ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂಡರ್ 19 ವಿಶ್ವಕಪ್: ಕ್ರೀಡಾಲೋಕದ ಹೃದಯ ಗೆದ್ದ ಕೀವಿಸ್ ಕಿರಿಯರ ಈ ವರ್ತನೆ ! ವೀಡಿಯೋ

New Zealand U-19 Win Hearts As Players Carry West Indies Batsman Off

ನ್ಯೂಜಿಲ್ಯಾಂಡ್ ತಂಡದ ವಿರುದ್ಧದ ಟಿ20 ಸರಣಿಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಪ್ರಶ್ನೆಯೊಂದು ಎದುರಾಗಿತ್ತು. ಅದು ವಿಶ್ವಕಪ್ ಸೋಲಿನ ಪ್ರತಿಕಾರದ ಬಗ್ಗೆ. ಅದಕ್ಕೆ ವಿರಾಟ್ ಕೊಹ್ಲಿ ನ್ಯೂಜಿಲ್ಯಾಂಡ್ ತಂಡದ ಆಟಗಾರರ ವರ್ತನೆ ನಿಮ್ಮಲ್ಲಿ ಪ್ರತಿಕಾರದ ಭಾವನೆಯನ್ನೇ ಮೂಡಿಸುವುದಿಲ್ಲಾ, ಅವರು ಉತ್ತಮ ವ್ಯಕ್ತಿತ್ವದ ಹುಡುಗರು ಎಂದು ಹೊಗಳಿದ್ದರು.

ನ್ಯೂಜಿಲ್ಯಾಂಡ್‌ನ ಹಿರಿಯರ ಬಗ್ಗೆ ಕೊಹ್ಲಿ ಹೀಗೆ ಹೊಗಳಿದ್ದರೆ ಈಗ ಅದೇ ನ್ಯೂಜಿಲ್ಯಾಂಡ್‌ನ ಕಿರಿಯರ ತಂಡ ಕ್ರೀಡಾ ಸ್ಪೂರ್ತಿಯ ವಿಷಯದಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟು ಕ್ರೀಡಾ ಲೋಕದ ಹೃದಯವನ್ನೇ ಗೆದ್ದಿದೆ. ಜನವರಿ 29 ರಂದು ಅಂಡರ್‌ 19 ವಿಶ್ವಕಪ್‌ನಲ್ಲಿ ನಡೆದ ಆ ಒಂದು ದೃಶ್ಯ ಕೀವಿಸ್ ಹುಡುಗರನ್ನು ಹೃದಯಕ್ಕೆ ಮತ್ತಷ್ಟು ಹತ್ತಿರವಾಗಿಸುತ್ತದೆ.

ಸೂಪರ್‌ ಓವರ್‌ನಲ್ಲಿದ್ದ ಕೆಟ್ಟ ದಾಖಲೆ ಕೊನೆಗೊಳಿಸಿದ ರೋಹಿತ್ ಶರ್ಮಾ!ಸೂಪರ್‌ ಓವರ್‌ನಲ್ಲಿದ್ದ ಕೆಟ್ಟ ದಾಖಲೆ ಕೊನೆಗೊಳಿಸಿದ ರೋಹಿತ್ ಶರ್ಮಾ!

ಅದು ಅಂಡರ್ 19 ವಿಶ್ವಕಪ್‌ನ ನ್ಯೂಜಿಲ್ಯಾಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯ. ವೆಸ್ಟ್‌ ಇಂಡೀಸ್ ಕಿರಿಯರ ತಂಡ 48ನೇ ಓವರ್‌ನಲ್ಲಿ ಆಲ್‌ಔಟ್‌ ಆಯ್ತು. ವೆಸ್ಟ್‌ ಇಂಡೀಸ್‌ನ ಕಿರ್ಕ್ ಮ್ಯಾಖೆನ್ಝಿ 99 ರನ್‌ಗಳಿಸಿ ಕೊನೆಯದಾಗಿ ಔಟಾಗಿ ಫೆವಿಲಿಯನ್ ಕಡೆಗೆ ನಡೆಯಲಾರಂಭಿಸಿದರು. ಆದರೆ ಗಾಯಗೊಂಡಿದ್ದ ಕಾರಣ ಕಿರ್ಕ್ ಮ್ಯಾಖೆನ್ಝಿ ಫೆವಿಲಿಯನ್ ಕಡೆಗೆ ನಡೆಯಲು ಸಾಧ್ಯವಾಗದೆ ಕುಂಟುತ್ತಿದ್ದರು.

ಕಿರ್ಕ್ ಮ್ಯಾಖೆನ್ಝಿ ಕುಂಟುತ್ತಾ ಕಷ್ಟ ಪಡುತ್ತಿರುವುದನ್ನು ಗಮನಿಸಿದ ನ್ಯೂಜಿಲ್ಯಾಂಡ್‌ನ ಕಿರಿಯರು ಮ್ಯಾಖೆನ್ಝಿಯನ್ನ ಹೊತ್ತೊಯ್ಯಲು ನಿರ್ಧರಿಸಿ ಬೌಂಡರಿ ಲೈನ್‌ನ ಆಚೆಯವರೆಗೀ ಹೊತ್ತುಕೊಂಡೇ ಸಾಗಿದರು. ಮೈದಾನದಲ್ಲಿ ಕೀವಿಸ್ ಕಿರಿಯರ ಕ್ರೀಡಾ ಸ್ಪೂರ್ತಿ ಇಡೀ ಕ್ರೀಡಾ ಲೋಕದ ಗಮನ ಸೆಳೆಯಿತು.

ರೋಹಿತ್ ಲಾಸ್ಟ್‌ಬಾಲ್‌ಗೆ 6 ಹೊಡೆದ್ರೂ ಗೆಲುವಿನ ಕ್ರೆಡಿಟ್ ಕೊಟ್ಟಿದ್ದು ಯಾರಿಗೆ!

ಕ್ರಿಕೆಟ್ ವಲ್ಡ್‌ಕಪ್ ನ ಅಧಿಕೃತ ಟ್ವಿಟರ್ ಪೇಜ್‌ನಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು ಟೀಮ್ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ, ನ್ಯೂಜಿಲ್ಯಾಂಡ್‌ನ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕ್‌ಕಲಮ್ ಸೇರಿದಂತೆ ಅನೇಕ ಕ್ರಿಕೆಟಿಗರು ರಿಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Story first published: Thursday, January 30, 2020, 17:58 [IST]
Other articles published on Jan 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X