ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎರಡನೇ ಟೆಸ್ಟ್‌ನಲ್ಲೂ ಟೀಮ್ ಇಂಡಿಯಾಗೆ ಸೋಲು: ಮತ್ತೆ ಕ್ಲೀನ್‌ಸ್ವೀಪ್ ಮುಖಭಂಗ

New Zealand vs India 2nd Test: New Zealand Beat India
India Vs Newzealand : India yet again face another clean sweep | Virat Kohli | Kane Willaimson

ಕ್ರೈಸ್ಟ್‌ಚರ್ಚ್‌: ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್್ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲೂ ಟೀಮ್ ಇಂಡಿಯ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ನ್ಯೂಜಿಲೆಂಡ್ ತಂಡಕ್ಕೆ ಟೀಮ್ ಇಂಡಿಯಾ 7 ವಿಕೆಟ್‌ಗಳ ಅಂತರದಲ್ಲಿ ಶರಣಾಗಿದೆ. ಈ ಮೂಲಕ ಎರಡು ಟೆಸ್ಟ್‌ಪಂದ್ಯಗಳ ಸರಣಿಯಲ್ಲಿ 0-2 ಅಂತರದಲ್ಲಿ ನ್ಯೂಜಿಲೆಂಡ್‌ಗೆ ಟೆಸ್ಟ್‌ ಸರಣಿಯನ್ನು ಬಿಟ್ಟುಕೊಟ್ಟಿದೆ.

ಕೇವಲ ಮೂರೇ ದಿನದಲ್ಲಿ ಮುಕ್ತಾಯವಾದ ಎರಡನೇ ಟೆಸ್ಟ್‌ ಪಂದ್ಯದಲ್ಲೂ ಟೀಮ್ ಇಡಿಯಾದ ಬ್ಯಾಟಿಂಗ್ ಪಡೆ ಸಂಪೂರ್ಣ ವೈಫಲ್ಯವನ್ನು ಅನುಭವಿಸಿತು. ಟೀಮ್ ಇಂಟಿಯಾ ನಾಯಕ ಸೇರಿದಂತೆ ಯಾವ ಬ್ಯಾಟ್ಸ್‌ಮನ್‌ಕೂಡ ಕಿವೀಸ್ ಬೌಲಿಂಗ್ ಪಡೆಯನ್ನು ಮಟ್ಟಹಾಕಲು ಸಾಧ್ಯವಾಗಲೇ ಇಲ್ಲ.

9, 2, 19, 3, 14 : ಏನಾಯ್ತು 'ರನ್ ಮಷಿನ್' ವಿರಾಟ್ ಕೊಹ್ಲಿ!9, 2, 19, 3, 14 : ಏನಾಯ್ತು 'ರನ್ ಮಷಿನ್' ವಿರಾಟ್ ಕೊಹ್ಲಿ!

ಭರ್ಜರಿ ಬೌಲಿಂಗ್ ಪ್ರದರ್ಶನದಿಂದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 7 ರನ್‌ಗಳ ಅಲ್ಪ ಮುನ್ನಡೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಎರಡನೆವ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಪಡೆ ಮತ್ತೆ ತನ್ನ ಕಳಪೆ ಪ್ರದರ್ಶನವನ್ನು ತೋರಿಸಿ ಸೋಲುವ ಮುನ್ಸೂಚನೆ ನೀಡಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 124 ರನ್ ಗಳಿಸಿ ಟೀಮ್ ಇಂಡಿಯಾ ಆಲೌಟ್‌ ಆಯಿತು.

ಹೀಗಾಗಿ ನ್ಯೂಜಿಲೆಂಡ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಪಂದ್ಯವನ್ನು ಗೆಲ್ಲಲು 132ರನ್‌ಗಳ ಸುಲಭ ಗುರಿಯನ್ನು ಪಡೆದುಕೊಂಡಿತು. ಈ ಗುರಿಯನ್ನು ನ್ಯೂಜಿಲರಂಡ್ ಪಡೆ ಸುಲಭವಾಯಿ ತಲುಪಿ ಗೆಲುವನ್ನು ಸಂಭ್ರಮಿಸಿದೆ. ಈ ಮೂಲಕ ಏಕದಿನದ ಬಳಿಕ ಟೆಸ್ಟ್ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿ ಗೆದ್ದು ಬೀಗಿದೆ.

ಅದ್ಭುತ ಕ್ಯಾಚ್ ಮೂಲಕ ಜಡೇಜಾ ಮಿಂಚು: ವಿಡಿಯೋಅದ್ಭುತ ಕ್ಯಾಚ್ ಮೂಲಕ ಜಡೇಜಾ ಮಿಂಚು: ವಿಡಿಯೋ

ಎರಡನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ಬ ಇಬ್ಬರು ಆರಂಭಿಕ ಆಟಗಾರರು ಅದ್ಭುತವಾಗಿ ಆಟವನ್ನು ಪ್ರದರ್ಶಿಸಿ ತಲಾ ಅರ್ಧಶತಕವನ್ನು ಬಾರಿಸಿದರು. ಅಂತಿಮವಾಗಿ ನ್ಯೂಜಿಲೆಂಡ್ ತಂಡ ಟೀಮ್ ಇಂಡಿಯಾ ನೀಡಿದ ಗುರಿಯನ್ನು ಮೂರು ವಿಕೆಟ್ ಕಳೆದುಕೊಂಡು ತಲುಪುವಲ್ಲಿ ಯಶಸ್ವಿಯಾಯಿತು.

Story first published: Monday, March 2, 2020, 8:58 [IST]
Other articles published on Mar 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X