ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ನೂತನ ಅಧ್ಯಕ್ಷರಾಗಿ ಬಾರ್ಕ್ಲೇ ಆಯ್ಕೆ

New Zealands Greg Barclay elected as new ICC chairman

ವೆಲ್ಲಿಂಗ್ಟನ್: 2012ರಿಂದ ನ್ಯೂಜಿಲೆಂಡ್ ಕ್ರಿಕೆಟ್‌ನ ವಾಣಿಜ್ಯ ವಕೀಲ ಮತ್ತು ನಿರ್ದೇಶಕರಾಗಿದ್ದ ಗ್ರೆಗ್ ಬಾರ್ಕ್ಲೇ ಅವರು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ನ ನೂತರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎರಡನೇ ಸ್ವತಂತ್ರ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗ್ರೆಗ್, ಭಾರತದ ಶಶಾಂಕ್ ಮನೋಹರ್ ಸ್ಥಾನ ತುಂಬಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಭಾರತ: ಕೆಎಲ್ ರಾಹುಲ್ ತಂಡ ಸೋಲಿಸಿದ ಕೊಹ್ಲಿ ಪಡೆಆಸ್ಟ್ರೇಲಿಯಾದಲ್ಲಿ ಭಾರತ: ಕೆಎಲ್ ರಾಹುಲ್ ತಂಡ ಸೋಲಿಸಿದ ಕೊಹ್ಲಿ ಪಡೆ

2015ರ ಐಸಿಸಿ ಪುರುಷರ ವಿಶ್ವಕಪ್‌ ವೇಳೆ ಗ್ರೆಗ್ ಬಾರ್ಕ್ಲೇ ನಿರ್ದೇಶಕರಾಗಿದ್ದರು. ನಾರ್ತರ್ನ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಶನ್‌ನ ಬೋರ್ಡ್ ಸದಸ್ಯ ಮತ್ತು ಅಧ್ಯಕ್ಷರು ಕೂಡ ಆಗಿದ್ದರು. ಅಲ್ಲದೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ಬೇರೆ ಬೇರೆ ಕಂಪನಿಗಳ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಅನುಭವವೂ ಗ್ರೆಗ್‌ಗಿದೆ.

'ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಗೌರವದ ಸಂಗತಿ. ನನ್ನ ಸಹವರ್ತಿ ಐಸಿಸಿ ನಿರ್ದೇಶಕರು ನೀಡಿದ ಬೆಂಬಲಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕ್ರೀಡೆಯನ್ನು ಮುನ್ನಡೆಸಲು ಮತ್ತು ಜಾಗತಿಕ ಸಾಂಕ್ರಾಮಿಕದಿಂದ ಬಲವಾದ ಸ್ಥಾನದಲ್ಲಿ ಕ್ರೀಡೆ ಹೊರಹೊಮ್ಮಲು, ಬೆಳವಣಿಗೆಗೆ ಸಜ್ಜಾಗಲು ನಾವು ಒಟ್ಟಾಗಿ ಸೇರಬಹುದೆಂದು ನಾನು ಭಾವಿಸುತ್ತೇನೆ,' ಎಂದು ಬಾರ್ಕ್ಲೇ ಹೇಳಿದ್ದಾರೆ.

ಕೊಹ್ಲಿಯ ಗೈರಲ್ಲಿ ಇದನ್ನು ಪ್ರಯತ್ನಿಸಲೇ ಬೇಡಿ: ರಹಾನೆಗೆ ಸಲಹೆ ನೀಡಿದ ಬುಕನಾನ್ಕೊಹ್ಲಿಯ ಗೈರಲ್ಲಿ ಇದನ್ನು ಪ್ರಯತ್ನಿಸಲೇ ಬೇಡಿ: ರಹಾನೆಗೆ ಸಲಹೆ ನೀಡಿದ ಬುಕನಾನ್

'ನಮ್ಮ ಪ್ರಮುಖ ಮಾರ್ಕೆಟ್‌ಗಳಲ್ಲಿ ಆಟವನ್ನು ಬಲಪಡಿಸಲು ಮತ್ತು ಅದನ್ನು ಮೀರಿ ಬೆಳೆಯಲು ನಮ್ಮ ಸದಸ್ಯರ ಸಹಭಾಗಿತ್ವದಲ್ಲಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ. ಪ್ರಪಂಚದ ಹೆಚ್ಚಿನವರು ಕ್ರಿಕೆಟ್ ಅನ್ನು ಆನಂದಿಸಬಹುದು ಎಂದು ಖಚಿತಪಡಿಸಿಕೊಳ್ಳುತ್ತೇನೆ. ನಾನು ಆಟದ ಪಾಲಕನಾಗಿ ನನ್ನ ಸ್ಥಾನವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತೇನೆ ಮತ್ತು ನಮ್ಮ ಕ್ರೀಡೆಯ ಸುಸ್ಥಿರ ಭವಿಷ್ಯವನ್ನು ಸೃಷ್ಟಿಸಲು ಎಲ್ಲಾ 104 ಐಸಿಸಿ ಸದಸ್ಯರ ಪರವಾಗಿ ಕೆಲಸ ಮಾಡಲು ನಾನು ಬದ್ಧನಾಗಿರುತ್ತೇನೆ,' ಎಂದು ಅಧಿಕಾರ ಸ್ವೀಕರಿಸಿದ ಬಳಿಕ ಬಾರ್ಕ್ಲೇ ನುಡಿದಿದ್ದಾರೆ.

Story first published: Wednesday, November 25, 2020, 9:57 [IST]
Other articles published on Nov 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X