ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಂಡ ನ್ಯೂಜಿಲೆಂಡ್: ಸೆಮಿಫೈನಲ್‌ನ 5 ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ

New Zealand’s record chase over England and 5 other interesting facts: Explained Here

ದುಬೈನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ 2021ರ ಮೊದಲ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸಿದ ನ್ಯೂಜಿಲೆಂಡ್ ಮೊಟ್ಟ ಮೊದಲ ಬಾರಿಗೆ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಇದಷ್ಟೇ ಅಲ್ಲದೆ ಕೇನ್ ವಿಲಿಯಮ್ಸನ್ ಟೀಮ್ 2019ರ ವಿಶ್ವಕಪ್‌ ಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡಿದೆ.

2019ರ ವಿಶ್ವಕಪ್ ಫೈನಲ್‌ನಲ್ಲಿ ಪಂದ್ಯವು ವಿವಾದದಲ್ಲಿ ಅಂತ್ಯಗೊಂಡಿತ್ತು. ಟೈ ಆದ ಬಳಿಕ ಸೂಪರ್‌ ಓವರ್‌ನಲ್ಲಿ ಸಮಗೊಂಡ್ರೂ, ಬೌಂಡರಿ ಮೇಲೆ ಇಂಗ್ಲೆಂಡ್ ಗೆಲುವನ್ನ ನೀಡಲಾಗಿತ್ತು. ಇದೀಗ ನ್ಯೂಜಿಲೆಂಡ್ ಆ ಕಹಿ ಘಟನೆಗಳನ್ನ ಮರೆತು ಇಂಗ್ಲೆಂಡ್ ವಿರುದ್ಧ ಗೆಲುವಿನ ನಗಾರಿ ಬಾರಿಸಿದೆ.

ಟಿ20 ಕ್ರಿಕೆಟ್‌ನ ನಂಬರ್ ಒನ್ ತಂಡವಾದ ನ್ಯೂಜಿಲೆಂಡ್ 2019ರಲ್ಲಿ ಅನುಭವಿಸದ ಆಘಾತದ ಸೋಲಿಗಿಂತ ಸುಲಭವಾಗಿ ಇಂಗ್ಲೆಂಡ್ ವಿರುದ್ಧ ಗೆಲುವನ್ನ ದಾಖಲಿಸಿತು. ಈ ದಾಖಲೆಯ ಗೆಲುವಿನ ಜೊತೆಗೆ ಮೊದಲ ಸೆಮಿಫೈನಲ್‌ನಲ್ಲಿ ಐದು ಕುತೂಹಲಕಾರಿ ಅಂಶಗಳನ್ನು ನೀವು ಮುಂದೆ ನೋಡಬಹುದು.

ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ದಾಖಲೆಯ ಹೆಜ್ಜೆ

ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ದಾಖಲೆಯ ಹೆಜ್ಜೆ

ಕ್ರಿಕೆಟ್ ಇತಿಹಾಸದಲ್ಲಿ ನ್ಯೂಜಿಲೆಂಡ್ ಇದುವರೆಗೂ ಆರು ಬಾರಿ ಐಸಿಸಿ ಟೂರ್ನಮೆಂಟ್ ಫೈನಲ್ ಪ್ರವೇಶಿಸಿದೆ. ಇದರಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವದಲ್ಲೇ ಮೂರು ಬಾರಿ ಕಿವೀಸ್ ಫೈನಲ್ ಎಂಟ್ರಿ ಕೊಟ್ಟಿರುವುದು ದಾಖಲೆಯಾಗಿದೆ. 2019ರ ವಿಶ್ವಕಪ್ ಫೈನಲ್‌ನಲ್ಲಿ ಸೋಲಿನ ಬಳಿಕ ಇದೇ ವರ್ಷ ನಡೆದ ಐಸಿಸಿ ವಿಶ್ವಕಪ್ ಟೆಸ್ಟ್‌ ಚಾಂಪಿಯನ್‌ಶಿಪ್‌(WTC) ಫೈನಲ್‌ನಲ್ಲಿ ಭಾರತವನ್ನು ಮಣಿಸಿ ನ್ಯೂಜಿಲೆಂಡ್ ಗೆಲುವಿಗೆ ಕಾರಣರಾದ್ರು. ಇದೀಗ ನ್ಯೂಜಿಲೆಂಡ್ ತಂಡವನ್ನ ಮೊದಲ ಬಾರಿಗೆ ಟಿ20 ವಿಶ್ವಕಪ್ ಫೈನಲ್‌ಗೆ ಮುನ್ನೆಡೆಸಿದ ಕೀರ್ತಿ ಅವರದ್ದಾಗಿದೆ.

ನ್ಯೂಜಿಲೆಂಡ್‌ನ ಅದ್ಭುತ ಚೇಸ್‌

ನ್ಯೂಜಿಲೆಂಡ್‌ನ ಅದ್ಭುತ ಚೇಸ್‌

ನ್ಯೂಜಿಲೆಂಡ್ ಇದುವರೆಗೂ ಟಿ20 ವಿಶ್ವಕಪ್‌ನಲ್ಲಿ ಇಷ್ಟು ದೊಡ್ಡ ಮಟ್ಟಿನ ರನ್‌ ಅನ್ನು ಚೇಸ್ ಮಾಡಿದ್ದ ಉದಾಹರಣೆಯೇ ಇರಲಿಲ್ಲ. 2014ರ ಟಿ20 ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್‌ ವಿರುದ್ಧ 140ರನ್‌ಗಳನ್ನ ಚೇಸ್‌ ಮಾಡಿದ್ದೇ ಹೆಚ್ಚು. ಆದರೆ ಈ ಬಾರಿ ಇಂಗ್ಲೆಂಡ್ ವಿರುದ್ಧ 167ರನ್‌ಗಳನ್ನ ಸುಲಭವಾಗಿ ಹಿಂದಿಕ್ಕಿತು. ಅದೂ ಕೂಡ ಕೊನೆಯ ನಾಲ್ಕು ಓವರ್‌ಗಳಿಗೆ 57ರನ್‌ಗಳ ಅವಶ್ಯಕತೆಯಿತ್ತು. ಆದರೆ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ನ್ಯೂಜಿಲೆಂಡ್ ಗೆಲುವಿನ ಹಾದಿಯನ್ನ ತುಳಿಯಿತು.

17ನೇ ಓವರ್‌ನಲ್ಲಿ ಕ್ರಿಸ್ ಜೊರ್ಡಾನ್ ಬೌಲಿಂಗ್‌ನಲ್ಲಿ 23ರನ್ , 18ನೇ ಓವರ್‌ನಲ್ಲಿ ಆದಿಲ್ ರಶೀದ್‌ಗೆ 14ರನ್ ಹಾಗೂ 19ನೇ ಓವರ್‌ನಲ್ಲಿ ಕ್ರಿಸ್ ವೋಕ್ಸ್‌ ದಾಳಿಗೆ 20 ರನ್‌ ಬಾರಿಸಲಾಯ್ತು. ಈ ಮೂಲಕ ಕೊನೆಯ ನಾಲ್ಕು ಓವರ್‌ನಲ್ಲಿ ಅತಿ ಹೆಚ್ಚು ರನ್‌ ಚೇಸ್ ಮಾಡಿ ಟೀಮ್ ಎಂಬ ಹೆಗ್ಗಳಿಕೆಗೂ ನ್ಯೂಜಿಲೆಂಡ್ ಪಾತ್ರವಾಗಿದೆ.

15 ಓವರ್‌ಗಳಲ್ಲಿ ಒಂದೂ ಸಿಕ್ಸರ್ ಬಾರಿಸಲಿಲ್ಲ ಇಂಗ್ಲೆಂಡ್!

15 ಓವರ್‌ಗಳಲ್ಲಿ ಒಂದೂ ಸಿಕ್ಸರ್ ಬಾರಿಸಲಿಲ್ಲ ಇಂಗ್ಲೆಂಡ್!

ಪಂದ್ಯ ಮುಗಿದ ಬಳಿಕ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ತಿಳಿಸಿರುವಂತೆ ತಂಡದಲ್ಲಿ ಸಿಕ್ಸರ್‌ಗಳನ್ನ ಬಾರಿಸುವ ತಾಕತ್ತು ಹೆಚ್ಚಿದ್ದು, ಸೆಮಿಫೈನಲ್‌ನಲ್ಲಿ ಕೇವಲ ನಾಲ್ಕು ಸಿಕ್ಸರ್‌ಗಳಲ್ಲಿ ಆಂಗ್ಲರು ಬಾರಿಸಿದ್ರು. ಅದ್ರಲ್ಲೂ ಮೊದಲ ಸಿಕ್ಸರ್ ಬಂದಿದ್ದು 16ನೇ ಓವರ್‌ನಲ್ಲಿ ಇದು ಕಳೆದ ಏಳುವರೆ ವರ್ಷದಲ್ಲಿ ಮೊದಲ ಬಾರಿಗೆ ಸಂಭವಿಸಿದೆ. ಮೊದಲ ಹದಿನೈದು ಓವರ್‌ಗಳಲ್ಲಿ ಒಂದು ಸಿಕ್ಸರ್ ಸಿಡಿಸುವಲ್ಲಿ ವಿಫಲಗೊಂಡಿದೆ.

ಮೊದಲ ಬಾರಿಗೆ ಸೋಲು, ಮೊದಲ ಬಾರಿಗೆ ಗೆಲುವು!

ಮೊದಲ ಬಾರಿಗೆ ಸೋಲು, ಮೊದಲ ಬಾರಿಗೆ ಗೆಲುವು!

ಟಿ20 ವಿಶ್ವಕಪ್ ಇತಿಹಾಸದಲ್ಲಿ ಸೆಮಿಫೈನಲ್‌ನಲ್ಲಿ ಮೊದಲ ಬಾರಿಗೆ ನ್ಯೂಜಿಲೆಂಡ್ ಗೆಲುವು ಸಾಧಿಸಿದ್ರೆ, ಇಂಗ್ಲೆಂಡ್ ಮೊದಲ ಬಾರಿಗೆ ಸೋಲನ್ನ ಕಂಡಿದೆ.

ಇಂಗ್ಲೆಂಡ್ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಈ ಮೊದಲು 2010ರಲ್ಲಿ ಶ್ರೀಲಂಕಾ ವಿರುದ್ಧ, 2016ರಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲುವನ್ನ ಸಾಧಿಸಿತ್ತು. ಆದರೆ ಈಗ 2021ರಲ್ಲಿ ಮೊದಲ ಬಾರಿಗೆ ಕಿವೀಸ್ ವಿರುದ್ಧ ಪರಾಭವಗೊಂಡಿದೆ.

ಇನ್ನು ನ್ಯೂಜಿಲೆಂಡ್ 2007ರಲ್ಲಿ ಪಾಕಿಸ್ತಾನ ವಿರುದ್ಧ, 2016 ರಲ್ಲಿ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಸೋಲನ್ನ ಕಂಡಿತ್ತು. ಆದರೆ ಈಗ 2021ರಲ್ಲಿ ಇಂಗ್ಲೆಂಡ್‌ ಅನ್ನು ಸೋಲಿಸಿದೆ.

ಪವರ್‌ಪ್ಲೇಗಳಲ್ಲಿ ಇಂಗ್ಲೆಂಡ್ -ನ್ಯೂಜಿಲೆಂಡ್ ಪವರ್

ಪವರ್‌ಪ್ಲೇಗಳಲ್ಲಿ ಇಂಗ್ಲೆಂಡ್ -ನ್ಯೂಜಿಲೆಂಡ್ ಪವರ್

ನ್ಯೂಜಿಲೆಂಡ್ ಮೊದಲ ಆರು ಓವರ್‌ಗಳ ಪವರ್‌ಪ್ಲೇನಲ್ಲಿ ಟೂರ್ನಮೆಂಟ್‌ನಲ್ಲಿ ಅದ್ಭುತ ರೆಕಾರ್ಡ್ ಹೊಂದಿದೆ. ಓವರ್‌ಗೆ 5.89ರಂತೆ ಸರಾಸರಿ 26.5ರನ್ ಬಾರಿಸಿದೆ. ಇದನ್ನ ಹೊರತುಪಡಿಸಿ ಇಂಗ್ಲೆಂಡ್ ಕೂಡ ಉತ್ತಮ ದಾಖಲೆಯನ್ನ ಹೊಂದಿದ್ದು, ಓವರ್‌ಗೆ 5.42ರಂತೆ ಸರಾಸರಿ 12.2 ರನ್ ಬಾರಿಸಿದೆ.

ಈತನ ಎಂಟ್ರಿಯಿಂದ ಟೀಂ ಇಂಡಿಯಾದಲ್ಲಿ ಹಾರ್ದಿಕ್ ಭವಿಷ್ಯ ಅತಂತ್ರ | Oneindia Kannada
ನ್ಯೂಜಿಲೆಂಡ್ ವಿರುದ್ಧ ಡೇವಿಡ್ ಮಲನ್ ಭರ್ಜರಿ ಆಟ

ನ್ಯೂಜಿಲೆಂಡ್ ವಿರುದ್ಧ ಡೇವಿಡ್ ಮಲನ್ ಭರ್ಜರಿ ಆಟ

ಐಸಿಸಿ ಟಿ20 ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಇಂಗ್ಲೆಂಡ್‌ನ ಡೇವಿಡ್ ಮಲನ್ ನ್ಯೂಜಿಲೆಂಡ್ ಬೌಲಿಂಗ್‌ ಅನ್ನು ಸುಲಭವಾಗಿ ಎದುರಿಸುವರು. ನ್ಯೂಜಿಲೆಂಡ್ ವಿರುದ್ಧ 30 ಎಸೆತಗಳಲ್ಲಿ 41ರನ್ ಗಳಿಸಿದ್ರು.

ನ್ಯೂಜಿಲೆಂಡ್ ವಿರುದ್ಧ ಟಿ20 ಪಂದ್ಯಗಲ್ಲಿ ಮಲನ್ ಸ್ಕೋರ್ ಹೀಗಿದೆ: 41(40), ಅಜೇಯ 103 (51), 55 (34), 39 (29), 11 (13), 53 (36), 59 (40).

Story first published: Thursday, November 11, 2021, 12:38 [IST]
Other articles published on Nov 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X