ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್‌ನ ಕೈಲ್ ಜೇಮಿಸನ್‌ಗೆ 15 ಶೇ. ದಂಡ ವಿಧಿಸಿದ ಐಸಿಸಿ

New Zealands Kyle Jamieson fined 15 per cent match fees by ICC

ಕ್ರೈಸ್ಟ್‌ಚರ್ಚ್: ನ್ಯೂಜಿಲೆಂಡ್‌ನ ವೇಗಿ, ಆಲ್ ರೌಂಡರ್ ಕೈಲ್ ಜೇಮಿಸನ್‌ಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪಂದ್ಯದ ಸಂಭಾವನೆಯ ಶೇ. 15ರಷ್ಟು ದಂಡ ವಿಧಿಸಿದೆ. ಕ್ರೈಸ್ಟ್‌ ಚರ್ಚ್‌ನಲ್ಲಿ ಮಾರ್ಚ್ 23ರಂದು ನಡೆದಿದ್ದ ನ್ಯೂಜಿಲೆಂಡ್-ಬಾಂಗ್ಲಾದೇಶ ದ್ವಿತೀಯ ಏಕದಿನ ಪಂದ್ಯದಲ್ಲಿ ಎಲ್ಲೆ ಮೀರಿ ವರ್ತಿಸಿದ್ದಕ್ಕಾಗಿ ಜೇಮಿಸನ್ ಐಸಿಸಿ ಶಿಕ್ಷೆಗೆ ಗುರಿಯಾಗಿದ್ದಾರೆ.

ಕುತೂಹಲಕಾರಿ ಟಿ20ಐ ಸರಣಿಗೆ ಸಾಕ್ಷಿಯಾಗಲಿವೆ ಭಾರತ-ಪಾಕಿಸ್ತಾನ!ಕುತೂಹಲಕಾರಿ ಟಿ20ಐ ಸರಣಿಗೆ ಸಾಕ್ಷಿಯಾಗಲಿವೆ ಭಾರತ-ಪಾಕಿಸ್ತಾನ!

ಬಾಂಗ್ಲಾದೇಶದ ಇನ್ನಿಂಗ್ಸ್‌ ವೇಳೆ ಕೈಲ್ ಜೇಮಿಸನ್ ಓವರ್‌ ಮಾಡುತ್ತಿದ್ದಾಗ ಅವರಿಗೆ ತಮೀಮ್ ಇಕ್ಬಾಲ್ ಅವರ ಕ್ಯಾಚ್ ದೊರೆಯುವುದರಲ್ಲಿತ್ತು. ಅದನ್ನು ಪರಿಶೀಲಿಸಿದ ಟಿವಿ ಅಂಪೈರ್, ಜೇಮಿಸನ್ ಕ್ಯಾಚ್ ಸರಿಯಾಗಿ ಪೂರೈಸಲಿಲ್ಲ ಎಂದು ನಾಟ್‌ಔಟ್ ತೀರ್ಪು ನೀಡಿದ್ದರು.

ಅಂಪೈರ್ ತೀರ್ಪು ತನ್ನ ಪರವಾಗಿ ಬಾರದಿದ್ದಾಗ ಸಿಟ್ಟಾದ ಜೇಮಿಸನ್ ಸಿಟ್ಟನ್ನು ಮೈದಾನದಲ್ಲೇ ತೋರಿಕೊಂಡಿದ್ದರು. ಹೀಗಾಗಿ ಕೈಲ್‌ಗೆ ದಂಡ ವಿಧಿಸಲಾಗಿದೆ. ಜೇಮಿಸನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಜೇಮಿಸನ್ ರಾಯಲ್ ಚಾಲೆಂಜರ್ಸ್ ಪರ ಆಡುತ್ತಿದ್ದಾರೆ.

ಐಪಿಎಲ್ ಫೈನಲ್‌ಗಾಗಿ ನ್ಯೂಜಿಲೆಂಡ್ ಟೆಸ್ಟ್ ತ್ಯಜಿಸಲು ಸಿದ್ದ ಎಂದ ಇಂಗ್ಲೆಂಡ್ ಆಲ್‌ರೌಂಡರ್ಐಪಿಎಲ್ ಫೈನಲ್‌ಗಾಗಿ ನ್ಯೂಜಿಲೆಂಡ್ ಟೆಸ್ಟ್ ತ್ಯಜಿಸಲು ಸಿದ್ದ ಎಂದ ಇಂಗ್ಲೆಂಡ್ ಆಲ್‌ರೌಂಡರ್

26ರ ಹರೆಯದ ಕೈಲ್‌ ಅವರ ನಡತೆಯ ಪಟ್ಟಿಗೆ ಒಂದು ಡೀಮೆರಿಟ್ ಪಾಯಿಂಟ್ ನೀಡಲಾಗಿದೆ. ಪಂದ್ಯದಲ್ಲಿ 10 ಓವರ್‌ ಎಸೆದಿದ್ದ ಜೇಮಿಸನ್ 36 ರನ್‌ಗೆ 1 ವಿಕೆಟ್ ಪಡೆದಿದ್ದರು. ನ್ಯೂಜಿಲೆಂಡ್ 5 ವಿಕೆಟ್‌ಗಳ ಜಯದೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0ಯ ಮುನ್ನಡೆ ಸಾಧಿಸಿದೆ.

Story first published: Thursday, March 25, 2021, 15:37 [IST]
Other articles published on Mar 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X