್‌ಗಳು ಸ್ಪಿನ್ ಬೌಲಿಂಗ್‌ಗೆ ಅನುಕೂಲಕರ ಪಿಚ್ ಆಗಿತ್ತು. ಅಂದರೆ ಚೆಂಡು ತಿರುಗುವ ಪಿಚ್ ಇದಾಗಿತ್ತು. ಬ್ಯಾಟ್ಸ್‌ಮನ್‌ಗಳು ರನ್‌ಗಾಗಿ ಹೆಣಗಾಡಿದ್ದರು. ಅಲ್ಲದೆ 3 ಪಂದ್ಯಗಳು 5 ದಿನಗಳವರೆಗೆ ನಡೆಯದೆ ಮುಕ್ತಾಯವಾಗಿತ್ತು. ಹೀಗಾಗಿ ಇದು ಕೆಟ್ಟ ಪಿಚ್ ಎಂಬ ಮಾತುಗಳು ಎಲ್ಲೆಡೆ ವ್ಯಕ್ತವಾಗಿತ್ತು. ಇನ್ನೂ ಕೆಲವರು ಪಿಚ್‌ ಅನ್ನು ಸಮರ್ಥಿಸಿಕೊಂಡಿದ್ದರು.

ಕಿವೀ ಕ್ರಿಕೆಟರ್ಸ್‌ನಿಂದ ಲೈಕ್ಸ್!

ಕಿವೀ ಕ್ರಿಕೆಟರ್ಸ್‌ನಿಂದ ಲೈಕ್ಸ್!

ಭಾರತಕ್ಕೆ ಗುದ್ದು ಕೊಡುವ ರೀತಿಯಲ್ಲಿ ನ್ಯೂಜಿಲೆಂಡ್‌ನ ಕ್ರೀಡಾಪುಟ ಮಾಡಿರುವ ಈ ಇನ್‌ಸ್ಟಾಗ್ರಾಮ್‌ ಪೋಸ್ಟ್‌ಗೆ ನ್ಯೂಜಿಲೆಂಡ್ ರಾಷ್ಟ್ರೀಯ ತಂಡದ ಮೂವರು ಆಟಗಾರರು ಲೈಕ್ಸ್ ಕೊಟ್ಟಿದ್ದರು. ಆ ಮೂವರು ಆಟಗಾರರೆಂದರೆ ಟ್ರೆಂಟ್ ಬೌಲ್ಟ್, ಟಾಮ್ ಲ್ಯಾಥಮ್ ಮತ್ತು ಟಿಮ್ ಸೌಥೀ. ಇನ್‌ಸ್ಟಾ ಪೋಸ್ಟ್‌ನಲ್ಲಿ ಲಾರ್ಡ್ಸ್ ಮೈದಾನವನ್ನು ಉಲ್ಲೇಖಿಸಿರುವುದಕ್ಕೆ ಕಾರಣವಿದೆ. ಆರಂಭದಲ್ಲಿ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯವನ್ನು ಲಾರ್ಡ್ಸ್ ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕೊನೇ ಘಳಿಗೆಯಲ್ಲಿ, ಕೋವಿಡ್ ಕಾರಣ ಹೆಚ್ಚಿನ ಸೌಲಭ್ಯವಿರುವ ಸೌತಾಂಪ್ಟನ್‌ನ ಹ್ಯಾಮ್‌ಶೈರ್ ಬೌಲ್‌ಗೆ ಪಂದ್ಯ ಸ್ಥಳಾಂತರಿಸಲಾಗಿತ್ತು.

Story first published: Saturday, May 22, 2021, 22:00 [IST]
Other articles published on May 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X