ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆವತ್ತು ನ್ಯೂಜಿಲೆಂಡ್ ತಂಡ ಟೆಸ್ಟ್ ಇತಿಹಾಸದ ಕೆಟ್ಟ ದಾಖಲೆ ನಿರ್ಮಿಸಿತ್ತು!

New Zealand scored the lowest Test total in 1955 against England

ವೆಲ್ಲಿಂಗ್ಟನ್, ಮೇ 22: ನ್ಯೂಜಿಲೆಂಡ್ ಕ್ರಿಕೆಟ್‌ ತಂಡ ಈಗ ವಿಶ್ವದಲ್ಲೇ ಬಲಿಷ್ಠ ಕ್ರಿಕೆಟ್‌ ತಂಡ ಅನ್ನೋದರಲ್ಲಿ ಎರಡು ಮಾತಿಲ್ಲ. ಬ್ರೆಂಡನ್ ಮೆಕಲಮ್ ನಾಯಕತ್ವದಲ್ಲಿ ಬಲಗೊಳ್ಳುತ್ತ ಸಾಗಿದ ಕಿವೀಸ್, ಈಗ ಕೇನ್ ವಿಲಿಯಮ್ಸನ್ ಕ್ಯಾಪ್ಟನ್ಸಿ ಅಡಿಯಲ್ಲಿ ಇನ್ನಷ್ಟು ಶಕ್ತಿಶಾಲಿಯಾಗಿ ಹೊರಹೊಮ್ಮುತ್ತಿದೆ. ಕಳೆದ ಬಾರಿ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಜಿದ್ದಾಜಿದ್ದಿ ಸೆಣಸಾಟ ನಡೆಸಿ, ಪಂದ್ಯವನ್ನು ಎರಡೆರಡು ಬಾರಿ ಟೈ ಎನ್ನಿಸಿ ಕೊನೆಗೆ ದುರದೃಷ್ಟವಶಾತ್ ಬೌಂಡರಿ ಕೌಂಟ್ ಆಧಾರದಲ್ಲಿ ಕಿವೀಸ್ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟಿತ್ತು.

ಕ್ರಿಕೆಟ್‌ ಇತಿಹಾಸದಲ್ಲಿ ದಾಖಲಾಗಿರುವ ಟಾಪ್ 5 ವೇಗದ ಅರ್ಧ ಶತಕಗಳುಕ್ರಿಕೆಟ್‌ ಇತಿಹಾಸದಲ್ಲಿ ದಾಖಲಾಗಿರುವ ಟಾಪ್ 5 ವೇಗದ ಅರ್ಧ ಶತಕಗಳು

ಇಂಗ್ಲೆಂಡ್ ವಿರುದ್ಧ ಕಳೆದ ವರ್ಷ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಸೋತಿತ್ತಾದರೂ ಅದ್ಭುತ ಆಟಕ್ಕಾಗಿ ಕೇನ್ ವಿಲಿಯಮ್ಸ್ ಪಡೆ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿತ್ತು. ಆದರೆ 1955ರಲ್ಲಿ ಇದೇ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಟೆಸ್ಟ್ ಇತಿಹಾಸ ಕೆಟ್ಟ ದಾಖಲೆ ನಿರ್ಮಿಸಿತ್ತು.

'ಆತ'ನನ್ನು ಆರ್‌ಸಿಬಿಗೆ ಆರಿಸುವಂತೆ ಕೊಹ್ಲಿಗೆ ಹೇಳಿದ್ದೆ: ಪಾರ್ಥಿವ್ ಪಟೇಲ್'ಆತ'ನನ್ನು ಆರ್‌ಸಿಬಿಗೆ ಆರಿಸುವಂತೆ ಕೊಹ್ಲಿಗೆ ಹೇಳಿದ್ದೆ: ಪಾರ್ಥಿವ್ ಪಟೇಲ್

ಟೆಸ್ಟ್ ಕ್ರಿಕೆಟ್‌ನ ಅತೀ ಕನಿಷ್ಠ ಒಟ್ಟು ರನ್ ದಾಖಲೆ ಸೃಷ್ಟಿಗೆ ನ್ಯೂಜಿಲೆಂಡ್ ಆವತ್ತು ಕಾರಣವಾಗಿತ್ತು. ಆ ದಾಖಲೆ ಈಗಲೂ ಉಳಿದಿದೆ.

25 ವರ್ಷಗಳ ಹಿಂದಿನ ದಾಖಲೆ

25 ವರ್ಷಗಳ ಹಿಂದಿನ ದಾಖಲೆ

ನ್ಯೂಜಿಲೆಂಡ್ ರಾಷ್ಟ್ರೀಯ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಕನಿಷ್ಟ ಒಟ್ಟು ರನ್ ದಾಖಲಿಸಿದ್ದು 1995ರ ಮಾರ್ಚ್‌ನಲ್ಲಿ. ಅಂದರೆ ಸುಮಾರು 25 ವರ್ಷಗಳಿಗೆ ಹಿಂದೆ ಕಿವೀಸ್ ಈ ಕೆಟ್ಟ ದಾಖಲೆ ಬರೆದಿತ್ತು. ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್ ಅಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿತ್ತು. ಆಕ್ಲೆಂಡ್‌ನ ಈಡನ್ ಗಾರ್ಡನ್‌ನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್‌ನಲ್ಲಿ ಆತಿಥೇಯ ಕಿವೀಸ್ ಈ ರೀತಿ ಮುಖಭಂಗಕ್ಕೀಡಾಗಿತ್ತು.

ಟೆಸ್ಟ್ ಇತಿಹಾಸದ ಅತೀ ಕನಿಷ್ಟ ರನ್

ಟೆಸ್ಟ್ ಇತಿಹಾಸದ ಅತೀ ಕನಿಷ್ಟ ರನ್

ಆ ದಿನ ನ್ಯೂಜಿಲೆಂಡ್ ತಂಡ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 26 ರನ್ ಬಾರಿಸಿ ಶರಣಾಗಿತ್ತು. ಜೆಫ್ ರಾಬೊನ್ ನಾಯಕತ್ವದ ನ್ಯೂಜಿಲೆಂಡ್ ತಂಡದಲ್ಲಿ ಆವತ್ತು 5 ಮಂದಿ ಸೊನ್ನೆಗೆ ವಿಕೆಟ್ ಒಪ್ಪಿಸಿದ್ದರು. ಸ್ಕೋರ್‌ ಗಳಿದ್ದೆಂದರೆ ಬರ್ಟ್ ಸಟ್ಕ್ಲಿಫ್ (11), ಗಾರ್ಡನ್ ಲೆಗ್ಗಾಟ್ (1), ಜಾನ್ ರೀಡ್ (1), ನೋಯೆಲ್ ಮೆಕ್ಗ್ರೆಗರ್ (1), ಜೆಫ್ ರಾಬೊನ್ (7), ಹ್ಯಾರಿ ಗುಹೆ (5) ಮಾತ್ರ.

ಇತ್ತಂಡಗಳ ಸ್ಕೋರ್‌

ಇತ್ತಂಡಗಳ ಸ್ಕೋರ್‌

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಜಾನ್ ರೀಡ್ 73, ಬರ್ಟ್ ಸಟ್ಕ್ಲಿಫ್ 49 ರನ್‌ನೊಂದಿಗೆ 88.4 ಓವರ್‌ನಲ್ಲಿ 200 ರನ್ ಮಾಡಿತ್ತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 119.1 ಓವರ್‌ ಮುಕ್ತಾಯಕ್ಕೆ 246 ರನ್ ಮಾಡಿತ್ತು. ಸರ್ ಲಿಯೊನಾರ್ಡ್ ಹಟ್ಟನ್ 53, ಪೀಟರ್ ಮೇ 48 ರನ್ ಗಣನೀಯವೆನಿಸಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕಿವೀಸ್ ಕಲೆ ಹಾಕಿದ್ದು ಕೇವಲ 26 ರನ್ ಮಾತ್ರ.

ದಕ್ಷಿಣ ಆಫ್ರಿಕಾಕ್ಕೆ ದ್ವಿತೀಯ ಸ್ಥಾನ

ದಕ್ಷಿಣ ಆಫ್ರಿಕಾಕ್ಕೆ ದ್ವಿತೀಯ ಸ್ಥಾನ

ಆರಂಭಿಕ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ ಸೋಲನುಭವಿಸಿದ್ದ ನ್ಯೂಜಿಲೆಂಡ್, ದ್ವಿತೀಯ ಪಂದ್ಯದಲ್ಲೂ ಇನ್ನಿಂಗ್ಸ್‌ ಸಹಿತ 20 ರನ್ ಪರಾಭವಗೊಂಡಿತ್ತು. ಇದರೊಂದಿಗೆ ಟೆಸ್ಟ್ ಸರಣಿಯೂ 2-0ಯಿಂದ ಇಂಗ್ಲೆಂಡ್ ಪಾಲಾಗಿತ್ತು. ಅಂದ್ಹಾಗೆ ಟೆಸ್ಟ್‌ನಲ್ಲಿ ಅತೀ ಕಡಿಮೆ ಟೋಟಲ್ ರನ್ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ತಂಡವಿದೆ. ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 1896ರಲ್ಲಿ ಕೇವಲ 30 ರನ್ ಗಳಿಸಿತ್ತು.

Story first published: Friday, May 22, 2020, 16:42 [IST]
Other articles published on May 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X